Thursday, December 4, 2025

Latest Posts

Health Tips: ತೂಕ ಇಳಿಕೆಗೆ ಸಹಕಾರಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ

- Advertisement -

Health Tips: ಅತಿಯಾದ ತೂಕದಿಂದ ಬಳಲುತ್ತಿದ್ದ ಯುವಕನೊಬ್ಬ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ತೂಕ ಇಳಿಸಿಕೊಂಡ ಘಟನೆ ಬೆಂಗಳೂರಿನ ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ.

38 ವರ್ಷದ ಯುವಕನೊಬ್ಬ 230 ಕೆಜಿ ತೂಕವಿದ್ದು ಕೀಲು ನೋವಿನಿಂದ ಬಳಲುತ್ತಿದ್ದರು. ಸ್ಥೂಲಕಾಯ ಹೊಂದಿದ್ದ ಕಾರಣ ಕೀಲು ಬದಲಾವಣೆ ಸಾಧ್ಯವಿರಲಿಲ್ಲ ಮತ್ತು ತೂಕ ಹೆಚ್ಚಿದ್ದ ಕಾರಣ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ರೋಗಿಯ BMI 50ಕ್ಕಿಂತ ಹೆಚ್ಚಿದ್ದ ಕಾರಣ ರೋಗಿಗೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಉತ್ತಮ ಎಂದು ಬೇರಿಯಾಟ್ರಿಕ್ ಮತ್ತು ಮೆಟಬಾಲಿಕ್ ಸರ್ಜನ್ ಡಾ. ಮುತ್ತರಾಜು ಕೆ.ಆರ್ ಅವರು ನಿರ್ಧರಿಸಿದರು.

ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯ ತೂಕ 130 ಕೆಜಿ ಗೆ ಇಳಿಕೆಯಾಯಿತು. ಅಲ್ಲದೆ ಕೀಲು ಬದಲಾವಣೆ ಮಾಡುವ ಅನಿವಾರ್ಯತೆ ತಪ್ಪಿತು. ಅದೇ ರೀತಿಯಾಗಿ 128 ಕೆಜಿ ತೂಕವಿದ್ದ ಮಹಿಳೆಯೊಬ್ಬರು ಡಯಟ್‌ ಮತ್ತು ವ್ಯಾಯಾಮದಿಂದ ತೂಕ ಇಳಿಕೆಯಾಗದ ಕಾರಣ ಮತ್ತು ಬಿಎಂಐ 30ಕ್ಕಿಂತ ಹೆಚ್ಚಿದ್ದ ಕಾರಣ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ 18 ತಿಂಗಳುಗಳಲ್ಲಿ ಮಹಿಳೆಯ ತೂಕ 63ಕ್ಕೆ ಇಳಿಕೆಯಾಯಿತು. ತದನಂತರ ಆಕೆ ಗರ್ಭಿಣಿಯಾದರು. ಈ ರೀತಿಯಾಗಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ನೆರವಾಯಿತು ಎಂದು ಡಾ. ಮುತ್ತರಾಜು ಕೆ.ಆರ್ ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಬಲೂನ್ ಥೆರಪಿಗಳು ಕೇವಲ 15-20% ತೂಕ ಇಳಿಕೆ ಮತ್ತು ಇಂಜೆಕ್ಷನ್‌ಗಳು ತಾತ್ಕಾಲಿಕ ಫಲಿತಾಂಶ ನೀಡುತ್ತವೆ. ಈ ಶಸ್ತ್ರಚಿಕಿತ್ಸೆಗಳು ಶೇ. 90ರಷ್ಟು ತೂಕ ಇಳಿಕೆ ಮತ್ತು ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ ಎಂದು ಡಾ. ಮುತ್ತರಾಜು ಅವರು ವಿವರಿಸಿದ್ದಾರೆ.

ಜಡ ಜೀವನಶೈಲಿ, ಆಹಾರ ಪದ್ಧತಿಯು ತೂಕ ಹೆಚ್ಚಳಕ್ಕೆ ಕಾರಣವಾಗಿದ್ದು, ಈ ಶಸ್ತ್ರಚಿಕಿತ್ಸೆಯು ಸೌಂದರ್ಯವರ್ಧಕವಲ್ಲದ ಕಾರಣ ವಿಮೆ ಸೌಲಭ್ಯಕ್ಕೆ ಒಳಪಟ್ಟಿರುತ್ತದೆ ಮತ್ತು ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ ವಾಸವಿ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎನ್ನುತ್ತಾರೆ ಡಾ. ಮುತ್ತರಾಜು ಕೆ.ಆರ್.‌

- Advertisement -

Latest Posts

Don't Miss