Thursday, December 26, 2024

Latest Posts

ಉಪ್ಪಿಟ್ಟು ಸೇವಿಸಿ ಆರೋಗ್ಯವಾಗಿರಿ.!

- Advertisement -

ಉಪ್ಪಿಟ್ಟು ಅಂದರೆ ಹೆದರಿಕೊಂಡು ದೂರ ಹೋಗುವವರು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. ಹಾಗೆಯೇ ರವೆ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಕರವಾಗಿ ಜೀವನ ನಡೆಸುತ್ತಿರುವವರು ಕೂಡ ನಮ್ಮ ಮಧ್ಯೆಯೇ ಇದ್ದಾರೆ. ಇವರಲ್ಲಿ ಯಾರು ಆರೋಗ್ಯವಾಗಿದ್ದಾರೆ ಎಂಬುದನ್ನು ಗಮನಿಸುವುದಾದರೆ ಅದು ರವೆಯಿಂದ ಯಾವುದಾದರೂ ಉತ್ಪನ್ನಗಳನ್ನು ಆಗಾಗ ಅಡುಗೆ ತಯಾರಿ ಮಾಡಿಕೊಂಡು ತಿನ್ನುವವರು ಎಂದು ಸುಲಭವಾಗಿ ಹೇಳಬಹುದು. ರವೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಆದರೆ ಬಹುತೇಕ ನಮ್ಮಲ್ಲಿ ಹಲವರಿಗೆ ಈ ವಿಚಾರ ತಿಳಿದಿಲ್ಲ.

ಸದೃಢವಾದ ನಮ್ಮ ಆರೋಗ್ಯಕ್ಕೆ ಅನುಕೂಲವಾಗುವಂತೆ ಪ್ರತಿದಿನ ಅಥವಾ ಆಗಾಗ ನಿಯಮಿತವಾಗಿ ರವೆಯ ಉತ್ಪನ್ನಗಳನ್ನು ಸೇವನೆ ಮಾಡಿ ಹೇಗೆಲ್ಲಾ ನಮ್ಮ ಆರೋಗ್ಯದ ಸಮಗ್ರತೆಯನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.

ನಮ್ಮ ಮೂಳೆಗಳ ಸಾಂದ್ರತೆ ಹೆಚ್ಚಾಗುವುದು ನಾವು ಅತ್ಯುತ್ತಮ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಸಂದರ್ಭದಲ್ಲಿ. ರವೆಯಿಂದ ತಯಾರು ಮಾಡಿದ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮ್ಮ ಮೂಳೆಗಳ ಸಾಂದ್ರತೆ ಹೆಚ್ಚಾಗುತ್ತದೆ ಜೊತೆಗೆ ಆರೋಗ್ಯಕರವಾದ ರೀತಿಯಲ್ಲಿ ನಮ್ಮ ನರಮಂಡಲ ವ್ಯವಸ್ಥೆ ಕೂಡ ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ.
ಯಾಕೆಂದರೆ ರವೆಯಲ್ಲಿ ಪಾಸ್ಪರಸ್, ಜಿಂಕ್ ಮತ್ತು ಮೆಗ್ನೀಷಿಯಂ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದು ನಮ್ಮ ದೇಹದ ಆರೋಗ್ಯಕ್ಕೆ ಉತ್ತಮ ರೀತಿಯಲ್ಲಿ ಸಹಕಾರಿ.

ಸಕ್ರಿಯವಾದ ಜೀವನಶೈಲಿಯಲ್ಲಿ ಬದುಕಬೇಕು ಎಂದರೆ ನಾವು ಸೋಮಾರಿ ಆಗಬಾರದು. ಆರೋಗ್ಯ ಕರವಾದ ಆಹಾರಗಳನ್ನು ಸೇವನೆ ಮಾಡುವುದರಿಂದ ಮತ್ತು ಉತ್ತಮವಾದ ಜೀವನ ಶೈಲಿಯನ್ನು ಹೊಂದುವುದರಿಂದ ನಮ್ಮ ಜೀವನ ಅತ್ಯುತ್ತಮವಾಗಿ ರೂಪುಗೊಳ್ಳುತ್ತದೆ. ಕೆಲವರಿಗೆ ಮಧ್ಯಾಹ್ನ ಊಟ ಮಾಡಿದ ನಂತರದಲ್ಲಿ ಸೋಮಾರಿತನ ಹೆಚ್ಚಾಗುತ್ತದೆ. ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಆಹಾರ ಪದ್ಧತಿಯ ಮೇಲೆ ನಾವು ಗಮನ ಹರಿಸಿದರೆ ಅತ್ಯುತ್ತಮ.
ಅದರಲ್ಲೂ ರವೆಯಿಂದ ತಯಾರು ಮಾಡಿದ ಆಹಾರ ಪದಾರ್ಥಗಳನ್ನು ಬೇಯಿಸಿದ ತರಕಾರಿಗಳ ಮಿಶ್ರಣದೊಂದಿಗೆ ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ನಾರಿನ ಅಂಶ ಸಿಗುತ್ತದೆ. ನಮ್ಮ ಜೀರ್ಣಶಕ್ತಿ ಕೂಡ ಹೆಚ್ಚಾಗುತ್ತದೆ.

ರವೆಯಲ್ಲಿ ಕಬ್ಬಿಣ ಅಂಶದ ಪ್ರಮಾಣ ಹೆಚ್ಚಾಗಿರುವುದರಿಂದ ನಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶದ ಅವಶ್ಯಕತೆಯಿದೆ ಅಷ್ಟು ಪ್ರಮಾಣದಲ್ಲಿ ನಮಗೆ ನಮ್ಮ ಆಹಾರ ಪದ್ಧತಿ ರವೆಯಿಂದ ಕೂಡಿದ್ದರೆ ಸಿಗುತ್ತದೆ. ಇದರಿಂದ ನಮ್ಮ ದೇಹದ ರಕ್ತನಾಳಗಳಲ್ಲಿ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಜೊತೆಗೆ ನಮ್ಮ ದೈನಂದಿನ ಕಾರ್ಯಚಟುವಟಿಕೆಗಳು ನಡೆಯುತ್ತವೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

- Advertisement -

Latest Posts

Don't Miss