Saturday, July 27, 2024

Latest Posts

ಖರ್ಬೂಜ ಸೇವಿಸಿ, ಅರೋಗ್ಯ ಸಮಸ್ಯೆ ಹೋಗಲಾಡಿಸಿ.!

- Advertisement -

ಬೇಸಿಗೆಯಲ್ಲಿ ಖರ್ಬೂಜದ ಜ್ಯೂಸ್‌ಹಣ್ಣನ್ನ ಸೇವಿಸುವು ಅಥವಾ ಇದರ ಪಾನಕ ಕುಡಿಯವು ಎಲ್ಲರಿಗೂ ಖುಷಿ ತರುವ ವಿಷಯ. ಅದಷ್ಟೇ ಅಲ್ಲದೆ ಬಾಯಾರಿಕೆ ತಣಿಸುವಂತೆ ಖರ್ಬೂಜ ಹಣ್ಣು ಔಷಧಿ ಆಗಿಯೂ ಸಹ ಉಪಯುಕ್ತವಿದೆ. ಇದು ಸಾಕಷ್ಟು ಜನಕ್ಕ ತಿಳಿದಿರುವುದಿಲ್ಲ.

ಖರ್ಬೂಜ ಹಣ್ಣಿನಲ್ಲಿ ನೀರಿನಂಶವಿದ್ದು, ಇದು ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಹಾಗಾಗಿ ಖರ್ಬೂಜ ಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಖರ್ಬೂಜ ಹಣ್ಣಿನಲ್ಲಿ ಬರಿ ನೀರಿನಂಶ ಅಷ್ಟೇ ಅಲ್ಲ ಜೊತೆಗೆ ಈ ಹಣ್ಣು ತಂಪು ಮತ್ತು ಶಮನಕಾರಿ ಗುಣವನ್ನು ಕೂಡ ಹೊಂದಿದೆ. ಇದು ಎದೆ ಉರಿಯನ್ನು ಕಡಿಮೆ ಮಾಡುತ್ತದೆ.

ಖರ್ಬೂಜ ಬೇಸಿಗೆಯ ಹಣ್ಣು, ಇದರಲ್ಲಿ ಅನೇಕ ಪ್ರಯೋಜನಗಳಿವೆ. ಖರ್ಬೂಜ ಹಣ್ಣು ಮೆದುಳಿಗೆ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ, ಇದನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಅಲ್ಲದೆ, ಇದರಲ್ಲಿರುವ ನೀರಿನ ಅಂಶವು ದೇಹವನ್ನು ಶಾಂತವಾಗಿ ಮತ್ತು ಸಂಯೋಜನೆಯಲ್ಲಿಡುತ್ತದೆ.

ದಿನದಲ್ಲಿ ಒಂದು ಬಾರಿ ಖರ್ಬೂಜದ ಜ್ಯೂಸ್‌ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಿದ್ರೆ ಖರ್ಬೂಜ ಜ್ಯೂಸ್‌ ತಯಾರಿಸುವುದು ಹೇಗೆ, ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಖರ್ಬೂಜದ ತಿರುಳನ್ನು ತೆಗೆದು ಮಿಕ್ಸಿಗೆ ಹಾಕಿ ಜ್ಯೂಸ್‌ ಮಾಡಿ, ಅದಕ್ಕೆ 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು 60 ನಿಮಿಷಗಳ ಕಾಲ ಫ್ರೀಜರ್‌ನಲ್ಲಿ ಇರಿಸಿ. ನಂತರ ಕುಡಿಯಿರಿ. ಇದು ದೇಹಕ್ಕೆ ತಂಪನ್ನು ನೀಡುತ್ತೆ ಹಾಗೂ ಆರೋಗ್ಯಕ್ಕೂ ಕೂಡ ಉತ್ತಮ.

ಪ್ರಾಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

- Advertisement -

Latest Posts

Don't Miss