Health Tips: ನಾವು ಈಗಾಗಲೇ ನೈಟ್ರೋಜನ್ ಇರುವ ಆಹಾರವನ್ನು ನಾವು ಸೇವಿಸಬಾರದು ಎಂದು ಹೇಳಿದ್ದೇವೆ. ಅಂಥ ಆಹಾರಗಳನ್ನು ತಿಂದ್ರೆ, ನಮ್ಮ ಆರೋಗ್ಯದ ಮೇಲೆ ಎಂಥ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರೇ ವಿವರಿಸಿದ್ದಾರೆ. ಇದೀಗ ಇನ್ನೋರ್ವ ವೈದ್ಯರು ಕೂಡ ನಾವು ಏಕೆ ಹೊಗೆಯುಕ್ತ ಪದಾರ್ಥಗಳನ್ನು ಸೇವಿಸಬಾರದು ಎಂದು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ನೈಟ್ರೋಜನ್ ಗ್ಯಾಸ್ ಸೇರಿಸಿರುವ ಪದಾರ್ಥ ತಿಂದರೆ, ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಅಲ್ಲದೇ ಅಲ್ಸರ್ ಕೂಡ ಆಗುವ ಸಾಧ್ಯತೆ ಇರುತ್ತದೆ. ನೈಟ್ರೋಜನ್ ಅಂಶ ತಿಂದಾಗ, ನಮ್ಮ ದೇಹದಲ್ಲಿ ಶುಗರ್, ಬಿಪಿ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ.
ಲಿಕ್ವಿಡ್ ನೈಟ್ರೋಜನ್ ಬಳಸಿದರೆ, ನಮ್ಮ ಬಾಯಿ, ಹೊಟ್ಟೆ, ಕರಳಿನ ಆರೋಗ್ಯ ಹಾಳಾಗುತ್ತದೆ. ಇನ್ನು ನಿಮಗೆ ಈ ಲಿಕ್ವಿಡ್ ನೈಟ್ರೋಜನ್ ಸೇವನೆಯಿಂದ, ಯಾವುದೇ ಟೇಸ್ಟ್ ಸಿಗುವುದಿಲ್ಲ. ಯಾವುದೇ ಲಾಭವೂ ಇಲ್ಲ. ಇದೊಂಥರಾ, ಮಜಾ ಕೊಡಲು, ಶೋಕಿ ಮಾಡಲಷ್ಟೇ ಬಳಸುವ ವಸ್ತುವಾಗಿದೆ. ಹಾಗಾಗಿ ಇದರ ಉಪಯೋಗ ಹೆಚ್ಚು ಮಾಡದಿದ್ದರೆ, ಉತ್ತಮ ಅಂತಾರೆ ವೈದ್ಯರು.
ಇನ್ನು ರೆಡ್‌ಮೀಟನ್ನು ಸ್ಮೋಕ್ ಮಾಡಿ ಸೇವಿಸಲಾಗುತ್ತದೆ. ಆದರೆ ಸ್ಮೋಕ್ ಮಾಡಿದ, ರೆಡ್ ಮೀಟ್ ಅತಿಯಾಗಿ ಸೇವಿಸಿದರೆ, ಕ್ಯಾನ್ಸರ್ ಬರುವುದು ಗ್ಯಾರಂಟಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.