Saturday, November 15, 2025

Latest Posts

ಸಂತೋಷ್ ಜೀ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

- Advertisement -

ಬೆಂಗಳೂರು: ಜಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿ ಸಂತೋಷ್ ಜೀ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು. ನೀವು ಬೆಳಗಾವಿಯಲ್ಲಿ ಯಾರಿಗೆ  ಟಿಕೆಟ್ ಕೊಟ್ಟಿದ್ದೀರಾ? ಶಿಕಾರಿಪುರದಲ್ಲಿ ಯಾರಿಗೆ ಕೊಡುತ್ತಿದದ್ದೀರಾ? ನಾವು ಜನಗಳನ್ನು ನೋಡಿ ಕಣ್ಣೀರು ಹಾಕುತ್ತೇವೆ ಆದರೆ ನೀವು ಸರ್ಕಾರವನ್ನೇ ಲೂಟಿ ಮಾಡಿ ಸಂತೋಷವಾಗಿದ್ದೀರಾ ಎಂದು ಕಿಡಿಕಾರಿದರು.

ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಗೊಳಿಸಿದ ಹೆಚ್ ಡಿಕೆ

ನೀವು ಜೋಳಿಗೆ ಹಾಕಿಕೊಂಡು, ಮೋದಿ ಹೆಸರು ಹೇಳಿಕೊಂಡು ಜೀವನ ನಡೆಸುತ್ತಿದ್ದೀರಾ. ಮೋದಿಯವರು ಅವರ ಜೊತೆ ಸೇರಿ ಸರ್ಕಾರ ಮಾಡುವುದಕ್ಕೆ ಹೇಳಿದ್ದರು. ಅವರನ್ನು ಕೇಳಿ ಬೇಕಾದರೆ ನಮ್ಮ ಬಗ್ಗೆ ಹೇಳುತ್ತಾರೆ. 2023ಕ್ಕೆ ಮಿಸ್ಟರ್ ಸಂತೋಷ್, ಮಿಷ್ಟರ್ ಅಶೋಕ್  ನೀವೇ ನಮ್ಮ ಬಳಿ ಬರಬೇಕು. ನಿಮ್ಮಿಂದ ನಾನು ಕಲಿಯುವುದೇನಿಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಗೊಳಿಸಿದ ಹೆಚ್ ಡಿಕೆ

ಪ್ರತಿಭಟನೆಗೆ ಆಗಮಿಸುತ್ತಿದ್ದ, 300ಕ್ಕೂ ಹೆಚ್ಚು ಜನರನ್ನು ಗಡಿಯಲ್ಲಿ ತಡೆದು ವಾಪಸ್ ಕಳುಹಿಸಿದ ಕರ್ನಾಟಕ

- Advertisement -

Latest Posts

Don't Miss