Thursday, September 19, 2024

Latest Posts

Health Tips: BP ಕಡಿಮೆಮಾಡಲು ನಾಡಿಶೋಧನ ಪ್ರಾಣಾಯಾಮ ಮಾಡಿ

- Advertisement -

Health Tips: ಇಂದಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೆ ಬಿಪಿ, ಶುಗರ್ ಬರುವುದು ಕಾಮನ್ ಆಗಿಬಿಟ್ಚಿದೆ. ಆದ್ರೆ ಇದೆಲ್ಲ ರೋಗ ಅನುಭವಿಸುವುದು ಅಷ್ಟು ಸುಲಭವಲ್ಲ. ಬಿಪಿ ಬಂದಾಗ, ಅನುಭವಿಸುವವರಿಗಷ್ಟೇ ಆ ಕಷ್ಟ ಅರ್ಥವಾಗುತ್ತದೆ. ಹಾಗಾಗಿ ನಾವಿಂದು ಬಿಪಿ ಬಂದಾಗ, ಯಾವ ಯೋಗ, ಧ್ಯಾನ ಮಾಡಬೇಕು ಎಂದು ತಿಳಿಯೋಣ ಬನ್ನಿ..

ಯೋಗ. ಪ್ರಾಣಾಯಾಮ ಮಾಡುವುದರಿಂದ ಬಿಪಿ ಕಂಟ್ರೋಲಿನಲ್ಲಿ ಇಡಬಹುದು. ಪ್ರಾಣಾಯಾಮ ಅಂದ್ರೆ ನಮ್ಮ ಉಸಿರಾಟವನ್ನು ಕಂಟ್ರೋಲ್ ಮಾಡುವುದು ಎಂದರ್ಥ. ನಮ್ಮ ದೇಹದಲ್ಲಿ ನಡೆಯುವ ಎಲ್ಲ ಕೆಲಸಗಳು ಕೂಡ ನಾವು ಉಸಿರನ್ನು ಹೇಗೆ ಕಂಟ್ರೋಲ್ ಮಾಡುತ್ತೇವೆ ಎಂಬುದರ ಮೇಲೆ ಡಿಪೆಂಡ್ ಆಗಿರುತ್ತದೆ ಅಂತಾರೆ, ಯೋಗ ಪಟು ಚೈತ್ರಾ ಜಯರಾಜ್.

ನಮ್ಮ ದೇಹದಲ್ಲಿ ಮೂರು ನಾಡಿಗಳಿದೆ. ಇಡ ನಾಡಿ, ಪಿಂಗಳ ನಾಡಿ, ಸುಶುಮ್ನ ನಾಡಿ. ಇಡ ಅನ್ನೋದು ಚಂದ್ರನಿಂದ ಮತ್ತು ಪಿಂಗಳ ಅನ್ನೋದು ಸೂರ್ಯನಿಂದ ಮತ್ತು ಸುಶುಮ್ನ ಎನ್ನುವುದು ಇವರಿಬ್ಬರ ಬ್ಯಾಲೆನ್ಸ್‌ನಿಂದ ನಿಗ್ರಹವಾಗುವ ನಾಡಿಗಳು. ಹಾಗಾಗಿ ನಾವು ಆರೋಗ್ಯವಾಗಿ ಇರಬೇಕು. ನಮ್ಮ ಬಿಪಿ ಕಂಟ್ರೋಲ್‌ನಲ್ಲಿ ಇರಬೇಕು ಅಂದ್ರೆ, ಪಂಗಳ ನಾಡಿ ಮತ್ತು ಇಡ ನಾಡಿಯನ್ನು ಕಂಟ್ರೋಲಿನಲ್ಲಿ ಇಡಬೇಕು.

ಹಾಗಾದ್ರೆ ಇವನ್ನು ಕಂಟ್ರೋಲ್‌ನಲ್ಲಿ ಇಡಬೇಕು ಅಂದ್ರೆ, ನಾಡಿಶೋಧನ ಪ್ರಾಣಾಯಾಮ ಮಾಡಬೇಕು. ಈ ಪ್ರಾಣಾಯಾಮ ಹೇಗೆ ಮಾಡಬೇಕು. ಇದನ್ನು ಮಾಡುವುದರಿಂದ ಏನು ಪ್ರಯೋಜನ, ಇತ್ಯಾದಿ ವಿಷಯಗಳ ಬಗ್ಗೆ ಯೋಗ ಪಟು ಚೈತ್ರಾ ಜಯರಾಜ್ ಅವರೇ ವಿವರಿಸಿದ್ದಾರೆ. ವೀಡಿಯೋ ನೋಡಿ.

- Advertisement -

Latest Posts

Don't Miss