Health Tips: ಈಗ ಕೆಲ ತಿಂಗಳ ಹಿಂದೆ ಹೃದಯಾಘಾತದ ಸಂಖ್ಯೆ ತೀವ್ರವಾಗಿತ್ತು. ದಿನಕ್ಕೆ 5ರಿಂದ 10 ಜನ ಬರೀ ರಾಜ್ಯದಲ್ಲೇ ಹೃದಯಾಘಾತವಾಗಿ ಸಾಯುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಿತ್ತು. ಇದೀಗ ಚಳಿಗಾಲವೂ ಶುರುವಾಗಿದೆ. ಅಂಥದ್ರಲ್ಲಿ, ಹೃದಯಾಘಾತದ ಸಂದರ್ಭ ಕೂಡ ಹೆಚ್ಚಾಗಬಹುದು ಅಂತಾ ಹೇಳಲಾಗುತ್ತಿದೆ. ಹಾಗಾಗಿ ವೈದ್ಯರು ಹೃದಯಾಘಾತಕ್ಕೆ ಕಾರಣ ಮತ್ತು ಪರಿಹಾರ ಎಲ್ಲವೂ ವಿವರಿಸಿದ್ದಾರೆ.
ಡಾ.ವಿಜಯಲಕ್ಷ್ಮೀ ಅವರು ಈ ಬಗ್ಗೆ ವಿವರಿಸಿದ್ದು, ಆಲ್ಕೋಹಾಲ್ ಕುಡಿಯುವಾಗ ಕರಿದ ಪದಾರ್ಥ ತಿಂದಾಗ, ಮದ್ಯಪಾನ, ಧೂಮಪಾನ ಸೇವನೆ, ಆಲಸ್ಯ, ನಿದ್ರಾಹೀನತೆ, ಬೇಡದ ವಿಷಯಗಳಿಗೆ ಹೆಚ್ಚು ಟೆನ್ಶನ್ ತೆಗೆದುಕ“ಂಡಾಗ ಸೇರಿ ಇನ್ನೂ ಹಲವು ಕಾರಣಗಳಿಗೆ ಹೃದಯಾಘಾತವಾಗತ್ತೆ ಅಂತಾರೆ ವೈದ್ಯರು.
ನಾವು ಎಷ್ಟು ಆ್ಯಕ್ಟೀವ್ ಆಗಿರುತ್ತೇವೋ ಅಷ್ಟು ನಾವು ಆರೋಗ್ಯವಂತರಾಗಿರುತ್ತೇವೆ. ಆದರೆ ನಾವು ಯಾವಾಗ ಆಲಸಿಗಳಾಗುತ್ತೇವೋ, ಆಗ ನಮ್ಮ ದೇಹದಲ್ಲಿ ಕೆಟ್ಟ ಕೋಲೆಸ್ಟ್ರಾಲ್ ಹೆಚ್ಚಾಗುತ್ತದೆ. ಮದ್ಯಪಾನ ಮಾಡುವಾಗ ಮಾಂಸಾಹಾರ, ಕರಿದ ಪದಾರ್ಥ ಸೇವನೆ ಹೆಚ್ಚು ಮಾಡಿದಾಗ, ಹೃದಯಾಘಾತವಾಗುವ ಸಾಧ್ಯತೆ ಅತೀ ಹೆಚ್ಚು ಅಂತಾರೆ ವೈದ್ಯರು.
ಇದಕ್ಕೆ ಪರಿಹಾರ ಅಂದ್ರೆ, ನಾವು ದಿನಕ್ಕೆ 5ರಿಂದ 6 ಪ್ರಕಾರದ ಹಣ್ಣಿನ ಸೇವನೆ ಮಾಡಬೇಕು. ಇದರಿಂದ ನಮ್ಮ ರಕ್ತನಾಳ ಕ್ಲೀನ್ ಆಗಿರುತ್ತದೆ. ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

