Friday, March 29, 2024

Latest Posts

ಬಹುಭಾಷಾ ನಟ ಶರತ್ ಬಾಬು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲು

- Advertisement -

ಖ್ಯಾತ ಹಿರಿಯ ನಟ ಶರತ್ ಬಾಬು ರವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಚೆನೈನ ಖಾಸಗಿ ಆಸ್ರತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತಿದ್ದಾರೆ.

ಕನ್ನಡದ ʻಅಮೃತವರ್ಷಿಣಿ’ ಸಿನಿಮಾದಲ್ಲಿ  ಶರತ್ ಬಾಬುರವರು ರಮೇಶ್ ಅರವಿಂದ್ ಮತ್ತು ನಟಿ ಸುಹಾಸಿನಿ ಜೊತೆ ನಡಿಸಿದ್ದರು.ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಭಾಷೆಯ ಚಲನಚಿತ್ರದಲ್ಲಿ ನಟಿಸಿದ್ದ ಶರತ್ ಬಾಬು 1973 ರಲ್ಲಿ ತೆರೆ ಕಂಡಂತಹ ತಲುಗಿನ ರಾಮರಾಜ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ಶರತ್ ರವರು ಹಲವಾರು ಭಾಷೆಯಲ್ಲಿ ನಟಿಸುವ ಮೂಲಕ ಸೈ ಅನಿಸಿಕೊಂಡಿದ್ದಾರೆ. ಇನ್ನು ಇವರ ಮೂಲ ಹೆಸರು ಸತ್ಯಂ ಬಾಬು ದೀಕ್ಷಿತಲು ನಾಯಕನಾಗಿ ಮತ್ತು ಪೋಷಕ ನಟನಾಗಿ  ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನು ಶರತ್ ಬಾಬುರವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಇವರು ರಮಾಪ್ರಭಾ ಮತ್ತು ಸ್ನೇಹಾ ನಂಬಿಯಾರ್ ಅವರನ್ನು ಮದುವೆಯಾಗಿದ್ದರು ಆದರೆ ಕುಟುಂಬ ಕಲಹದಿಂದಾಗಿ ಇಬ್ಬರಿಗೂ  ವಿಚ್ಚೇಧನ ಕೊಟ್ಟಿದ್ದಾರೆ.  71 ಪ್ರಾಯದ ಶರತ್ ಬಾಬುರವರು ಅನಾರೋಗ್ಯದಿಂದ ಬಳಲುತ್ತಿರುವ ಶರತ್ ಬಾಬು ರವರು ಚಿನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಯಾವ ಖಾಯಿಲೆಗೆ ಚಿಕಿತ್ಸೆ ಪಡೆಯುತಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ.

ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಗಾಯ..

6 ಲಕ್ಷ ಬೆಲೆಯ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಯೂಸರ್..

ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ನಾ ಮುಂದು, ತಾ ಮುಂದು ಎನ್ನುತ್ತಿರುವ ಸಂಸ್ಥೆಗಳು

- Advertisement -

Latest Posts

Don't Miss