Blackmail: ಪ್ರಿಯಕರನ ಕಿರುಕುಳಕ್ಕೆ ನೇಣಿಗೆ ಶರಣಾದ ವಿವಾಹಿತ ಮಹಿಳೆ;

ಹಾಸನ : ಈಗಿನ ಆಧುನಿಕ ಯುಗದಲ್ಲಿ ಅಕ್ರಮ ಸಂಬಂಧಗಳ ಪ್ರಕರಣಗಳು ಜಾಸ್ತಿಯಾಗುತ್ತಾ ಇವೆ. ಮದುವೆಯಾಗಿ ಮಕ್ಕಳಿದ್ದರು ಪರ ಪುರುಷರ ಸಂಘ ಅಥವಾ ಪರ ಮಹಿಳೆಯರ ಸಂಘದಿಂದಾಗಿ ತಮ್ಮ ಸುಂದರ ಕೌಟುಂಬಿಕ ಜೀವನವನ್ನುಹಾಳಮಾಡಿಕೊಳ್ಳುತ್ತಿದ್ದಾರೆ. ಇದೆ ರೀತಿ ಹಾಸನದಲ್ಲೊಂದು ಪ್ರಕರಣ ನಿನ್ನೆ ಬಯಲಿಗೆ ಬಂದಿದೆ. ಅಕ್ರಮ ಸಂಭಂದಕ್ಕೆ ಹಿನ್ನೆಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಾಸನದ ರಾಜಕುಮಾರ್ ಬಡಾವಣೆಯಲ್ಲಿ ಘಟನೆ ನಡೆದಿದ್ದು , ಕಳೆದ ಹನ್ನೆರಡು ವರ್ಷಗಳ ಹಿಂದೆ ಇರ್ಫಾನ್ ಎಂಬುವವರನ್ನು ಮದುವೆಯಾಗಿದ್ದ ಶಬಮನ್ ಸುಲ್ತಾನ್(30) ಎನ್ನುವವರನ್ನು ಮದುವೆಯಾಗಿ ಮಕ್ಕಳೊಂದಿಗೆ ವಾಸವಾಗಿದ್ದ ಶಬ್ಮನ್ ಸುಲ್ತಾನ್ ಎನ್ನುವ ವಿವಾಹಿತೆ ಹಲವಾರು ತಿಂಗಳುಗಳಿಂದ ಇಸ್ಮಾಯಿಲ್  ಎಂಬುವವನ ಜೊತೆ ಸ್ನೇಹ ಬೆಳೆಸಿದ್ದಳು. ಸ್ನೇಹ ಪ್ರೇಮಕ್ಕೆ ತಿರುಗಿ ಎರಡು ತಿಂಗಳ ಹಿಂದೆ ಇಸ್ಮಾಯಿಲ್ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು ಎಂದು ಪತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಿಯಕರ ಇಸ್ಮಾಯಿಲ್ ಜೊತೆ ಮನೆಬಿಟ್ಟು ಹೋಗಿದ್ದ ಶಬ್ಮನ್ ಸುಲ್ತಾನ್ ನನ್ನು ಹಿರಿಯರ ಸಮ್ಮುಖದಲ್ಲಿ ರಾಜಿ ಮಾಡಿಸಿ ಗಂಡನ ಮನೆಗೆ ವಾಪಸ್ ಕಳಿಸಿದ್ದರು. ಮನಸ್ಸು ಬದಲಾಯಿಸಿದ ಶಬ್ಮನ್ ಪತಿ ಮಕ್ಕಳೊಂದಿಗೆ ಇದ್ದಳು . ಆದರ ಪ್ರಿಯಕರ ಇಸ್ಮಾಯಿಲ್ ತನ್ನೊಟ್ಟಿಗೆ ಅಕ್ರಮ ಸಂಬಂಧ ಹೊಂದುವಂತೆ ಕಿರಿಕುಳ ನೀಡುತ್ತಿದ್ದನು . ಒಂದು ವೇಳೆ ಒಪ್ಪದಿದ್ದಲ್ಲಿ ತಮ್ಮಿಬ್ಬರ ಖಾಸಗಿ ಫೋಟೋ, ವೀಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆದರಿಕೆ ಮತ್ತು ಕಿರುಕುಳಕ್ಕೆ  ಮನನೊಂದು  ಶಬ್ಮನ್ ಸುಲ್ತಾನ್ ಮನೆಮಂದಿಯೆಲ್ಲಾ ನಮಾಜ್ ಗೆ ತೆರಳಿರುವ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಈ ಘಟನೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಕಿ ಹಣ ಪಾವತಿ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ; ಡಿ.ಕೆಂಪಣ್ಣ

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡದ ಇಬ್ಬರು

Bigg Boss : ಬಿಗ್ ಬಾಸ್ ಗೆ ಬರ್ತಾರಾ ಡಾಕ್ಟರ್ ಬ್ರೋ ..?

About The Author