Friday, December 27, 2024

Latest Posts

ತೂಕ ಇಳಿಸಲು ಈ ಸೂಪ್ ಗಳನ್ನ ಬಳಸಿ.!

- Advertisement -

ಸಾಮಾನ್ಯವಾಗಿ ಫಿಟ್ ಆಂಡ್ ಸ್ಲಿಮ್ ಆಗಿ ಇರಬೇಕೆಂಬ ಆಸೆ ಎಲ್ಲರಲ್ಲೂ ಸಹ ಇರುತ್ತದೆ. ಆದರೆ ಇನ್ನೇನು ಮಳೆಗಾಲ ಶುರುವಾಗುತ್ತಿದ್ದು, ಬಿಸಿ ಬಿಸಿ ಎಣ್ಣೆಯಲ್ಲಿ ಕರಿದ ತಿನಿಸುಗಳಿಂದ ನಮ್ಮ ಮನಸ್ಸು ಜಾರುವುದು ಸರ್ವೇ ಸಾಮಾನ್ಯ. ಆದರೆ ಎಣ್ಣೆಯಲ್ಲಿ ಕರಿದ ತಿನಿಸುಗಳನ್ನ ಸೇವಿಸಿದರೆ ಬೊಜ್ಜು ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಬಿಸಿಯಾಗಿರುವ ಸೂಪ್‌ಗಳನ್ನು ಕುಡಿಯಬಹುದು. ಹಾಗಿದ್ರೆ ಯಾವೆಲ್ಲ ಸೂಪ್ ಗಳು ದೇಹದ ತೂಕ ಇಳಿಸಿಲು ಸಹಾಯ ಮಾಡುತ್ತೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ.

ಇನ್ನು ತರಕಾರಿ ಸೂಪ್ ಕೂಡ ಪೋಷಕಾಂಶಗಳಿಂದ ತುಂಬಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಕ್ಯಾರೆಟ್, ಕ್ಯಾಪ್ಸಿಕಂ, ಪಾಲಕ್‌, ಕೋಸುಗಡ್ಡೆ ಮತ್ತು ಬಟಾಣಿಗಳಂತಹ ವಿವಿಧ ತರಕಾರಿಗಳನ್ನು ಸೂಪ್‌ಗೆ ಸೇರಿಸಿ ಸೂಪ್ ತಯಾರಿಸಿಕೊಂಡು ಕುಡಿಯಬಹುದು.

ಇನ್ನು ಮಳೆಗಾಲ ಶುರುವಾಗುತ್ತಿದ್ದು ಹೆಚ್ಚಾಗಿ ಅಣಬೆಗಳು ಸಿಗುತ್ತದೆ. ಇದರಲ್ಲಿ ಸೂಪ್‌ಗಳನ್ನು ತಯಾರಿಸಿ ದೇಹದ ತೂಕ ಇಳಿಸಿಕೊಳ್ಳಬಹುದು. ಅಣಬೆಯಲ್ಲಿ ಪ್ರೋಟೀನ್‌, ಫೈಬರ್‌ ಹಾಗೂ ಹಲವು ಇತರ ಪೋಷಕಾಂಶಗಳನ್ನು ಅಣಬೆ ಹೊಂದಿರುತ್ತದೆ. ಮಶ್ರೂಮ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಇದು ದೇಹದ ಶಕ್ತಿಯನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ.

ಚಿಕನ್ ತಿಂದರೆ ತೂಕ ಹೆಚ್ಚಾಗುವುದು ನಿಜ ಆದರೆ ಚಿಕನ್ ಸೂಪ್ ನಿಂದ ಅಲ್ಲ. ರುಚಿಯಾದ ಆಹಾರ ಬೇಕು ಅಂದ್ರೆ ಅಥವಾ ದೇಹದ ತೂಕ ಇಳಿಯಬೇಕಾದರೆ ಚಿಕನ್‌ ಸೂಪ್‌ ಹೆಚ್ಚು ಉಪಯುಕ್ತವಾಗಿದೆ. ಇದು ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.

ಟೊಮೆಟೋ ಸೂಪ್‌ ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬಿನ ಅಂಶವನ್ನು ಹೊಂದಿದೆ. ಟೊಮೆಟೋ ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ಇತರ ಪೋಷಕಾಂಶಗಳನ್ನು ಸಹ ಹೊಂದಿದೆ. ಇದು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಆದರೆ ಸೂಪ್‌ಗೆ ಉಪ್ಪು ಅಥವಾ ಸಕ್ಕರೆಯನ್ನು ಆದಷ್ಟು ಕಡಿಮೆಯೇ ಬಳಸುವುದು ಉತ್ತಮ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss