Wednesday, September 17, 2025

Latest Posts

ಆರೋಗ್ಯದಲ್ಲಿ ಏರುಪೇರು ನಿಜ – HDK ಆರೋಗ್ಯದ ಬಗ್ಗೆ ನಿಖಿಲ್ ಬಿಗ್‌ ಅಪ್‌ಡೇಟ್!

- Advertisement -

ನಿಖಿಲ್ ಕುಮಾರಸ್ವಾಮಿ ಅವರು, ತಮ್ಮ ತಂದೆ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯದ ಕುರಿತು ಮಾತನಾಡಿದ್ದಾರೆ. ಈ ಹಿಂದೆ ಬಂದಿದ್ದ ಹೇಳಿಕೆಗಳನ್ನು ಖಂಡಿಸಿ, ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಮಾತನಾಡಿ, ಕುಮಾರಣ್ಣ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿತ್ತು. ಆದರೆ, ಅವರನ್ನು ನೋಡಿ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಅವರ ತಂದೆ-ತಾಯಿ ಆಶೀರ್ವಾದ, ಭಗವಂತನ ಕೃಪೆ ಹಾಗೂ ನಿಮ್ಮೆಲ್ಲರ ಪ್ರೀತಿಯೊಂದಿಗೆ ಅವರು ಈಗ ಸಂಪೂರ್ಣವಾಗಿ ಚುರುಕಾಗಿ ಇದ್ದಾರೆ ಎಂದು ತಿಳಿಸಿದ್ದಾರೆ.

ನಂತರ ಧರ್ಮಸ್ಥಳ ಕೇಸ್‌ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಎಸ್‌ಐಟಿ ತನಿಖೆ ಸಮರ್ಥವಾಗಿ ನಡೆಯುತ್ತಿದ್ದರೆ ನಾವು ಅವನನ್ನು ಸ್ವಾಗತಿಸುತ್ತಿದ್ದೆವು. ಆದರೆ, ರಾಜ್ಯದ ಜನರ ನಿರೀಕ್ಷೆಗಳಂತೆ, NIA ತನಿಖೆ ಹಮ್ಮಿಕೊಳ್ಳುವುದು ಅತ್ಯಂತ ಮುಖ್ಯ. ಈ ಮೂಲಕ ಧರ್ಮಸ್ಥಳದ ವಿರುದ್ಧ ರೂಪಿಸಲಾದ ಷಡ್ಯಂತ್ರವನ್ನು ಬಹಿರಂಗಗೊಳಿಸಬಹುದು ಎಂದು ಹೇಳಿದ್ದಾರೆ.

ನಿಖಿಲ್ ಅವರು ವಿದೇಶಿ ಫಂಡಿಂಗ್‌ ಕುರಿತು ಗಂಭೀರ ಆರೋಪ ಮಾಡಿದ್ದು, ಧರ್ಮಸ್ಥಳ ಸತ್ಯ ಯಾತ್ರೆಗೆ ಹೇಗೆ ವಿದೇಶಿ ಫಂಡಿಂಗ್ ಆಗಿದೆ ಎಂದು ತೋರಿಸಲು, NIA ತನಿಖೆ ಅವಶ್ಯಕವಾಗಿದೆ. ಧರ್ಮಸ್ಥಳದ ಪವಿತ್ರತೆ ಮತ್ತು ಅಧೀನತೆ ಹಾಳು ಮಾಡುವ ಹೊಣೆಗಾರಿಕೆಯ ಬಗ್ಗೆ ಅನುಮಾನಗಳು ಹೆಚ್ಚಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು, ಜೆಡಿಎಸ್‌ನಿಂದ ಧರ್ಮಸ್ಥಳ ಸತ್ಯಯಾತ್ರೆಯನ್ನು ಆಗಸ್ಟ್ 31ರಂದು ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈ ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವಾಗಿ ಆಯ್ಕೆ ಮಾಡಲಾಗಿದೆ ಮತ್ತು ಧರ್ಮಸ್ಥಳದ ಪವಿತ್ರತೆ ಮತ್ತು ಸತ್ಯವನ್ನು ರಕ್ಷಿಸಲು ಧರ್ಮಸ್ಥಳ ಸತ್ಯಯಾತ್ರೆ ನಡೆಯಲಿದೆ ಅಂತಾ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ

- Advertisement -

Latest Posts

Don't Miss