- Advertisement -
ಹಾಸನ: ಹಾಸನದಲ್ಲಿ ಕಾಡಾನೆ ಹಾವಳಿ ಯಾವಾಗಲೂ ಇದ್ದಿದ್ದೆ, ಇನ್ನು ಸಕಲೇಶಪುರದ ರಸ್ತೆ ತಿರುವಿನಲ್ಲಿ ಒಂಟಿ ಸಲಗವೊಂದು ನಿಂತಿತ್ತು. ಅದೇ ಮಾರ್ಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದ ಯುವಕ ಆನೆ ನೋಡಿ ಗಾಬರಿಯಿಂದ ವಾಹನ ಬಿಟ್ಟು ಓಡಿ ಹೋಗಿದ್ದಾನೆ. ಸಕಲೇಶಪುರ ತಾಲ್ಲೂಕಿನ, ಹಲಸುಲಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ರಸ್ತೆಯ ತಿರುವಿನಲ್ಲಿ ನಿಂತಿದ್ದ ಆನೆ ಯುವಕನ ಕಡೆ ನುಗ್ಗಿದ್ದರಿಂದ, ವಾಹನ ಅಲ್ಲೆ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಯುವಕ ಪಾರಾಗಿದ್ದು, ಕಾಡಾನೆ ಮತ್ತು ಯುವಕನ ವಿಡಿಯೋ ವೈರಲ್ ಆಗಿದೆ.
ಮಂಡ್ಯಕ್ಕೆ ಆಗಮಿಸಲಿರುವ ಪಂಚರತ್ನ ರಥಯಾತ್ರೆ
- Advertisement -