ಹಾಸನ:
ತನ್ನ ಮಗನ ಮೇಲಿರುವ ಕೇಸಿನ ವಿಚಾರವಾಗಿ ಎ.ಮಂಜು ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಶಾಸಕ ಎ.ಟಿ ರಾಮಸ್ವಾಮಿ ಅವರ ಹೇಳಿಕೆಗೆ ನಗರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಕಿಡಿ ಕಾರಿದ್ದಾರೆ.
ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಮಗನ ಮೇಲಿನ ಪ್ರಕರಣದ ವಿಚಾರವಾಗಿ ತಾವು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅದನ್ನು ಸಾಬೀತು ಮಾಡಲಿ, ಸುಮ್ಮನೆ ನಾಮಕಾವಸ್ಥೆ ಗೆ ಮನ ಬಂದಂತೆ ಮಾತನಾಡಬಾರದು ಎಂದರು.
ರಾಮಸ್ವಾಮಿ ಹಾಗೂ ಶಿವಲಿಂಗ ಗೌಡ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ, ಕಳೆದ ಎರಡು ವರ್ಷ ಗಳಿಂದ ಕಾಂಗ್ರೆಸ್ ಪಕ್ಷದ ಮನೆ ಬಾಗಿಲು ತಟ್ಟುತ್ತಿದ್ದಾರೆ,
ದೇವೇಗೌಡರನ್ನು ನಾವೇ ಮನೆಯಿಂದ ಆಚೆ ಅಟ್ಟಿದ್ದೇವೆ ಎಂಬ ಹೇಳಿಕೆಯನ್ನು ರಾಮಸ್ವಾಮಿ ಅವರು ಹಿಂಪಡೆಯಬೇಕು, ದೇವೇಗೌಡರನ್ನು ನಾವು ಹೇಗೆ ನೋಡಿಕೊಂದಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿದೆ, ಈ ರೀತಿಯ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಸಲಹೆ ನೀಡಿದ ಅವರು ನಾವೇನಾದರೂ ಎ. ಮಂಜು ಅವರ ಜೊತೆ ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿ ಇರುವುದನ್ನು ಸಾಬೀತು ಮಾಡಿದ್ದರೆ ಅವರು ಹೇಳಿದ ಶಿಕ್ಷೆ ಅನುಭವಿಸುವೆ, ಅವರಂತೆ ನಾನು ಯಾರ ಮನೆ ಬಾಗಿಲನ್ನು ಬಡಿಯುವ ಕೆಲಸ ಮಾಡಿಲ್ಲ ಎಂದರು
ಕೆಲವರು ಪಕ್ಷದ ಒಳಗೆ ಇದ್ದುಕೊಂಡು ಚಾಕು ಹಾಕುವ ಕೆಲಸ ಮಾಡುವವರ ನಡುವೆ, ಪಕ್ಷಕ್ಕೆ ಬರುವವರನ್ನು ಪ್ರೀತಿಯಿಂದ ಆಹ್ವಾನ ಮಾಡುತ್ತಿದ್ದೇವೆ ಅಂತೆ ಮಂಜು ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ,
ನಾನು ರಾಮಸ್ವಾಮಿ ಅವರ ವಿರುದ್ಧ ಅರಕಲಗೂಡು ಕ್ಷೇತ್ರದ ಜನರನ್ನು ಎತ್ತಿ ಕಟ್ಟಿ ಅವರ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದರೆ ಅದನ್ನು ದೇವರು ನೋಡಿಕೊಳ್ಳಲಿ, ನಾನು ಎಂದಿಗೂ ಈ ರೀತಿಯ ಯೋಚನೆ ಮಾಡಿಲ್ಲ, ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಜನರನ್ನು ಪಕ್ಷ ತೀರ್ಮಾನ ಮಾಡಲಿದೆ ಅಲ್ಲಿಯ ವರೆಗೂ ಎಲ್ಲರೂ ಸುಮ್ಮನೆ ಇರುವಂತೆ ನಾನೇ ಹೇಳಿದ್ದೇನೆ ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಪಡುವುದು ಬೇಡ ಎಂದರು
