Tuesday, September 16, 2025

Latest Posts

ಬೇಲೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ

- Advertisement -

ಹಾಸನ: ಬೇಲೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಶ್ರೀನಿಧಿ ಮಾತನಾಡಿದರು. ಶಾಸಕರಿಂದ ಪಟ್ಟಣದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುತ್ತದೆ. ಶಾಸಕ ಕೆ. ಎಸ್. ಲಿಂಗೇಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಪುರಸಭಾ ಸದಸ್ಯರು ನ. 16 ಮತ್ತು 17 ರಂದು ಪಟ್ಟಣದ 23 ವಾರ್ಡ್ ಗಳಲ್ಲಿ ಪಾದಯಾತ್ರೆ ನಡೆಸಲಿದ್ದು, ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ಜೊತೆಗೆ ಜನರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಮಾಜಿ ಪುರಸಭಾ ಅಧ್ಯಕ್ಷ ಟಿ ಎ ಶ್ರೀನಿಧಿ ಹೇಳಿದರು.

ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ

ಶಾಸಕ ಲಿಂಗೇಶ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಬೇಲೂರು ಪಟ್ಟಣದ ಅಭಿವೃದ್ಧಿಗೆ ಅರವತ್ತು ಕೋಟಿಗೂ ಹೆಚ್ಚು ಅನುದಾನವನ್ನು ನೀಡಿರುತ್ತಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಸಹ ಶಾಸಕರ ಪರಿಶ್ರಮ ಹಾಗೂ ಸಂಸದರ ಎಂಎಲ್ಸಿಗಳ ಸಹಕಾರದಿಂದ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದೆ. ಪಟ್ಟಣದಲ್ಲಿ ನಗರ ತಾಣ ಯೋಜನೆ ಅಡಿ 10 ಕೋಟಿಗೂ ಹೆಚ್ಚು ಕಾಮಗಾರಿಗಳು ಆರಂಭಗೊಳ್ಳಲಿದೆ. ಇದೇ ನ. 16 ಮತ್ತು 17 ರಂದು ಪಟ್ಟಣದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಮುಂದೆ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ನಗರ ಪ್ರದಕ್ಷಿಣೆ ನಡೆಸಲಿದ್ದು ನಿವಾಸಿಗಳ ಮನೆಬಾಗಿಲಿಗೆ ತೆರಳಿ ಅಹವಾಲು ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಪುರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಇರುತ್ತಾರೆ ಎಂದರು.

ಮುಂದುವರೆದ ಬಿಜೆಪಿ ಕೆಪಿಸಿಸಿ ಟ್ವೀಟ್ ವಾರ್

ಜೆಡಿಎಸ್ ಪಕ್ಷವು ತಾಲೂಕಿನಲ್ಲಿ ಸಂಘಟನೆಯಲ್ಲಿ ಹಿಂದೆ ಉಳಿದಿಲ್ಲ. ಜೆಡಿಎಸ್ ಪಕ್ಷದಿಂದ ಕೆಎಸ್ ಲಿಂಗೇಶ್ ಒಬ್ಬರೇ ಅಭ್ಯರ್ಥಿಯಾಗಲಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇದುವರೆಗೂ ಇಂತಹವರೇ ಎಂದು ಸೂಕ್ತ ವ್ಯಕ್ತಿಯನ್ನು ಸೂಚಿಸಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಮತದಾರರನ್ನು ಸೆಳೆಯಲು ಸೀರೆ ಹಾಗೂ ಇತರೆ ಆಮಿಷಗಳನ್ನು ತೋರಿಸುತ್ತಿದ್ದಾರೆ. ಆದರೆ ಜೆಡಿಎಸ್ ಪಕ್ಷಕ್ಕೆ ಇನ್ನೂ ಅಂತಹ ದುರ್ಗತಿ ಬಂದಿಲ್ಲ. ನಮಗೆ ನಮ್ಮ ಶಾಸಕರು ಮಾಡಿರುವ ಅಭಿವೃದ್ಧಿ ಕೆಲಸಗಳೇ ಶ್ರೀ ರಕ್ಷೆ ಆಗಲಿದೆ ಎಂದರು.

ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣ : ಸುಮಾರು 12 ಕರವೇ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು

ಪುರಸಭಾ ಸದಸ್ಯ ಜಗದೀಶ್ ಮಾತನಾಡಿ ಪುರಸಭಾ ಕಚೇರಿಯು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಾಗಿ ಮಾರ್ಪಟ್ಟಿದೆ. ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಅಲ್ಲದೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕೇವಲ ಕಾಂಗ್ರೆಸ್ ನಾಯಕರೇ ಕಾರಣ ಎಂದು ಸುಳ್ಳು ಮಾಹಿತಿಯನ್ನು ಜನರಿಗೆ ತಲುಪಿಸುತ್ತಾ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಪುರಸಭೆಯ ಸಮಗ್ರ ಅಭಿವೃದ್ಧಿಗೆ ಶಾಸಕರು 60 ಕೋಟಿಗೆ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿಪಡಿಸಿದ್ದಾರೆ. ಪುರಸಭೆಯಲ್ಲಿ ಕಾಂಗ್ರೆಸ್ ನಾಯಕರ ಬರ್ತಡೇ ಆಚರಣೆಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಗಳನ್ನು ನಡೆಸಲು ಕಾರ್ಯಕ್ರಮಗಳನ್ನು ರೂಪಿಸಲು ಮಾತ್ರ ಮೀಸಲಾಗಿರುವುದೆ.ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಗೊಂದಲದಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ವಿನಹ ಸ್ವಂತ ಶಕ್ತಿಯಿಂದಲ್ಲ ಕಾಂಗ್ರೆಸ್ ಹಾಗೂ ಬಿಜೆಪಿಯ ಒಳ ಜಗಳಗಳಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಲಾಭವಾಗಲಿದೆ ಎಂದರು . ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಪುಟ್ಟಸ್ವಾಮಿ , ಶ್ರೀನಿವಾಸ್ ಹಾಗೂ ನಗರಾಧ್ಯಕ್ಷ ಮೋಹನ್ ಕುಮಾರ್ ಹಾಜರಿದ್ದರು.

ಬಿಜೆಪಿ ನಾಯಕರಿಗೆ ಟ್ವೀಟ್ ಮೂಲಕ ಕೆಪಿಸಿಸಿ ತಿರುಗೇಟು

ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭ

- Advertisement -

Latest Posts

Don't Miss