Friday, November 22, 2024

Latest Posts

Women Welfare Programme : ನಾಯಕನಹಟ್ಟಿ : ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಪೋಷಣೆ ಯೋಜನೆ ಕಾರ್ಯಕ್ರಮ

- Advertisement -

Chithradurga News : ಅಪೌಷ್ಟಿಕತೆ ಮಕ್ಕಳು ಹುಟ್ಟುವುದನ್ನು ತಡೆಗಟ್ಟಲು ಕಿಶೋರಿಯರನ್ನು, ಗರ್ಭಿಣಿಯರನ್ನು, ಅಪೌಷ್ಟಿಕತೆಯಿಂದ ರಕ್ಷಿಸುವುದೆ ಏಕೈಕ ಮಾರ್ಗ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಾಯಕನಹಟ್ಟಿ ವೃತ್ತ ಮೇಲ್ವಿಚಾರಕಿ ಯಾದ ನಾಗರತ್ನಮ್ಮ ರವರು ಅಭಿಪ್ರಾಯಸಿದರು.

ನಾಯಕನಹಟ್ಟಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ, ಇಲಾಖೆ ವತಿಯಿಂದ ನಡೆದ ಪೋಷಣೆ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ನಾಗರತ್ನ ರವರು ಕೇಂದ್ರ ಸರ್ಕಾರದ ಯೋಜನೆಗಳಲ್ಲೊಂದಾದ ಪೋಷಣೆ ಯೋಜನೆ ಮೂರು ವರ್ಷಗಳಿಂದ ಜಾರಿಯಲ್ಲಿದೆ. ದೇಶದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿದ್ದ ರಾಜ್ಯ ರಾಜಸ್ಥಾನ್, ಈ ರಾಜ್ಯದಲ್ಲಿ ಅತಿ ಹೆಚ್ಚು ಪೌಷ್ಟಿಕತೆ ಕೊರತೆಯಿಂದ ಗರ್ಭಿಣಿಯರು,ಮತ್ತು ಮಕ್ಕಳ ಸಾವು ಹೆಚ್ಚುತ್ತಿರುವುದನ್ನ ಕಂಡ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಪೋಷಣೆ ಕಾರ್ಯಕ್ರಮವನ್ನು ಜಾರಿಗೆ ತಂದು ಮೂರು ವರ್ಷಗಳು ಕಳೆದಿವೆ ಗರ್ಭಿಣಿಯಾರ, ಬಾಣಂತಿಯರ, ಕಿಶೋರಿಯರ, ಮತ್ತು ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ ರಕ್ಷಣೆಗಾಗಿ ರೂಪಿಸಲಾದ ಯೋಜನೆಯಾಗಿದೆ.

ನಮ್ಮ ಮನೆಯಲ್ಲಿ ಇರುವ ಆಹಾರ ಪದ್ಧತಿಯಲ್ಲಿ ಅತಿ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುವ ಹಾಗೂ ನಾರಿನಂಶ ಒಳಗೊಂಡಿರುವ ಸಪ್ಪು,ತರಕಾರಿ, ಮೊಳಕೆ ಕಟ್ಟಿದ ಕಾಳು, ಹಣ್ಣು, ಏಕದಳ ಮತ್ತು ದ್ವಿದಳ ಧಾನ್ಯಗಳು, ಮೊಟ್ಟೆ,ಹಾಲು, ಇನ್ನು ಇತ್ಯಾದಿ ಆಹಾರ ಪದಾರ್ಥಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ದೂರ ಮಾಡಿ ಆರೋಗ್ಯವಂತರಾಗಬಹುದು.

ಜಿಲ್ಲೆಯಲ್ಲಿ ಅತಿ ಹೆಚ್ಚು ಬಡತನ ಹೊಂದಿದ ತಾಲೂಕು ಚಳ್ಳಕೆರೆ ಎಲ್ಲಾ ಅಂಗನವಾಡಿಗಳಲ್ಲಿ ಮೊಟ್ಟೆಯನ್ನು ನೀಡುತ್ತಾರೆ ಆದರೆ ಕೆಲವು ಅಂಗನವಾಡಿಗಳಲ್ಲಿ ನಮಗೆ ಮೊಟ್ಟೆ ಬೇಡ ಪಾಯಸ ಕೊಡಿ ಎಂದು ಕೇಳುತ್ತಿರುತ್ತಾರೆ ಆದಕಾರಣ ಎಲ್ಲಾ ಸಮಯದಲ್ಲೂ ಪಾಯಸ ಮಾಡಲು ಸಾಧ್ಯವಾಗದಲ್ಲಿ ಮೊಟ್ಟೆಯನ್ನು ತಿನ್ನುವುದು ಉತ್ತಮ ಆದರೆ ಅದು ಅವರವರ ತೀರ್ಮಾನಕ್ಕೆ ಬಿಟ್ಟ ವಿಚಾರ.