ಕಾಂಗ್ರೆಸ್ ಸೇರುವ ಕುತೂಹಲ ದಿಂದ ಕಳೆದ ಎರಡು ವರ್ಷಗಳಿಂದ ರಾಮಸ್ವಾಮಿ ಅವರು ನಿದ್ರೆ ಮಾಡುತ್ತಿಲ್ಲ, ಪಕ್ಷದಿಂದ ಹೊರಗೆ ಹೋಗುವುದಾದರೆ ಹೋಗಲಿ ಅದನ್ನು ಬಿಟ್ಟು ನಮ್ಮ ಮೇಲೆ ಆರೋಪ ಮಾಡುವ ಅವರು ಕಳೆದ ಎರಡು ವರ್ಷಗಳಿಂದ ಜಲಧಾರೆ, ಜೆಡಿಎಸ್ ಪಕ್ಷದ ಸಭೆ, ಸಮಾರಂಭ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಯಾವ ಕಾರಣಕ್ಕೆ ಭಾಗಿಯಾಗಿಲ್ಲ ಎಂದು ಪ್ರಶ್ನಿಸಿದರು,
ಶಿವಲಿಂಗೇಗೌಡ ಅವರು ಈ ಹಿಂದೆ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ, ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡಲ್ಲ, ಎಂದು ಕುಮಾರಸ್ವಾಮಿ ಅವರ ಮುಂದೆ ಹೇಳಿಕೆ ನೀಡಿದ್ದು ಇದೀಗ ಅವರ ಆಣೆ ಪ್ರಮಾಣ ಮರೆತು ಕಾಂಗ್ರೆಸ್ ಸೇರಲು ಹೊರಟಿದ್ದಾರೆ, ಅವರ ರಾಜಕೀಯ ಜೀವನಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ವ್ಯಂಗ್ಯ ವಾಡಿದರು
ಎರಡು ರಾಷ್ಟ್ರೀಯ ಪಕ್ಷಗಳ ಖಜಾನೆ ಭದ್ರವಾಗಿದೆ ಆದುದರಿಂದ ಶಿವಲಿಂಗೇಗೌಡ ಹಾಗೂ ಎ. ಟಿ ರಾಮಸ್ವಾಮಿ ಇಬ್ಬರಿಗೂ ಪಕ್ಷ ಟಿಕೆಟ್ ನೀಡಿ ಅವರ ರಾಜಕೀಯ ಭವಿಷ್ಯ ಅಭಿವೃದ್ಧಿಯಾಗಲಿ,
ಎಸ್ಟೇ ಅಧಿಕಾರ ಅಂತಸ್ತು ಇದ್ದರು ಕೊನೆಗೆ 6 ಅಡಿ 3 ಅಡಿ ಜಾಗವೇ ನೆಮ್ಮದಿಯ ನಿದ್ರೆ ನೀಡುವ ಜಾಗ ನೆನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದಂತೆ ಅವರಿಗೆ ಇನ್ನೂ ಮೂರು ಅಡಿ ಜಾಗ ಜಾಸ್ತಿ ಕೊಡಲಿ ನಮಗೆ ನಿದ್ರಿಸಲು ಕಾರು ಇದೆ ಕಾರಿನಲ್ಲೇ ನಿದ್ರೆ ಮಾಡುತ್ತೇನೆ, ಎಂದ ಅವರು ಹಾಸನ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು
ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು, ದೇವೇಗೌಡರನ್ನು ಸೋಲಿಸಿದ್ದು ಯಾರು ಕಾಂಗ್ರೆಸ್ ಅಧ್ಯಕ್ಷನಿಗೆ ಮಾನ ಮರ್ಯಾದೆ ಇದ್ದರೆ ಹೇಳಲಿ, ಹಾಗೆ ಅವನ್ಯವಾನು ಡಿಕೆ ಸುರೇಶ್ ಅವನಿಂದ ಹಾಸನ ಜಿಲ್ಲೆಗೆ ಕೊಡುಗೆ ಏನು ಯಾವ ಮುಖ ಬಿಟ್ಟು ಹಾಸನದಲ್ಲಿ ಕಾಂಗ್ರೆಸ್ ನವರು ಮತ ಕೇಳುತ್ತಾರೆ ಎಂದು ಏಕವಚನದಲ್ಲೆ ವಾಗ್ದಾಳಿ ನಡೆಸಿದ ಅವರು ಹಾಸನ ಜಿಲ್ಲೆಗೆ ಮಂಜೂರಾಗಿದ್ದ, ಐ.