Sunday, December 1, 2024

Latest Posts

ಮಾರ್ಕೆಟ್​​​​​ಗೆ ಚೀನಾ ಬೆಳ್ಳುಳ್ಳಿ! – ಇಡೀ ಕರ್ನಾಟಕಕ್ಕೆ ಗಂಡಾಂತರ!

- Advertisement -

ಚೀನಾ ಅಂದ್ರೆನೇ ಕಲಬೆರಕೆ.. ಚೀನಾದ ಯಾವುದೇ ವಸ್ತುಗಳನ್ನ ಖರೀದಿಸಿದ್ರೆ ಅದಕ್ಕೆ ಯಾವುದೇ ಗ್ಯಾರಂಟಿಯೂ ಇರಲ್ಲ.. ಚೀನಾದಿಂದ ಬಂದ ಆಹಾರ ವಸ್ತುಗಳನ್ನ ತಿಂದ್ರೆ ನಿಮ್ಮ ಜೀವಕ್ಕೂ ಗ್ಯಾರಂಟಿ ಇರಲ್ಲ.. ಇಷ್ಟು ದಿನ ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಸಕ್ಕರೆ ಬರ್ತಿತ್ತು.. ಈಗ ಚೀನಾದಿಂದ ಕರ್ನಾಟಕಕ್ಕೆ ಬೆಳ್ಳುಳ್ಳಿ ಬಂದಿದೆ.. ಇದನ್ನ ತಿಂದ್ರೆ ಅಪ್ಪಿತಪ್ಪಿಯೂ ನೀವ್ ಬದುಕೋಕೆ ಚಾನ್ಸೇ ಇಲ್ಲ.. ಈ ಚೀನಾ ಬೆಳ್ಳುಳ್ಳಿ ನಿಮ್ ಮನೇಲೂ ಇರಬಹುದು.. ಇದನ್ನ ಕಂಡು ಹಿಡಿಯೋದು ಹೇಗೆ? ಏನಿದು ಚೀನಾ ಬೆಳ್ಳುಳ್ಳಿ ರಹಸ್ಯ ಹೇಳ್ತೀವಿ ನೋಡಿ..

ಚೀನಾದ ಬೆಳ್ಳುಳ್ಳಿಗೆ ಭಾರತದ ಮಾರ್ಕೆಟ್​​ನಲ್ಲಿ ನಿರ್ಬಂಧ ಇದೆ.. ಆದ್ರೂ ಕಳ್ಳಮಾರ್ಗದ ಮೂಲಕ ಈ ಬೆಳ್ಳುಳ್ಳಿ ಕರ್ನಾಟಕಕ್ಕೆ ಬಂದುಬಿಟ್ಟಿದೆ. ಸಾಮಾನ್ಯವಾಗಿ ನಾಟಿ ಹಾಗೂ ದೇಸೀ ಬೆಳ್ಳುಳ್ಳಿಗೆ 1 ಕೆಜಿಗೆ ಸುಮಾರು 250ರೂಪಾಯಿಯಿಂದ 400ವರೆಗೂ ಮಾರಾಟವಾಗುತ್ತೆ.. ಆದ್ರೆ ಚೀನಾದಿಂದ ಬಂದಿರೋ ಈ ಬೆಳ್ಳುಳ್ಳಿ ಬೆಲೆ 1 ಕೆಜಿಗೆ ಕೇವಲ 80 ರೂಪಾಯಿ.. ಇದೇ ಬೆಳ್ಳುಳ್ಳಿಯನ್ನ ದೇಶೀ ಬೆಳ್ಳುಳ್ಳಿ ಜೊತೆ ಸೇರಿಸಿ ಕೆಜಿಗೆ 150ರೂಪಾಯಿ 200 ರೂಪಾಯಿಂತೆ ಮಾರಾಟ ಮಾಡಲಾಗ್ತಿದೆ.. ಆದ್ರೆ ಈ ಚೀನಾ ಬೆಳ್ಳುಳ್ಳಿ ತಿಂದ್ರೆ ನಮ್ ಜೀವವೇ ಹೋಗ್ಬೋದು

