ಹಾಸನ :
ಹಾಸನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ಮತ್ತೊಂದು ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಭವಾನಿ ರೇವಣ್ಣಗೆ ಟಿಕೆಟ್ ಕೊಡಲ್ಲ, ಕೆಎಂ ರಾಜೇಗೌಡ ಬೇಡ ಎಂದ ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಮಾಜಿ ಸಚಿವ ರೇವಣ್ಣ ಮುಂದಾಗಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ನಾಯಕ, ಎರಡು ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ದ ಎಚ್.ಕೆ.ಮಹೇಶ್ ಅವರಿಗೆ ಗಾಳ ಹಾಕಲು ರೇವಣ್ಣ ಮುಂದಾಗಿದ್ದಾರೆ.
2013ರಲ್ಲಿ ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಎಚ್.ಕೆ.ಮಹೇಶ ಚುನಾವಣೆ ಸೋತಿದ್ದರು. ಶತಾಯಗತಾಯ ಸ್ವರೂಪ್ಗೆ ಟಿಕೆಟ್ ಬೇಡವೇ ಬೇಡಾ ಎಂದು ಪಟ್ಟುಹಿಡಿದಿರುವ ರೇವಣ್ಣ ಮತ್ತು ಕುಟುಂಬ, ಎಚ್.ಕೆ.ಮಹೇಶ್ ಅವರಿಗೆ ಟಿಕೆಟ್ ಕೊಟ್ಟರೆ ಎರಡು ಬಾರಿ ಸೋತಿರುವ ಸಿಂಪತಿ ವರ್ಕೌಟ್ ಆಗಲಿದೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಅಲ್ಲದೆ, ಬಿಜೆಪಿಯ ಹಾಲಿ ಶಾಸಕ ಪ್ರೀತಂಗೌಡ ವಿರುದ್ಧ ಯುವ ಅಭ್ಯರ್ಥಿ ಕಣಕ್ಕಿಳಿಸಿದಂತೆಯು ಆಗಲಿದೆ. ಮಹೇಶ್ರನ್ನು ಕಣಕ್ಕಿಳಿಸಿದರೆ ತಮ್ಮನ್ನ ಎದುರು ಹಾಕಿಕೊಂಡು ಟಿಕೆಟ್ ಪಡೆಯಲು ಮುಂದಾಗಿರುವ ಸ್ವರೂಪ್ಗೆ ಟಿಕೆಟ್ ತಪ್ಪಿಸಿದಂತೆಯೂ ಆಗುತ್ತದೆ, ಜೊತೆಗೆ ಪ್ರೀತಮ್ ಗೌಡಗೆ ಪ್ರಬಲ ಪೈಪೋಟಿ ನೀಡಲು ಮಹೇಶ್ ಸೂಕ್ತ ಅಭ್ಯರ್ಥಿ ಅನ್ನೋದು ರೇವಣ್ಣ ಅಭಿಪ್ರಾಯವಾಗಿದೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅನಧಿಕೃತ ಹಣ ವಹಿವಾಟು / ಖರ್ಚಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ .