Haveri News: ಕೆರೆ ಹೂಳೆತ್ತುವಾಗ ಪುರಾತನ ನಂದಿ ವಿಗ್ರಹ ಪತ್ತೆ..!

Haveri News: ಹಾವೇರಿ: ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಕೆರೆ ಹುಳೆತ್ತುವಾಗ ನಂದಿ ವಿಗ್ರಹ ಪತ್ತೆಯಾಗಿದೆ.

ಗ್ರಾಮದ ಬಳಿ ಇರೋ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ 3 ಅಡಿ ಎತ್ತರದ ಬಸವಣ್ಣ ಮೂರ್ತಿ ಪತ್ತೆಯಾಗಿದ್ದು, ಗ್ರಾಮದ ಜನರು ಬಸವಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಗ್ರಾಮದ ದೇವಸ್ಥಾನ ಬಳಿ ಪ್ರತಿಷ್ಠಾನ ಮಾಡಿ ಪೂಜೆ ಮಾಡಲು ಗ್ರಾಮದ ಜನರು ನಿರ್ಧಾರ ಮಾಡಿದ್ದಾರೆ.

About The Author