ಹಾಸನ: ಬೇಲೂರು ತಾಲೂಕಿನ ಇಬ್ಬೀಡು ಗ್ರಾಮಪಂಚಾಯತಿಯಲ್ಲಿ ಸರ್ವಾಧಿಕಾರಿ ಧೋರಣೆ ಖಂಡಿಸಿ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆ ರದ್ದಾಗಿದೆ. ಇದರಿಂದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬೀಡು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷ ಮಂಜುನಾಥ್ ಅವರ ಅಧ್ಯಕ್ಷ ತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ೧೪ಜನ ಸದಸ್ಯರುಳ್ಳ ಈ ಸಭೆಯಲ್ಲಿ ಕೇವಲ ೪ ಜನ ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದು ಕೋರಮ್ ಇಲ್ಲದೆ ಸಭೆಯನ್ನು ರದ್ದುಮಾಡಲಾಯಿತು.
ಗ್ರಾಮಪಂಚಾಯತಿ ಸದಸ್ಯ ಚಿಲ್ಕೂರು ಗ್ರಾಮದ ಸಚಿನ್ ಮಾತನಾಡಿ, ಈಗಾಗಲೇ ಸಾಮಾನ್ಯ ಸಭೆಯನ್ನು ೭ ದಿನಗಳ ಮುಂಚಿತವಾಗಿ ಸಭೆ ನಡೆಯಲಿದೆ ಎಂದು ನಮ್ಮ ಅಭಿವೃದ್ಧಿ ಅಧಿಕಾರಿಗಳು ಎಲ್ಲಾ ಸದಸ್ಯರಿಗೆ ಲಿಖಿತ ರೂಪದಲ್ಲಿ ಹಾಗೂ ದೂರವಾಣಿ ಮೂಲಕ ತಿಳಿಸಿದ್ದರು. ಆದರೆ ಇಲ್ಲಿಯ ಅಧ್ಯಕ್ಷರ ಬೇಜವಬ್ದಾರಿತನ ಎಲ್ಲಾ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ವೈಯಕ್ತಿಕ ನಿರ್ಧಾರಗಳಿಗೆ ಬೇಸತ್ತು ೧೦ ಜನ ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದೇವೆ. ಅಲ್ಲದೆ ಈ ಹಿಂದೆ ಎರಡು ಬಾರಿಯೂ ಸಹ ಇದೇ ರೀತಿ ಕೋರಮ್ ಇಲ್ಲದೆ ಸಭೆ ರದ್ದಾಗಿತ್ತು ಎಂದು ತಿಳಿಸಿದರು.
ರಾಜ್ಯದಲ್ಲಿ ಜನತಾದಳ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ : ಹೆಚ್.ಡಿ..ಕುಮಾರಸ್ವಾಮಿ
ಅಧಿಕಾರಿಗಳ ಸಮ್ಮುಖದಲ್ಲಿ ಸದಸ್ಯರನ್ನು ಕರೆದು ಒಮ್ಮತದ ಮೇರೆಗೆ ಒಂದು ಬಾರಿ ಮಾತ್ರ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಮೂಲಕ ನಮ್ಮ ಗ್ರಾಮಗಳ ಅಭಿವೃದ್ಧಿ ಗೆ ಮುಂದಾಗಿದ್ದೆವು ಅದರಲ್ಲಿ ಮುಖ್ಯವಾಗಿ ಕೆರೆ ಹರಾಜು,ಗ್ರಾಮಸಭೆ ನಡೆಸುವುದು ಹಲವಾರು ಕ್ರಿಯಾಯೋಜನೆಗಳನ್ನು ತಯಾರು ಮಾಡಲು ಚರ್ಚಿಸಲು ಸಭೆ ಕರೆಯಲಾಗಿತ್ತು. ಆದರೆ ಈ ಅಧ್ಯಕ್ಷರ ನಡುವಳಿಕೆಯಿಂದ ಬೇಸತ್ತು ಯಾವ ಸದಸ್ಯರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಇದರಿಂದ ಬೇಸತ್ತು ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ. ಕೇವಲ ಅಧ್ಯಕ್ಷತನಕ್ಕೆ ಮಾತ್ರ ಆಸೆಪಟ್ಟು ಗ್ರಾಮಗಳ ಅಭಿವೃದ್ಧಿ ಗೆ ಇದುವರೆಗೂ ಕೈಜೋಡಿಸಿಲ್ಲ. ಇದು ನನ್ನದೇ ಅಧಿಕಾರ ನನ್ನ ಮಾತೇ ಸುಪ್ರೀಮ್ ಎಂದು ಉದ್ಧಟತನ ತೋರುತ್ತಿದ್ದಾರೆ ಎಂದರಲ್ಲದೆ ಇದರಿಂದ ನಮ್ಮ ಗ್ರಾಮಗಳ ಅಭಿವೃದ್ಧಿ ಸಾಧ್ಯ ವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ಹೇಳಿಕೆಗೆ ಹೆಚ್ ಡಿಕೆ ತಿರುಗೇಟು
ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ಸರಸ್ವತಿ ಮಾತನಾಡಿ, ಈಗಾಗಲೇ ಅಧ್ಯಕ್ಷರ ಸೂಚನೆಯಂತೆ ಎಲ್ಲಾ ಸದಸ್ಯರಿಗೆ ನಾವು ೭ ದಿನಗಳ ಮುಂಚಿತವಾಗಿ ಸಭೆಯ ನೊಟೀಸ್ ನೀಡಿದ್ದೇವೆ. ಸಮಯ ೧೧ ಗಂಟೆಗೆ ಸಭೆ ಪ್ರಾರಂಭವಾಗಬೇಕಿತ್ತು ಆದರೆ ೧೨ ಗಂಟೆಯಾದರೂ ಸಭೆ ನಡೆಯದೆ ಕೊರಂ ಇಲ್ಲದೆ ಸಭೆ ರದ್ದುಪಡಿಸಲಾಗಿದೆ. ೫ ತಿಂಗಳಲ್ಲಿ ನಾಲ್ಕು ಸಭೆ ಕರೆಯಲಾಗಿದ್ದು ಕೇವಲ ಒಂದು ಸಭೆ ನಡೆದಿದ್ದು ಉಳಿದವು ರದ್ದಾಗಿದೆ.ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅಲ್ಲದೆ ಇಲ್ಲಿಯ ಅಧ್ಯಕ್ಷರು ನಮ್ಮ ನೌಕರರ ಮೇಲೆ ಹಾಗೂ ಸಿಬ್ಬಂದಿಗಳ ಮೇಲೆನಿರಂತರವಾಗಿ ಮಾನಸಿಕ ಕಿರುಕುಳ ನೀಡುವುದರ ಜೊತೆಗೆ ಎಲ್ಲರಿಗೂ ಏಕವಚನದಲ್ಲಿ ನಿಂದಿಸುತ್ತಿದ್ದಾರೆ. ಇದರಿಂದ ಬೇಸತ್ತು ನಾವುಗಳು ಇಲ್ಲಿಯ ಎಲ್ಲಾ ಸದಸ್ಯರಿಗೆ ದೂರು ನೀಡಿದ್ದು ಅಲ್ಲದೆ ಸಭೆಯ ಅಜೆಂಡಾವನ್ನು ಅವರ ಬಳಿ ಇಟ್ಟುಕೊಂಡು ನಮ್ಮಗಳ ಮೇಲೆ ದಬ್ಬಾಳಿಕೆನಡೆಸುತ್ತಿದ್ದಾರೆ.ಈ ಬಗ್ಗೆ ನಾವು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ತಿಳಿಸಿದರು. ಅಧ್ಯಕ್ಷ ಮಂಜುನಾಥ್ ಮಾತನಾಡಿ ಸಾಮಾನ್ಯ ಸಭೆ ಕರೆದಿದ್ದೆವು ಕೆಲವು ಸದಸ್ಯರ ವೈಯಕ್ತಿಕ ವಿಚಾರಕ್ಕೆ ಸಭೆ ರದ್ದಾಗಿದೆ. ಗ್ರಾಮದ ಅಭಿವೃದ್ಧಿ ಗೆ ನಾವು ಕೈಜೋಡಿಸಲಿದ್ದು ಇನ್ನೊಂದಯ ವಾರದಲ್ಲಿ ಸಭೆ ಕರೆಯುತ್ತೇವೆ ಎಂದರು.
ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಡಿ. 22 ರಿಂದ ಕೇರಳಕ್ಕೆ 51 ರೈಲುಗಳ ಸಂಚಾರ