Wednesday, September 18, 2024

Latest Posts

Ganesha: ಮಾನವ ಮುಖದ ಗಣೇಶನ ನೋಡಿದ್ದೀರಾ!

- Advertisement -

ನೀವೆಲ್ಲಾ ಉದ್ದವಾದ ಸೊಂಡಿಲು ಇರೋ ಗಣೇಶನನ್ನ ನೋಡಿರ್ತಿರಿ. ಗಣೇಶ ಅಂದ್ರೆ ಆನೆಯ ಮುಖ,ಅಗಲವಾದ ಹೊಟ್ಟೆ ಹೊಂದಿರ್ತಾನೆ ಅಂತ ನಮ್ಗೆಲ್ಲಾ ಗೊತ್ತೇಯಿದೆ.ಅದಲ್ಲದೇ ಭಾರತದ ಯಾವ ಮೂಲೆಗೇ ಹೋದ್ರು ಕೂಡ ಗಣೇಶ ಹೀಗೆ ಇರ್ತಾನೆ.ಆದ್ರೆ ಭಾರತದ ಈ ಒಂದು ಜಾಗದಲ್ಲಿ ಗಣೇಶನನ್ನ ನರಮುಖದಲ್ಲಿ ಪೂಜಿಸಲಾಗ್ತಾಯಿದೆ.ಆ ಜಾಗ ಯಾವುದು ಅಂತಾ ಹೇಳ್ತೀವಿ

ಇನ್ನೇನು ಗಣೇಶ ಹಬ್ಬ ಬಂದೇಬಿಡ್ತು. ಗಣೇಶನನ್ನ ಬರಮಾಡಿಕೊಳ್ಳೋಕೆ ಇಗಾಗಲೇ ಎಲ್ಲಾ ತಯಾರಿ ಆಗಿದೆ.ಅದಲ್ಲದೆ ಹಲವಾರು ಭಕ್ತರು ಆ ದಿನ ಗಣೇಶನ ದರ್ಶನ ಪಡೆಯೋಕೆ ನಾನಾ ದೇವಸ್ಥಾನಕ್ಕೆ ಹೋಗ್ತಾರೆ. ಆದರೆ ಭಾರತದ ತಮಿಳುನಾಡಿನಲ್ಲಿರುವ ಈ ದೇವಸ್ಥಾನದಲ್ಲಿ ಗಣೇಶನನ್ನು ಮಾನವನ ಮುಖದ ಅವತಾರದಲ್ಲಿ ಪೂಜಿಸಲಾಗ್ತಾಯಿದೆ.

 

ಗಣೇಶನನ್ನು ಮಾನವನ ಮುಖದೊಂದಿಗೆ ಪೂಜಿಸೋ ಈ ದೇವಾಲಯ ಇರೋದು, ತಮಿಳುನಾಡಿನ ತಿಲತರ್ಪಣ ಬಳಿಯಿರುವ ಮುಕ್ತೀಶ್ವರರ್ ದೇವಸ್ಥಾನದಲ್ಲಿ.ಅಲ್ಲದೇ ಈ ದೇವಸ್ಥಾನವನ್ನ ಆದಿ ವಿನಾಯಕ ದೇವಾಲಯ ಅಥವಾ ನರಮುಖ ವಿನಾಯಕ ಅಂತಾಲೂ ಕರೀತಾರೆ.ಈ ದೇವಾಲಯ 5 ಅಡಿ ಎತ್ತರವಿದ್ದು.ಇದು ಗಣೇಶನ ದೈವೀಕ ರೂಪವಾಗಿದೆ ಹೀಗಾಗಿನೇ ಇಲ್ಲಿ ಗಣೇಶನನ್ನ ಈ ರೀತಿಯಾಗಿ ಪೂಜಿಸಲಾಗುತ್ತೆ.

 

ಅಂದಹಾಗೆ ಈ ದೇವಾಲಯದ ಪೂರ್ವ ಪ್ರವೇಶದ್ವಾರದಲ್ಲಿ ನಾಗನಂಧಿ ಇದೆ. ಅದಲ್ಲದೆ ಈ ನರಮುಖ ಗಣೇಶನ ದೇವಾಲಯದಲ್ಲಿ ನಂದಿಯ ವಿಗ್ರಹವಿರುವುದು ಮತ್ತೊಂದು ವಿಶೇಷವಾಗಿದೆ. ಇಲ್ಲಿ ಗಣೇಶನ ಈ ರೂಪವನ್ನ ಬಹಳ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದೇವಸ್ಥಾನದಲ್ಲಿರುವ ಗಣೇಶನ ವಿಗ್ರಹ ಗ್ರಾನೈಟ್ನದ್ದಾಗಿದ್ದು , ನೋಡಲು ಅದ್ಭುತವಾಗಿದೆ.ಇಲ್ಲಿ ನರಮುಖ ಗಣೇಶ ತನ್ನ ಕೈ ಯಲ್ಲಿ ಕೊಡಲಿ ಹಿಡಿದು ನಿಂತಿರೋದನ್ನ ನಾವು ಕಾಣಬಹುದು. ವಿನೂತನ ರೂಪದಲ್ಲಿ ನೆಲಿಸಿರುವ ಈ ನರಮುಖ ಗಣೇಶದ ದರ್ಶನ ಪಡೇಯೋಕೆ ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸ್ತಾಯಿದ್ದಾರೆ.

- Advertisement -

Latest Posts

Don't Miss