Saturday, March 2, 2024

Latest Posts

ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ..!?

- Advertisement -

ಬೆಂಗಳೂರು: ಕೊನೆಗೂ ಕುಮಾರಸ್ವಾಮಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್ ರಾಜೀನಾಮೆ ನೀಡಿದ ಬೆನ್ನಲ್ಲೇ ದೋಸ್ತಿ ಸರ್ಕಾರ ಖತಂ ಆಗೋದು ಬಹುತೇಕ ಖಚಿತವಾಗಿದೆ. ಕುಮಾರಸ್ವಾಮಿ ಬೆಳಗ್ಗೆ ಸಚಿವ ಸಂಪುಟ ಸಭೆ ಕರೆದಿದ್ದು ಅಲ್ಲಿ ಸರ್ಕಾರ ವಿಸರ್ಜನೆ ನಿರ್ಧಾರ ಕೈಗೊಳ್ತಾರೆ. 12ರಂದು ವಿಧಾನಸಭೆ ಅಧಿವೇಶನದಲ್ಲಿ ಕುಮಾರಸ್ವಾಮಿ ವಿದಾಯ ಭಾಷಣ ಮಾಡುವ ಮುಲಕ ಬಿಜೆಪಿ 14 ತಿಂಗಳಲ್ಲಿ ಎಷ್ಟು ಕಿರುಕುಳ ಕೊಟ್ಟಿದೆ ಅಂತ ಎಳೆಎಳೆಯಾಗಿ ಬಿಚ್ಚಿಡಲು ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ.

ಡಿಕೆಶಿ ಸಂಧಾನ ಫೇಲ್.ಸರ್ಕಾರ ಉಳಿಯೋ ಆಸೆ ಕೈಬಿಟ್ಟ ಹೆಚ್ಡಿಕೆ..!

ಡಿ.ಕೆ ಶಿವಕುಮಾರ್ ಜೆಡಿಎಸ್ ಶಾಸಕರೊಂದಿಗೆ ಮುಂಬೈಗೆ ತೆರಳಿ ರಾಜೀನಾಮೆ ನೀಡಿದ ಶಾಸಕರ ಮನವೊಲಿಕೆಗೆ ಮುಂದಾದಾಗ ಸರ್ಕಾರ ಉಳಿಯುತ್ತೆ ಅಂತ ಕುಮಾರಸ್ವಾಮಿ ಭಾವಿಸಿದ್ರು. ಡಿಕೆಶಿಗೆ ಹೋಟೆಲ್ ಎಂಟ್ರಿ ಸಿಗದೆ ಹೊರಗಡೆ ಪ್ರತಿಭಟನೆ ಕೂತಾಗ ಸಿಎಂ ಕುಮಾರಸ್ವಾಮಿ ಡಿಕೆಶಿಗೆ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಅವರನ್ನ ಮನವೊಲಿಸಿ ಅಂತ ಹೇಳಿದ್ರು. ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಜಿ.ಟಿ ದೇವೇಗೌಡ, ಶ್ರವಣಬೆಳಗೋಳ ಶಾಸಕ ಬಾಲಕೃಷ್ಣ ಎಷ್ಟೇ ಹಠ ಮಾಡಿದ್ರೂ ಪೊಲೀಸರು ಹೋಟೆಲ್ ಒಳಹೋಗಲು ಅವಕಾಶ ಕೊಡಲಿಲ್ಲ. ಯಾವಾಗ ಹೋಟೆಲ್ ಒಳಗಿರುವ ಶಾಸಕರು ಸಂಧಾನಕ್ಕೆ ಸುತಾರಾಂ ಒಪ್ಪದೇ ನಿರಾಕರಿಸಿದ್ರೋ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸರ್ಕಾರ ಉಳಿಯೋದಿಲ್ಲ ಅನ್ನೋದು ಕನ್ಫರ್ಮ್ ಆಗಿ ಹೋಯ್ತು. ನಂತರ ತಮ್ಮ ಎಸ್ಕಾರ್ಟ್ ತೊರೆದ ಕುಮಾರಸ್ವಾಮಿ ದೇವೇಗೌಡರ ಮನೆಗೆ ತೆರಳಿ ಕೆಲ ಹೊತ್ತು ಮಾತುಕತೆ ನಡೆಸಿದ ನಂತರ ಜೆ.ಪಿ ನಗರ ಮನೆಯಲ್ಲಿ ಏಕಾಂಗಿಯಾಗಿ ಕೈಚೆಲ್ಲಿ ಕುಮಾರಸ್ವಾಮಿ ಕೂತುಬಿಟ್ರು.  

ಒಟ್ಟಾರೆ ಸರ್ಕಾರ ಉಳಿಯೋದಿಲ್ಲ ಅನ್ನೋದು ಸ್ಪಷ್ಟವಾದ ಮೇಲೆ ಕುಮಾರಸ್ವಾಮಿ ಸಹಜವಾಗಿಯೇ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ. ಆದ್ರೆ ಅಮೆರಿಕಾದಿಂದ ವಾಪಸ್ ಬಂದಾಗಲೇ ರಾಜೀನಾಮೆ ನೀಡಿದ್ರೆ ಸ್ವಲ್ಪ ಜನರ ದೃಷ್ಟಿಯಲ್ಲಿ ಅನುಕಂಪನಾದ್ರೂ ಸಿಕ್ಕಿರೋದು ಅನ್ನೋದು ಕೆಲವರ ಅಭಿಪ್ರಾಯ.

ಯಸ್ ವೀಕ್ಷಕರೇ ಕುಮಾರಸ್ವಾಮಿ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ.

https://www.youtube.com/watch?v=WvQ-eJ8mw8M
- Advertisement -

Latest Posts

Don't Miss