ಚೀನಾ ಬೆಳ್ಳುಳ್ಳಿಗೂ, ದೇಶೀ ಬೆಳ್ಳುಳ್ಳಿಗೂ ಏನ್ ವ್ಯತ್ಯಾಸ ಅಂತ ನೋಡೋದಾದ್ರೆ, ಚೀನಾ ಬೆಳ್ಳುಳ್ಳಿ ನೋಡೋಕೆ ಮಾಮೂಲಿ ಬೆಳ್ಳುಳ್ಳಿಗಿಂತಲೂ ದಪ್ಪವಾಗಿರುತ್ತೆ.. ಇದನ್ನ ಎಷ್ಟು ವರ್ಷ ಇಟ್ರೂ ಕೆಡೋದೇ ಇಲ್ಲ.. ಈ ಬೆಳ್ಳುಳ್ಳಿ ದಪ್ಪ ಇರೋದ್ರಿಂದ ಬಿಡಿಸುವುದು ಕೂಡ ಸುಲಭ.. ನಾಟಿ ಬೆಳ್ಳುಳ್ಳಿ ಆಕಾರದಲ್ಲಿ ಚಿಕ್ಕದಾಗಿರೋದ್ರಿಂದ ಬಿಡಿಸೋದು ಕಷ್ಟ.. ಆದ್ರೆ ಗೃಹಿಣಿಯರು ಈ ದಪ್ಪದ ಬೆಳ್ಳುಳ್ಲಿ ಬಿಡಿಸೋದು ಸುಲಭ ಅಂತ ಅದನ್ನೇ ಖರೀದಿಸ್ತಾರೆ… ಇನ್ನು ಕೆಲವರು ನಾಟಿ ಬೆಳ್ಳುಳ್ಳಿ ರೇಟ್ ಜಾಸ್ತಿ ಅಂತ, ಈ ದೊಡ್ಡ ಬೆಳ್ಳುಳ್ಳಿಯನ್ನೇ ಖರೀದಿಸ್ತಾರೆ… ಹೋಟೆಲ್​​​ನವರು ಕೂಡ ಇದೇ ಚೀಪ್ ರೇಟ್ ಚೀನಾ ಬೆಳ್ಳುಳ್ಳಿಯನ್ನೂ ಬಳಸ್ತಾರೆ..

ಆದ್ರೆ ಈ ಚೀಪ್ ರೇಟ್ ಚೀನಾ ಬೆಳ್ಳುಳ್ಳಿ ತಿಂದ್ರೆ ನಿಮ್ಮ ದೇಹದ ಯಾವ್ದೇ ಅಂಗಾಂಗಗಳು ಕೆಲ್ಸ ಮಾಡಲ್ಲ ಹುಷಾರ್.. ಯಾಕಂದ್ರೆ ಈ ಬೆಳ್ಳುಳ್ಳಿಗೆ ಅತಿಯಾದ ರಾಸಾಯನಿಕ ಬಳಸ್ತಾರೆ.. ಇಂಥಾ ಬೆಳ್ಳುಳ್ಳಿ ತಿಂದ್ರೆ ಕಿಡ್ನಿ, ಲಿವರ್ ಫೇಲ್ ಆಗುತ್ತೆ.. ಅತಿಯಾದ ರಾಸಾಯನಿಕ ಬಳಸಿ ಇದು ತೂಕ ಕಳೆದುಕೊಳ್ಳದಂತೆ ಮಾಡಿರ್ತಾರೆ.. ಎಷ್ಟು ವರ್ಷ ಇಟ್ರೂ ಈ ಬೆಳ್ಳುಳ್ಳಿ ಒಣಗಿಹೋಗಲ್ಲ.. ಹೀಗಾಗಿ ತೂಕವೇನೋ ಜಾಸ್ತಿ ಇರುತ್ತೆ.. ಆದ್ರೆ ಕೆಮಿಕಲ್ಸ್​ಯುಕ್ತ ಬೆಳ್ಳುಳ್ಳಿ ತಿಂದ್ರೆ ನಿಮ್ಮ ಕಿಡ್ನಿ, ಲಿವರ್ ಫೇಲ್ ಆಗುತ್ತೆ.. ಜೀವನೂ ಹೋಗೋ ಸಾಧ್ಯತೆ ಇದೆ.

ಸದ್ಯ ಇಂಥಾ ಬೆಳ್ಳುಳ್ಳಿ ಶಿವಮೊಗ್ಗದಲ್ಲಿ ಮಾರಾಟ ಆಗ್ತಿದ್ದು ಗೊತ್ತಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ರೇಡ್ ಮಾಡಿ 50 ಕೆಜಿಯಷ್ಟು ಬೆಳ್ಳುಳ್ಳಿಯನ್ನ ಸೀಜ್ ಮಾಡಿದ್ದಾರೆ.. ಪರೀಕ್ಷೆಗಾಗಿ ಲ್ಯಾಬ್​​ಗೂ ಕಳಿಸಿದ್ದಾರೆ.. ಚೀನಾ ಬೆಳ್ಳುಳ್ಳಿ ಬಗ್ಗೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್​​ನಲ್ಲೂ ವಿಚಾರಣೆ ನಡೀತಿದೆ.. ಇದರ ಗುಣಮಟ್ಟದ ಬಗ್ಗೆ ಪರೀಕ್ಷೆಗಳು ನಡೆದು ಡೇಂಜರ್ ಅನ್ನೋದು ಗೊತ್ತಾಗಿದೆ… ಕರ್ನಾಟಕಕ್ಕೂ ಚೀಪ್ ರೇಟ್ ಚೀನಾ ಬೆಳ್ಳುಳ್ಳಿ ಎಂಟ್ರಿ ಕೊಟ್ಟಿರೋದು ಆಘಾತ ಮೂಡಿಸಿದೆ.. ನಿಮ್ ಮನೇಲೂ ಇಂಥಾ ಚೀಪ್ ರೇಟ್ ಬೆಳ್ಳುಳ್ಳಿ ಇದ್ಯಾ ಮೊದಲು ಚೆಕ್ ಮಾಡಿಕೊಳ್ಳಿ…

- Advertisement -

Latest Posts

Don't Miss