Saturday, July 12, 2025

Latest Posts

ನೀರಿನ ಬಗ್ಗೆ ಆರೋಗ್ಯಕರ ಸಂಗತಿ, ಈ ಸ್ಟೋರಿನಾ ನೀವು ನೋಡಲೇಬೇಕು..

- Advertisement -

ಭೂಮಿಯ ಮೇಲಿರುವ ಸಕಲ ಚರಾಚರಗಳು ಬದುಕಲು ಪ್ರಕೃತಿ ಕೊಟ್ಟಿರುವ ವರಗಳಲ್ಲಿ ನೀರು ಕೂಡಾ ಒಂದು. ಹಸಿವಾದ ತಕ್ಷಣ ಊಟ ತಿಂಡಿ ಸಿಗದಿದ್ದರೆ, ನಾವು ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಇಂಥ ಜೀವ ಉಳಿಸುವ ಜೀವ ಜಲದ ಬಗ್ಗೆ  ಆರೋಗ್ಯಕರ ಸಂಗತಿಯನ್ನ ನಾವು ನಿಮಗೆ ಹೇಳಲಿದ್ದೇವೆ.

ನಮಗೆ ಬಾಯಾರಿಕೆ ಆಗೋದಾದ್ರೂ ಯಾಕೆ..? ಬಾಯಾರಿಕೆಯಾದಾಗ ನೀರು ಕುಡಿದರಷ್ಟೇ ಸಮಾಧಾನವಾಗೋದು ಯಾಕೆ..? ಅನ್ನೋ ಬಗ್ಗೆ ತಿಳಿಯೋಣ. ನಮ್ಮ ದೇಹ ಶೇ.60ರಷ್ಟು ನೀರಿನಿಂದ ಕೂಡಿದೆ. ನಮ್ಮ ಮೆದುಳು ಮತ್ತು ಹೃದಯದಲ್ಲಿ, ಶ್ವಾಸಕೋಶ, ಮೂಳೆಗಳಲ್ಲೂ ನೀರಿದೆ. ಆದ್ರೆ ನಮ್ಮ ದೇಹದಲ್ಲಿರುವ ರಕ್ತದಲ್ಲಿ ಮಾತ್ರ ನೀರಿಲ್ಲ. ನಮ್ಮ ದೇಹದಲ್ಲಿರುವ ನೀರು ಬೆವರು, ಮಲ ಮೂತ್ರದ ಮೂಲಕ ಹೊರಗೆ ಹೋಗುತ್ತದೆ. ಆವಾಗ ನಮ್ಮ ದೆಹಕ್ಕೆ ನೀರು ಬೇಕೆಂದು ಮೆದುಳು ನಮಗೆ ಸಂದೇಶ ನೀಡುತ್ತದೆ. ಆವಾಗಲೇ ಬಾಯಾರಿಕೆಯಾಗೋದು. ಮತ್ತು ಬಾಯಾರಿಕೆಯಾದಾಗ ನಾವು ನೀರು ಕುಡಿಯೋದು.

ಇನ್ನು ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಅಂತಾ ತಿಳಿದುಕೊಳ್ಳೋದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ. ವಿಜ್ಞಾನಿಗಳ ಪ್ರಕಾರ ಮನುಷ್ಯ ಆರೋಗ್ಯವಾಾಗಿರಬೇಕು ಅಂದ್ರೆ ದಿನಕ್ಕೆ 8 ಲೀಟರ್ ನೀರು ಕುಡಿಯಬೇಕಂತೆ. ಆದ್ರೆ ಅಷ್ಟೊಂದು ನೀರನ್ನ ಎಲ್ಲರೂ ಕುಡಿಯುವುದಿಲ್ಲ. ಆದ್ರೆ ನಮ್ಮ ಆರೋಗ್ಯ ಸರಿಯಾಗಿರುವಷ್ಟಾದರೂ ನಾವು ನೀರು ಕುಡಿಯಬೇಕು. ಇನ್ನು ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ತಿಳಿಯಬೇಕು ಅಂದ್ರೆ ನಮ್ಮ ಮೂತ್ರದ ನೀರಿನ ಬಣ್ಣವನ್ನು ನಾವು ತಿಳಿಯಬೇಕು. ನಮ್ಮ ಮೂತ್ರದ ಬಣ್ಣ ಹಳದಿಯಾಗಿದ್ದರೆ ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದರ್ಥ. ನಮ್ಮ ಮೂತ್ರದ ಬಣ್ಣ ಬಿಳಿಯಾಗಿದ್ದರೆ, ನಾವು ಆರೋಗ್ಯವಾಗಿದ್ದೇವೆಂದು ಅರ್ಥ.

ಇನ್ನು ನಾವು ಪ್ರತಿದಿನ ಎರಡರಿಂದ ಮೂರು ಲೀಟರ್ ನೀರನ್ನಾದರೂ ಕುಡಿಯಬೇಕು. ಹೀಗೆ 3 ಲೀಟರ್ ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ನಾವು ಕುಡಿಯುವ ನೀರು ಶುದ್ಧವಾಾಗಿರಬೇಕು. ನಾವು ಶುದ್ಧವಾದ ನೀರನ್ನು ಹೆಚ್ಚು ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಯಿಂದ ದೂರವಿರಬಹುದು. ಸಾಧ್ಯವಾದಷ್ಟು ಶುದ್ಧ ನೀರು ಕುಡಿಯುವುದರಿಂದ ಕ್ಯಾನ್ಸರ್ ಬರುವುದನ್ನು ಕೂಡ ತಡೆಯಬಹುದಾಗಿದೆ. ಇಷ್ಟೇ ಅಲ್ಲದೇ, ನೀರಿನ ಸೇವನೆಯಿಂದ ನಮ್ಮ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ.

ಇನ್ನು ಮನುಷ್ಯ ನೀರು ಕುಡಿಯದೇ ಎಷ್ಟು ಹೊತ್ತು ಬದುಕಬಲ್ಲ ಎಂಬ ಪ್ರಶ್ನೆಗೆ ಉತ್ತಮ. ಮೂರು ದಿನ ಅಂದ್ರೆ 72 ಗಂಟೆಗಳ ಕಾಲ ಮನುಷ್ಯ ಬದುಕುತ್ತಾನಂತೆ.

- Advertisement -

Latest Posts

Don't Miss