ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ಜೆಡಿಎಸ್ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತುರ್ತು ಮಾಧ್ಯಮಗೋಷ್ಠಿ ಕರೆದು ಜೆಡಿಎಸ್ ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು.
ಜಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದ್ದು,93 ಅಭ್ಯರ್ಥಿಗಳ ಪಟ್ಟಿಯನ್ನು ಕುಮಾರಸ್ವಾಮಿಯವರು ಬಿಡುಗಡೆಗೊಳಿಸಿದರು.
ಮಂಡ್ಯದಲ್ಲಿ ರಾಜ್ಯ ರೈತ ಸಂಘದಿಂದ ಬಂದ್ ಗೆ ಕರೆ
108-116 ಪಟ್ಟಿ ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದೇವು. ನಂತರ ಕೆಲವು ಜಿಲ್ಲೆಗಳ ಮಾತುಕತೆ ಪೆಂಡಿಂಗ್ ಇರುವ ಕಾರಣ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡ್ತಿದ್ದೇವೆ.
ಮುಳಬಾಗಿಲಿನಲ್ಲೇ ಪಟ್ಟಿ ಬಿಡುಗಡೆ ಮಾಡಲು ರೆಡಿ ಇದ್ದೇವು. ಮಳೆಯ ಕಾರಣ, ಕೆಲ ಹಿತೈಷಿಗಳ ಸಲಹೆ ಮೇರೆಗೆ ಇಂದು ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡ್ತಿದ್ದೇವೆ. ಘೋಷಿತ ಅಭ್ಯರ್ಥಿಗಳಲ್ಲಿ ಜೋಶ್ ಕಡಿಮೆ ಆದರೆ ಅಂಥವರ ಹೆಸರನ್ನು ಮುಂದೆ ಬದಲಾಯಿಸುತ್ತೇವೆ. ಇನ್ನು ಪಂಚರತ್ನ ರಥಯಾತ್ರೆ ಚೆನ್ನಾಗಿ ಸಾಗುತ್ತಿದ್ದು, ಒಳ್ಳೆಯ ಜನಬೆಂಬಲ ಸಿಕ್ಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿಯವರು ಹೇಳಿದರು.
ವಿವೇಚನೆಯಿಲ್ಲದ ವಿಷಯ ಪ್ರಸ್ತಾಪಿಸಿ, ಕಾಂಗ್ರೆಸ್ ಜನರ ಕೆಂಗಣ್ಣಿಗೆ ಗುರಿಯಾಗಿದೆ : ಗೋವಿಂದ ಕಾರಜೋಳ
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಗುಪ್ತಚರ ವರದಿ ಬಹಿರಂಗಪಡಿಸಿದೆ : ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್