Health Tips: ಮಳೆಗಾಲ ಶುರುವಾಗಿದ್ದು, ಡೆಂಘ್ಯೂ ಜ್ವರ ಹಲವೆಡೆ ಶುರುವಾಗಿದೆ. ಪುಟ್ಟ ಪುಟ್ಟ ಮಕ್ಕಳಿಗೆ ಡೆಂಘ್ಯೂ ಬಂದಿದ್ದು, ವೈದ್ಯರು ಆಗಾಗ, ನಾವು ಡೆಂಘ್ಯೂ ಬರದ ಹಾಗೇ ಏನು ಮಾಡಬೇಕು ಎಂದು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ನಿಮಗೆ ಸತತವಾಗಿ ತಲೆ ನೋವು ಬರುತ್ತಿದ್ದರೆ, ಮೈಗ್ರೇನ್ ಬರುತ್ತಿದ್ದರೆ, ದೇಹದಲ್ಲಿ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದರೆ, ಜ್ವರ ಬರುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಂಡು, ವೈದ್ಯರ ಬಳಿ ಬಂದು ತಪಾಸಣೆ ನಡೆಸಿಕೊಳ್ಳಬೇಕು.
ಇನ್ನು ಡೆಂಗ್ಯೂ ಬರದಂತೆ ತಡೆಯಲು ಏನು ಮಾಡಬೇಕು ಅಂದ್ರೆ, ನಿಂತ ನೀರನ್ನು ಹಾಗೇ ಬಿಡದೇ, ಪದೇ ಪದೇ ಕ್ಲೀನ್ ಮಾಡುತ್ತಿರಬೇಕು. ಮನೆಯ ಅಕ್ಕಪಕ್ಕ, ಶಾಲೆಯ ಅಕ್ಕಪಕ್ಕ ನೀರು ನಿಲ್ಲದ ಹಾಗೆ ಮಾಡಬೇಕು. ಯಾಕಂದ್ರೆ ನಿಂತ ನೀರಿನಿಂದಲೇ, ಸೊಳ್ಳೆ ಉದ್ಭವವಾಗಿ, ಅದು ಕಚ್ಚುವುದರಿಂದಲೇ, ಡೆಂಘ್ಯು ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ, ವೀಡಿಯೋ ನೋಡಿ.

