Haveri: ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಮೈಲಾರಲಿಂಗೇಶ್ವರ ದೇವರ ಪವಾಡ ಭಕ್ತರ ಗಮನ ಸೆಳೆಯಿತು. 14 ವರ್ಷದ ಬಾಲ ಗೊರವಪ್ಪಜ್ಜನೊಬ್ಬ ಕಬ್ಬಿಣದ ಸರಪಳಿಯನ್ನು ಹರಿದು ಪವಾಡ ಪ್ರದರ್ಶಿಸಿದ ಘಟನೆ ನಡೆದಿದೆ.
ನರೇಗಲ್ ಗ್ರಾಮದ ಪ್ರಮೋದ್ ನಾಗಪ್ಪ ಕರಡಿ (14) ಸರಪಳಿ ಹರಿದ ಬಾಲ ಗೊರವಪ್ಪಜ್ಜನಾಗಿದ್ದಾರೆ. ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಈ ಪವಾಡ ನಡೆಯಿತು.
ಶ್ರಾವಣ ಮಾಸದಲ್ಲಿ ಪ್ರತಿವರ್ಷ ನಡೆಯುವ ಈ ಧಾರ್ಮಿಕ ಆಚರಣೆಯಲ್ಲಿ ಗೊರವಪ್ಪಜ್ಜರು ವಿಶೇಷ ವ್ರತ ಹಾಗೂ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಪವಾಡಕ್ಕೂ ಮುನ್ನ ಬಾಲ ಗೊರವಪ್ಪಜ್ಜ ಪ್ರಮೋದ್ ನಾಗಪ್ಪ ಕರಡಿ ಸತತ ಐದು ದಿನಗಳ ಕಾಲ ಉಪವಾಸ ಆಚರಿಸಿದ್ದಾಗಿ ತಿಳಿದುಬಂದಿದೆ.
ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಮೈಲಾರಲಿಂಗೇಶ್ವರ ದೇವರ ಈ ಪವಾಡವನ್ನು ಕಣ್ತುಂಬಿಕೊಳ್ಳಲು ನರೇಗಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ಭಕ್ತರು ಆಗಮಿಸಿದ್ದರು.




