ಪಾಪ್ ಕಾರ್ನ್ ಬರೀ ಥಿಯೇಟರ್‌ಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಇತ್ತೀಚೆಗೆ ಮನೆಯಲ್ಲೂ ಪಾಪ್‌ಕಾರ್ನ್ ರೆಡಿ ಮಾಡಬಹುದು. ಮನೆಯಲ್ಲಿಯೇ ವೆರೈಟಿ, ವೆರೈಟಿ ಪಾಪ್‌ಕಾರ್ನ್ ತಯಾರು ಮಾಡಿ, ಟಿವಿ ನೋಡ್ತಾ, ಪಾಪ್ ಕಾರ್ನನ್ನು ಎಂಜಾಯ್ ಮಾಡಬಹುದು. ಆದ್ರೆ ಈ ಪಾಪ್‌ಕಾರ್ನ್ ಆರೋಗ್ಯಕ್ಕೆ ಒಳ್ಳೆಯದಾ..? ಡಯಟ್ ಮಾಡುವವರು ಇದನ್ನ ತಿನ್ನಬಹುದಾ..? ಇತ್ಯಾದಿ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಉತ್ತರ ಹುಡುಕೋಣ.
ಡಯಟ್ ಮಾಡುವವರು ಪಾಪ್‌ಕಾರ್ನ್ ತಿನ್ನಬಹುದಾ ಅನ್ನೋ ಪ್ರಶ್ನೆಗೆ ಉತ್ತರ, ಖಂಡಿತ ತಿನ್ನಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಾ ಅನ್ನೋ ಪ್ರಶ್ನೆಗೆ ಉತ್ತರ, ಲಿಮಿಟ್‌ನಲ್ಲಿ ತಿಂದ್ರೆ ಉತ್ತಮ. ನೀವು ಪಾಪ್‌ಕಾರ್ನ್ ತಿನ್ನುವಾಗ ಮೆಣಸಿನ ಪುಡಿ, ಗರಂ ಮಸಾಲೆ ಪುಡಿ, ಬೆಣ್ಣೆ, ಎಣ್ಣೆ ಎಲ್ಲ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿ ತಿಂದ್ರೆ ರುಚಿ ಕೊಡುತ್ತೆ. ಆದ್ರೆ ಬೊಜ್ಜಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದೇ ಇದೆಲ್ಲವನ್ನೂ ಕಡಿಮೆ ಪ್ರಮಾಣದಲ್ಲಿ ಬಳಸಿದ್ರೆ, ಹೊಟ್ಟೆ ತುಂಬುತ್ತದೆ. ಆದ್ರೆ ಇದ್ಯಾವುದನ್ನೂ ಬಳಸದೇ, ಬರೀ ಪಾಪ್ ಕಾರ್ನ್ ಸೀಡ್ಸ್ ಮತ್ತು ಅಗತ್ಯವಿದ್ದಷ್ಟೇ ಉಪ್ಪು ಸೇರಿಸಿ ತಿಂದ್ರೆ, ಅದರಿಂದ ನಿಮ್ಮ ದೇಹದ ತೂಕ ಸಮವಾಗಿರುತ್ತದೆ. ಉಪ್ಪು ಸೇರಿಸದಿದ್ರೆ ಇನ್ನೂ ಉತ್ತಮ.
ಹಾಗಾಗಿಯೇ ಡಯಟ್ ಮಾಡುವವರು ಕೂಡ ಪಾಪ್‌ಕಾರ್ನ್ ಸೇವಿಸಬಹುದು. ಯಾಕಂದ್ರೆ ಇದಕ್ಕೆ ಬೆಣ್ಣೆ ಎಣ್ಣೆ ಹಾಕಿದ್ರೆ ಹೇಗೆ ಬೊಜ್ಜು ಬರುತ್ತದೆಯೋ, ಅದೇ ರೀತಿ ಬೆಣ್ಣೆ, ಎಣ್ಣೆ ಹಾಕದೇ ಪಾಪ್‌ಕಾರ್ನ್ ತಯಾರಿಸಿ, ತಿಂದ್ರೆ ಅದರಿಂದ ಬೊಜ್ಜು ಕರಗುತ್ತದೆ. ಹಾಗಾಗಿ ಡಯಟ್ ಮಾಡುವವರು ಸಂಜೆ ಹೊತ್ತು ಪಾಪ್‌ಕಾರ್ನ್ ಸೇವನೆ ಮಾಡಬಹುದು. ಅಲ್ಲದೇ ಇದು ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ.
ಕಣ್ಣಿನ ಆರೋಗ್ಯಕ್ಕೂ ಪಾಪ್‌ಕಾರ್ನ್ ಉತ್ತಮ. ಡಯಾಬಿಟೀಸ್ ಇದ್ದವರೂ ಪಾಪ್‌ಕಾರ್ನ್ ತಿನ್ನಬೇಕು. ಇದರಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ. ನಿಮ್ಮ ತ್ವಚೆಯ ಸೌಂದರ್ಯ ಅಭಿವೃದ್ಧಿಗೂ ಇದು ಸಹಾಯ ಮಾಡುತ್ತದೆ. ಪಾಪ್‌ಕಾರ್ನ್ ತಿಂದಲ್ಲಿ ನಿಮಗೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.