Mandya News: ಮಂಡ್ಯದಲ್ಲಿ ದಿಶಾ ಸಭೆ ನಡೆದಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ, ಶಾಸಕ ಗಾಣಿಗ ರವಿ, ಎಸ್ಪಿ ಶೋಭಾರಾಣಿ ಸೇರಿ ಹಲವು ನಾಯಕರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಂಡ್ಯದಲ್ಲಿ ಕೈಗಾರಿಕೆ ತಂದೆ ತರ್ತೇನೆ.
ಮಂಡ್ಯ ಜಿಲ್ಲೆಯ ಯುವಜನತೆಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೈಗಾರಿಕೆ ತರಲು ಕೇಂದ್ರ ಸರ್ಕಾರದಿಂದ 780ಕೋಟಿ ಹಣ ಖರ್ಚು ಮಾಡಲು ಸಿದ್ದವಿದೆ. ಮೇ ತಿಂಗಳಿನಲ್ಲಿ ಗುದ್ದಲಿ ಪೂಜೆ ಮಾಡಲು ಮುಂದಾಗಿದ್ದೇವೆ.
ARAI ತಂಡದಿಂದ ಪರಿಶೀಲನೆ ಮಾಡಿ ವರದಿ ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಎಆರ್ ಎಐ ಯೋಜನೆ ಮಾಡಿಯೇ ಸಿದ್ಧ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಆರಂಭದಲ್ಲೇ ARAI ಕೇಂದ್ರ ಯೋಜನೆಗೆ ಆರಂಭದಲ್ಲೇ ವಿಘ್ನ ಎಂಬ ವರದಿ ಬಂದಿದೆ. ನಮ್ಮ ಇಲಾಖೆಯಿಂದ 780 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪನೆ ಮಾಡಲಿದೆ. 8 ರಿಂದ 10 ದಿನಗಳ ಒಳಗೆ ಕ್ಯಾಬಿನೆಟ್ ಗೆ ಬರಲಿದೆ. ನನಗೆ ಈ ಜಿಲ್ಲೆಯ ಜನರ ಋಣ ತಿರಸಬೇಕಾಗಿದೆ. ಇಲ್ಲಿ ನಾನು ರಾಜಕೀಯ ಮಾಡೋಕೆ ಬಂದಿಲ್ಲ. ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಜೊತೆ ಸಭೆ ಮಾಡ್ತಿನಿ. ರಾಜ್ಯ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಸಹಯೋಗ ವಿದ್ದರೆ ಮಾತ್ರ ಸಾಕಷ್ಟು ಕೈಗಾರಿಕೆಗಳು ಬರುತ್ತವೆ.
ಸಾಕಷ್ಟು ಯೋಜನೆಗಳಿವೆ ಆದರೆ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ನಾಗಮಂಗಲ ತಾಲೂಕಿನ ಬಳಿ ಬೆಳ್ಳೂರು ಕ್ರಾಸ್ ಬಳಿ 1300 ಎಕರೆ ಜಾಗವನ್ನು ಮಂಜೂರು ಮಾಡಿದರೆ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ. ರಾಜಕೀಯ ಬಿಟ್ಟು ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಆದರೆ ಕೈಗಾರಿಕಾ ಸ್ಥಾಪನೆಗೆ ಗ್ರಾಮಸ್ಥರೂ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಕೂಡ ಮಂಡ್ಯ ಜಿಲ್ಲೆ ಅಭಿವೃದ್ಧಿ ಮಾಡಲು ಬದ್ಧರಾಗಿದ್ದೇವೆ. ಮಂಡ್ಯ ತಾಲೂಕಿನ ಎರಡು ಜಾಗದಲ್ಲಿ ಕೈಗಾರಿಕೆ ನಿರ್ಮಾಣ ಮುಂದಾಗಿದ್ದು ಸ್ವಾಗತ. ಕೇಂದ್ರ ತಂಡ ವರದಿಯಂತೆ ಅದಕ್ಕೆ ಅನುಮತಿ ನೀಡಿದರೆ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ನೀಡಲು ಸಿದ್ದ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.




