ಮಂಡ್ಯ: ಜೆಡಿಎಸ್ 120 ಸೀಟ್ ಗೆದ್ದರೂ ಮುಖ್ಯಮಂತ್ರಿನೇ, 37 ಸೀಟ್ ಗೆದ್ದರು ಅವರೇ ಮುಖ್ಯಮಂತ್ರಿ ,ಹಣಕಾಸು,ಇಂಧನ,ನೀರಾವರಿ ಖಾತೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಖಾತೆಯನ್ನು ಯಾರಿಗೂ ಬಿಟ್ಟು ಕೊಡಲ್ಲ ಅವರು. ಮುಸ್ಲಿಂ ಸಮುದಾಯಕ್ಕೆ ಸಿಎಂ ಸ್ಥಾನ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ದಲಿತರು,ಮುಸ್ಲಿಂ ಸಮುದಾಯಕ್ಕೆ ಅಧಿಕಾರ ಕೊಡುತ್ತೇನೆ ಎಂದು ಹೇಳುತ್ತಾರೆ. ಪೂರ್ಣ ಪ್ರಮಾಣದಲ್ಲಿ 120 ಬಂದರೆ ಸಾಲ ಮನ್ನಾ ಮಾಡುತ್ತೇನೆ ಅಂತಾರೆ, ನಂತರ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲ,ಸಾಲ ಮನ್ನಾ ಮಾಡೊಕಾಗ್ಲಿಲ್ಲ ಅಂತಾರೆ. ಪೂರ್ಣ ಪ್ರಮಾಣದಲ್ಲಿ ಬಹುಮತ ಬರದಿದ್ರು ಕಳೆದ ಬಾರಿ ಸಿಎಂ ಆಗಿದ್ದರು ಎಂದು ಚೆಲುವಸ್ವಾಮಿ ವ್ಯಂಗ್ಯವಾಡಿದ್ದಾರೆ.
ಪಾಲಕ್ ಸೊಪ್ಪು ನಿಜವಾಗಲೂ ಚಿನ್ನ..ಅಚ್ಚರಿಯ ಆರೋಗ್ಯಕಾರಿ ಲಾಭಗಳು ತಪ್ಪದೇ ನೋಡಿ..?
ಮಂಡ್ಯಕ್ಕೆ 8 ಸಾವಿರ ಕೋಟಿ ಅಂತ ಹೇಳುತ್ತಾರೆ ಆದರೆ ರಸ್ತೆ ಗುಂಡಿ ಮುಚ್ಚಿಲ್ಲ. ಒಂದೂವರೆ ವರ್ಷ ಸಿಎಂ ಆಗಿದ್ದರೂ ಏನೂ ಕೆಲಸ ಮಾಡಿಲ್ಲ. ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲವನ್ನು ಬಿಟ್ಟುಕೊಡುತ್ತೇನೆ ಅಂತಾರೆ. ಬಿಜೆಪಿಯವರು ಎರಡೂ ಮೂರು ಬಾರಿ ಆಪರೆಷನ್ ಕಮಲದಿಂದ ಆದರು ನೇರವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಜೆಡಿಎಸ್ ಹೆಗಡೆ-ದೇವೇಗೌಡ್ರು ಸಿಎಂ ಆದಾಗ ಮಾತ್ರ ಅಧಿಕಾರದಲ್ಲಿದ್ದರು. ಜನರು ಇವರ ಕೆಲಸವನ್ನು ನೋಡಿದ್ದಾರೆ. ಒಂದೂವರೆ ವರ್ಷ ಅಧಿಕಾರ ಇದ್ದಾಗ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದರು. ಹಣಕಾಸು ಸಚಿವರು ಅವರೇ ಆಗಿದ್ದರೂ ಏನೂ ಮಾಡಿಲ್ಲ. ಜನರು ಜೆಡಿಎಸ್ ನ ನಂಬುವ ಸ್ಥಿತಿಯಲ್ಲಿಲ್ಲ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.