ಇತ್ತೀಚಿನ ದಿನಗಳಲ್ಲಿ ಪಿಜ್ಜಾ ಬರ್ಗರ್ ಮತ್ತು ಪಾಲಿಶ್ ಮಾಡಿದ ಅಕ್ಕಿಯಿಂದ ಚಿಕ್ಕ ಮಕ್ಕಳಿಂದ ವಯಸ್ಸಾದವರಲ್ಲಿಯೂ ಸಹ ಸಕ್ಕರೆ ಕಾಯಿಲೆ, ರಕ್ತದೊತ್ತಡ, ನಿಶಕ್ತಿ, ನರ ದೌರ್ಬಲ್ಯ, ಮಲರೋಗ, ಅಂಗವಿಕಲತೆ,ಬುದ್ಧಿಮಾಂದ್ಯತೆ,ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ.
ಇಲಾಖೆ ವತಿಯಿಂದ ಅಪೌಷ್ಟಿಕತೆಯನ್ನು ತಡೆಯಲು ಪೋಷಣೆ ಯೋಜನೆ, ಮಾತೃ ವಂದನ, ಅನ್ನ ಪ್ರಾಸನ ಯೋಜನೆ,ಯೋಜನೆ,ಪುರುಷರಿಗಾಗಿ ಸ್ವಾಪೋಷಣೆ ಯೋಜನೆ, ಹೀಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.

ಮಾತೃ ವಂದನಾ ಯೋಜನೆಯಲ್ಲಿ ಮೊದಲನೇ ಹೆರಿಗೆ ಗೆ ಹೆಣ್ಣಾಗಲಿ ಗಂಡಾಗಲಿ 5000 ರೂಪಾಯಿ ಮತ್ತು ಎರಡನೇ ಹೆರಿಗೆಗೆ ಹೆಣ್ಣಾದಲ್ಲಿ ಮಾತ್ರ 6,000 ನೀಡಲಾಗುತ್ತದೆ.
ಬಡ ಕುಟುಂಬದ ಗರ್ಭಿಣಿಯರಿಗೆ ಸ್ತ್ರೀಮಂತ ಕಾರ್ಯವನ್ನು ನಮ್ಮ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿ ಯಾರು ಅವರ ಸ್ವಂತ ಖರ್ಚಿನಿಂದ ಸೀಮಂತ ಕಾರ್ಯವನ್ನ ಮಾಡುತ್ತಾರೆ.
ಭಾಗ್ಯಲಕ್ಷ್ಮಿ ಯೋಜನೆ ನಮ್ಮ ಇಲಾಖೆ ವ್ಯಾಪ್ತಿಗೆ ಬರಲಿದ್ದು ಈ ಯೋಜನೆಯ ಅರ್ಹ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು ಇಂತಹ ಪಲಾನುಭವಿಗಳ ಬ್ಯಾಂಕ್ ಖಾತೆಗೆ 2000 ಸಾವಿರ ಹಣ ದಿನಕ್ಕೆ 50 ಸಾವಿರ ಫಲಾನುಭವಿಗಳಿಗೆ ಹಣ ಪಾವತಿಸಲಾಗುತ್ತದೆ ಸಂಬಂಧಿಸಿದ ಮಾಹಿತಿಯನ್ನು ಫಲಾನುಭವಿಗಳಿಗೆ ತಿಳಿಸಲು ಅಂಗನವಾಡಿ ಶಿಕ್ಷಕಿಯರಿಗೆ ತಿಳಿಸಿದರು.

ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಪ್ರಥಮ ಬಾರಿಗೆ ಅರ್ಜಿಯನ್ನು ಸಲ್ಲಿಸಿದಂತಹ ಫಲಾನುಭವಿಗಳ ವಯಸ್ಸು 18 ತುಂಬುವುದರಿಂದ ಒಂದು ಲಕ್ಷದ ಹದಿನೆಂಟು ಸಾವಿರ ರೂಪಾಯಿ ನೀಡಲಾಗುತ್ತದೆ ಈ ಫಲಾನುಭವಿಯು ಎಸ್ ಎಸ್ ಎಲ್ ಸಿ ವರೆಗೂ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರಬೇಕು ಎಂಬುದು ಹೊಸ ನಿಯಮ ಜಾರಿಯಾಗಿದೆ.ಎಂದುತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಪಟ್ಟಣ ಪಂಚಾಯತ್ ಆರೋಗ್ಯ ನಿರೀಕ್ಷಕರದ ಟಿ ರುದ್ರಮಿನಿಯವರು ಮಾತನಾಡಿ ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳು ಮತ್ತು ಗರ್ಭಿಣಿಯರು ಅ ಪೌಷ್ಟಿಕತೆಯಿಂದ ಬಳಲುತ್ತಿರುವ ಜಿಲ್ಲೆ ಎಂದರೆ ರಾಯಚೂರು ಜಿಲ್ಲೆಯ ಗಿತ್ತು. ಅದನ್ನು ಕಂಡ ಸರ್ಕಾರ ರಾಜ್ಯದಲ್ಲಿ ಯಾವ ಜಿಲ್ಲೆಗೂ ಅಪೌಷ್ಟಿಕತೆ ಕೊರತೆ ಅನ್ವಯಿಸದಂತೆ ತಡೆಯಲು ಮುಂದಾಯಿತು ಅಪೌಷ್ಟಿಕತೆ ಕೊರತೆಯನ್ನು ತಡೆಯಲು ನಮ್ಮ ಮನೆಗಳಲ್ಲಿರುವ ಮತ್ತು ಮನೆಯ ಸುತ್ತಮುತ್ತಲಿರುವ ವಾತಾವರಣದಲ್ಲಿ ಸಿಗುವ ಹಣ್ಣು, ಸೊಪ್ಪು, ತರಕಾರಿಗಳನ್ನು ಹೇರಳವಾಗಿ ಬಳಸಬೇಕು, ಈ ರೀತಿಯ ಕಾರ್ಯಕ್ರಮಗಳನ್ನು ಅಂಗನವಾಡಿ ಶಿಕ್ಷಕಿಯರು ಆಶಾ ಕಾರ್ಯಕರ್ತೆಯರು ಸಾರ್ವಜನಿಕರೊಂದಿಗೆ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಮತ್ತು ವಿಚಾರ ಮೂಡಿಸುವುದರ ಮೂಲಕ ಅಪೌಷ್ಟಿಕತೆ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿದರು.

ವರದಿಗಾರದ ಬಿ ಟಿ ಶಿವಕುಮಾರ್ ಅವರು ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ನಗರೋ ತನ್ನ ಯೋಜನೆ ಅಡಿಯಲ್ಲಿ ಸುತ್ತು ಗೋಡೆ, ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ಹೇಳಿದರು.
ಪಟ್ಟಣ ಪಂಚಾಯತ್ ಸದಸ್ಯರುಗಳಾದ ಸೈಯದ್ ಅನ್ವರ್. ಸರ್ವ ಮಂಗಳಮ್ಮ . ಸುನಿತಾಮ್ಮ . ವಿನುತಾಮ್ಮ. ಪಾಪಮ್ಮ,ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ದುರುಗಪ್ಪ. ಕೆ ಪಿ ತಿಪ್ಪೇಸ್ವಾಮಿ. ಪೆದ್ದನ ಓಬಯ್ಯ ಆಶಾ ಕಾರ್ಯಕರ್ತೆಯರಾದ ಅನಿತಮ್ಮ. ಹಾಗೂ ಅಂಗನವಾಡಿ ಶಿಕ್ಷಕಿಯರು ಸಹಾಯಕಿಯರು. ಆಶಾ ಕಾರ್ಯಕರ್ತೆಯರು. ಮತ್ತು ಗರ್ಭಿಣಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಶೇಷ ಎಂಬಂತೆ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ವತಿಯಿಂದ ಆಶ್ವರ್ಯ ಹನುಮಂತರಾಜು ಎಂಬ ಗರ್ಭಿಣಿಗೆ ಶ್ರೀಮಂತ ಕಾರ್ಯವನ್ನು ನಿರ್ಮಿಸಲಾಯಿತು ವಾರ್ಡ್ -5 ರ ಅಂಗನವಾಡಿ ಕಾರ್ಯಕರ್ತೆ D N ನಾಗರತ್ನಮ್ಮ ನೆರವೇರಿಸಿದರು.

Airport : ಬೆಂಗಳೂರು : ಟರ್ಮಿನಲ್-2 ನಿಂದ ವಿದೇಶಿ ವಿಮಾನಗಳ ಹಾರಾಟಕ್ಕೆ ಚಾಲನೆ

Bank Officer : ಮಂಗಳೂರು ಸ್ವಿಮ್ಮಿಂಗ್ ಪೂಲ್ ನಲ್ಲಿ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ಶವ ಪತ್ತೆ..?!

Siddaramaiah : ಬಾಲಕನನ್ನು ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ..! ಕಾರಣ ಇಷ್ಟೇ..?!

- Advertisement -

Latest Posts

Don't Miss