ಐ. ಟಿ, ಸೇರಿದಂತೆ ಪ್ರಮುಖ ಕೆಲಸಗಳನ್ನು ಕ್ಯಾನ್ಸಲ್ ಮಾಡಿಸಿರುವುದೇ ಅವರ. ಕೊಡುಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ರಾಜ್ಯದಲ್ಲಿ 140 ಸ್ಥಾನ ಹೊಂದಿದ್ದ ಕಾಂಗ್ರೆಸ್ ಪಕ್ಷ 40 ಸ್ಥಾನಕ್ಕೆ ಬರುವ ಹೀನಾಯ ಸ್ಥಿತಿ ತಲುಪಿದೆ, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಪರ್ಸಂಟೇಜ್ ಹೆಚ್ಚಿಸಿಕೊಂಡು ಬೀಗುತ್ತಿವೆ, ಹಾಸನದಲ್ಲಿ ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಅವರ ಕೊಡುಗೆ ಏನು ಎಂಬುದನ್ನು ಜಿಲ್ಲೆಯ ಜನ ನೋಡಿದ್ದಾರೆ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು
ಹಾಸನ ಜಿಲ್ಲೆಯಲ್ಲಿ ಯಾವುದೇ ಶಕ್ತಿ ಪ್ರದರ್ಶನ ಇಲ್ಲ, ರೇವಣ್ಣ ಕುಮಾರಸ್ವಾಮಿ ಓಡೆದಾಡುತ್ತರೆ ಎಂದು ಎಂದು ಎರಡು ರಾಷ್ಟ್ರೀಯ ಪಕ್ಷಗಳು ಭಾವಿಸಿದ್ದಾರೆ ಅದು ಅವರ ಬ್ರಹ್ಮ ನಿರಾಸೆ, ಹಾಸನ ಜಿಲ್ಲೆಯಲ್ಲೆ ಎರಡು. ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ, ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಯನ್ನು ಜೆಡಿಎಸ್ ವರಷ್ಠ ರಾದ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೇ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು
ಶಿವಲಿಂಗೇಗೌಡ ಅವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೇವೆ, ಮುಂದಿನ ತೀರ್ಮಾನವನ್ನು ಅವರಿಗೆ ಬಿಡುತ್ತೇವೆ ಅವರು ನಮ್ಮ ಪಕ್ಷದಲ್ಲಿ ಇರುವ ವರೆಗೂ ಅವರ ಎಲ್ಲಾ.ಬೇಡಿಕೆಗಳನ್ನು ಈಡೇರಿಸಿದ್ದೇವೆ, ಮುಂದಿನ ದಿನಗಳಲ್ಲಿ ಅವರ ತೀರ್ಮಾನದ ಆಧಾರದಲ್ಲಿ ನಮ್ಮ ನಡೆ ಇರಲಿದೆ, ಅಲ್ಲದೆ ಅರಸೀಕೆರೆ ಕ್ಷೇತ್ರದಲ್ಲಿ ಯು ಜನ ಎಲ್ಲಾ ಬೆಳವಣಿಗೆ ಗಳನ್ನು ಗಮನಿಸಿದ್ದಾರೆ ಮುಂದಿನ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಜನನಾಯಕನ “ತಿಪ್ಪರಾಜು ಹವಲ್ದಾರ” ಹುಟ್ಟು ಹಬ್ಬವನ್ನು “ಅಭಿಮಾನೋತ್ಸವ” ಹೆಸರಲ್ಲಿ ಆಚರಣೆ
ನಮೋ ಉದ್ಗಾಟಿಸಲಿದ್ದಾರೆ ನಮ್ಮ ಮೆಟ್ರೋ, ಮತ್ತೊಮ್ಮೆ ರಾಜ್ಯಕ್ಕೆ ಪ್ರಧಾನಿ ಆಗಮನ,




