Saturday, September 14, 2024

Latest Posts

ಋತು ಚಕ್ರ ಸಮಸ್ಯೆ ಇದೆಯಾ? ಇದಕ್ಕೆ ಪರಿಹಾರವೇನು?

- Advertisement -

Health Tips: ಹೆಣ್ಣು ಮಕ್ಕಳು ಋತುಮತಿಯಾದ ಬಳಿಕ ಅವರಿಗೆ ಪ್ರತೀ ತಿಂಗಳು ಕಾಡುವ ಆರೋಗ್ಯ ಸಮಸ್ಯೆ ಎಂದರೆ, ಋತುಚಕ್ರ ಸಮಸ್ಯೆ. ಈ ದಿನಗಳು ಹತ್ತಿರ ಬಂದಾಗ, ಹೆಚ್ಚು ಕೋಪ, ಕಿರಿಕಿರಿ, ಸುಸ್ತು, ಕೈ ಕಾಲು ನೋವು, ಇತ್ಯಾದಿ ತೊಂದರೆಗಳಾಗುತ್ತದೆ. ಆದರೆ ಇದೆಲ್ಲ ಒಂದು ಹಂತದಲ್ಲಿದ್ದರೆ, ಅದು ಸಮಸ್ಯೆ ಎನ್ನಿಸುವುದಿಲ್ಲ. ಆದರೆ ಇವೆಲ್ಲವೂ ಅಗತ್ಯಕ್ಕಿಂತ ಹೆಚ್ಚಾಗಿದ್ರೆ ಮಾತ್ರ, ಅದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಾಗುತ್ತದೆ. ಪಾರಂಪರಿಕ ವೈದ್ಯೆ ಪವಿತ್ರಾ ಅವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಪ್ರತೀ ತಿಂಗಳು ಋತುಸ್ರಾವ ಸರಿಯಾದ ಸಮಯಕ್ಕೆ ಆಗಬೇಕು. ತಿಂಗಳು ಬಿಟ್ಟು ತಿಂಗಳು, ಅಥವಾ ಎರಡು- ಮೂರು ತಿಂಗಳಿಗೊಮ್ಮೆ ಋತುಸ್ರಾವವಾದ್ರೆ, ಅದರಿಂದ ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗುತ್ತದೆ. ದೇಹದ ತೂಕ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ಹಲವು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಪ್ರತೀ ತಿಂಗಳು ಸಮಯಕ್ಕೆ ಸರಿಯಾಗಿ, ಋತುಸ್ರಾವವಾಗುವುದು ತುಂಬಾ ಮುಖ್ಯವಾಗಿದೆ.

ಆದರೆ ಋತುಚಕ್ರ ಸರಿಯಾಗಿ ಆಗದ್ದಕ್ಕೆ ಕಾರಣವೇನು ಅಂದ್ರೆ, ಹೆಣ್ಣು ಮಕ್ಕಳು ಮಾಡುವ ಕೆಲ ತಪ್ಪುಗಳು. ಅದೇನಂದ್ರೆ ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ನಿದ್ರೆ ಮಾಡದಿರುವುದು, ಹೆಚ್ಚು ಟೀ-ಕಾಫಿ ಕುಡಿಯುವುದು, ಹೆಚ್ಚು ನೀರು ಕುಡಿಯದೇ ಇರುವುದು. ಇದೆಲ್ಲವೂ ಮುಟ್ಟಿನ ಸಮಸ್ಯೆ ಬರಲು ಕಾರಣವಾಗಿದೆ. ಅಲ್ಲದೇ ಹೆಚ್ಚು ಜಂಕ್‌ ಫುಡ್ ತಿನ್ನುವುದು. ಆರೋಗ್ಯಕರ ಆಹಾರ ಸೇವನೆ ಮಾಡದಿರುವುದು, ಇದೆಲ್ಲವೂ ಮುಟ್ಟಿನ ಸಮಸ್ಯೆ ಬರಲು ಕಾರಣವಾಗಿದೆ. ಇದಕ್ಕೆ ಪರಿಹಾರವೇನು ಎಂದು ತಿಳಿಯಲು ವೀಡಿಯೋ ನೋಡಿ.

- Advertisement -

Latest Posts

Don't Miss