ಮಂಡ್ಯ: ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ 64ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿತ ಅಭ್ಯರ್ಥಿ ಹಾಗೂ ಮನ್ ಮುಲ್ ಅಧ್ಯಕ್ಷರಾದ ಬಿ.ಆರ್ ರಾಮಚಂದ್ರರವರ ನೇತೃತ್ವದಲ್ಲಿ ವಿ.ವಿ ರಸ್ತೆಯ ಗಣಪತಿ ದೇವಸ್ಥಾನದಲ್ಲಿ ಅಭಿಮಾನಿ ಹಾಗೂ ಕಾರ್ಯಕರ್ತೊಡನೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರೇರಣಾ ಟ್ರಸ್ಟ್ ನ ಮಕ್ಕಳೊಂದಿಗೆ ಕುಮಾರಸ್ವಾಮಿ ರವರ ಹುಟ್ಟುಹಬ್ಬ ಆಚರಣೆ ಮಾಡಿ, ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ, ಹಾಗೂ ಉಪಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ದಳಪತಿಗಳ ಹುಟ್ಟುಹಬ್ಬದ ಹಿನ್ನೆಲೆ ಜೆಡಿಎಸ್ ಮುಖಂಡರಿಂದ ವಿಶೇಷ ಪೂಜೆ
ನೆಹರು ನಗರದ ಸರ್ಕಾರಿ ಶಾಲಾ ಮಕ್ಕಳಿಗೆ ಶ್ರೀ ಶಂಭು ಸೇವಾ ಟ್ರಸ್ಟ್ ವತಿಯಿಂದ ಉಚಿತ ಶಾಲಾ ಬ್ಯಾಗ್ ವಿತರಣೆ, ಸೇವಾಕಿರಣ ವೃದ್ರಾಶ್ರಮದ ವೃದ್ಧರಿಗೆ ಬೆಡ್ ಶೀಟ್ ವಿತರಣೆ ಹಾಗೂ ಗ್ರೀನ್ ಪ್ಯಾಲೇಸ್ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ ಹಾಗೂ ಅಭಿಮಾನಿಗಳಿಗೆ, ಕಾರ್ಯಕರ್ತರುಗಳಿಗೆ ಉಪಹಾರದ ವ್ಯವಸ್ಥೆಯನ್ನು ಬಿ.ಆರ್ ರಾಮಚಂದ್ರುರವರು ಏರ್ಪಡಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲಾಯಿತು.
ನಟಿ ಐಶ್ವರ್ಯ ರೈ ಹೆಸರಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿದ್ದ ವಿದೇಶಿಗರು ಪೊಲೀಸರ ವಶ
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್, ಮನ್ ಮುಲ್ ಉಪಾಧ್ಯಕ್ಷರಾದ ಎಂ.ಎಸ್ ರಘುನಂದನ್, ಜೆಡಿಎಸ್ ಕಾರ್ಯಾಧ್ಯಕ್ಷರಾದ ಬೂದನೂರು ಸ್ವಾಮಿ, ನಗರಸಭೆ ಅಧ್ಯಕ್ಷರಾದ ಮಂಜು, ಹನಕೆರೆ ಕಿರಣ್, ಕನ್ನಲಿ ವಿಜಯ್, ನಗರಸಭೆ ಸದಸ್ಯರುಗಳಾದ ಎಂ.ಆರ್ ಮಂಜು, ಮಂಜುಳಾ ಉದಯಶಂಕರ್ ಮತ್ತಿತ್ತರು ಹಾಗೂ ಜೆಡಿಎಸ್ ಕಾರ್ಯಕರ್ತರುಗಳು ಅಭಿಮಾನಿಗಳು ಉಪಸ್ಥಿತರಿದ್ದರು
ಮೋದಿ ಹೇಳಿಕೆಯನ್ನು ಸ್ವಾಗತಿಸುತ್ತೇವೆ : ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವ ನಿರ್ಧಾರಕ್ಕೆ ಅಮೇರಿಕಾ ಸಾಥ್