Health Tips: ಐಸ್ ಕ್ಯೂಬ್ ರಬ್ ಮಾಡ್ಕೊಂಡ್ರೆ ಸ್ಕಿನ್ ಬರ್ನ್ ಆಗುತ್ತೆ ಹುಷಾರ್!

Health Tips: ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ, ಮುಖ ಕ್ಲೀನ್ ಆಗುತ್ತದೆ. ಫ್ರೆಶ್ ಆಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ಅದೇ ಐಸ್‌ ಕ್ಯೂಬ್‌ನಿಂದ ಮಾಡುವ ಮಸಾಜ್ ಅಗತ್ಯಕ್ಕಿಂತ ಹೆಚ್ಚಾದ್ರೂ ಅದರಿಂದಲೂ ತ್ವಚೆಯ ಸಮಸ್ಯೆ ಎದುರಿಸಬೇಕಾಗುತ್ತದೆ ಅಂತಾರೆ ವೈದ್ಯರು.

ಐಸ್‌ ಕ್ಯೂಬ್‌ನಿಂದ ಹೆಚ್ಚು ಮುಖಕ್ಕೆ ಮಸಾಜ್ ಮಾಡಿದ್ರೆ, ಸ್ಕಿನ್ ಬರ್ನ್ ಆಗತ್ತೆ ಅಂತಾರೆ ವೈದ್ಯರು. ಅಲ್ಲದೇ ನೀವು ಮನೆಯಲ್ಲೇ ಇದ್ದರೂ, ಬಿಸಿಲಿಗೆ ಹೋಗದಿದ್ದರೂ, ನಿಮಗೆ ತ್ವಚೆಯ ಸಮಸ್ಯೆ ಬಂದೇ ಬರುತ್ತದೆ. ಅಲರ್ಜಿ ಕೂಡ ಆಗಬಹುದು. ಹಾಗಂತ ನೀವು ಮನೆಯಲ್ಲಿರುವ ಕೆಲ ವಸ್ತುಗಳಿಂದ ಮನೆ ಮದ್ದು ಮಾಡಿಕ“ಂಡರೂ, ಎಲ್ಲ ಮನೆ ಮದ್ದುಗಳು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿಯೇ ಇಡುತ್ತದೆ ಅಂತಾ ಹೇಳಲೂ ಆಗದು. ಹಾಗಾಗಿ ತ್ವಚೆಯ ಸಮಸ್ಯೆಗೆ ವೈದ್ಯರ ಬಳಿ ಮಾಹಿತಿ ಪಡೆಯುವುದು ಅಗತ್ಯ ಅಂತಾರೆ ವೈದ್ಯರು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author