Haveri News: ಜಿಲ್ಲೆಯಲ್ಲಿ ರೈತರಿಗೆ ಸರಿಯಾದ ಮಳೆ ಇಲ್ಲದೆ ಇರುವುದರಿಂದ ಜಿಲ್ಲೆಯ ಎಲ್ಲ ಶಾಸಕರು ನಮ್ಮ ಸ್ವಂತ ಖರ್ಚಿನಿಂದ ಮೋಡ ಬಿತ್ತನೆಗೆ ಮುದಾಗಿದ್ದೇವೆ ಎಂದು ಹಾನಗಲ್ ಪಟ್ಟಣದಲ್ಲಿ ಸೋಮವಾರ ಶಾಸಕ ಶ್ರೀನಿವಾಸ್ ಮಾನೆ ಹೇಳಿದರು.
ರಾಣೇಬೆನ್ನೂರ್ ಶಾಸಕ ಪ್ರಕಾಶ ಕೋಳಿವಾಡ ಇದರ ಬಗೆಗೆ ಮಾಹಿತಿ ನೀಡಿದ್ದು. ಇಂದು ಮದ್ಯಾಹ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡಬಿತ್ತನೆ ಪ್ರಾರಂಭವಾಗಲಿದೆ .
ಮೊದಲ ಹಂತದಲ್ಲಿ ಜಿಲ್ಲೆಯ ಶಿಗ್ಗಾವ್, ಸವಣೂರ ಹಾಗೂ ಹಾನಗಲ್ ತಾಲೂಕಿನಲ್ಲಿ ಮೋಡಬಿತ್ತನೆ ನಡೆಯಲಿದೆ ಎಂದು ಆವರು ತಿಳಿಸಿದರು.




