Health Tips: ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಿಂದಾಗಿ ಯುವ ಪೀಳಿಗೆಯವರಲ್ಲಿಯೇ ಹೆಚ್ಚು ಬಿಪಿ, ಶುಗರ್ ರೋಗಗಳನ್ನು ನೋಡುತ್ತಿದ್ದೇವೆ. ಹಾಗಾದ್ರೆ ಲೋ ಬಿಪಿ ಬರಲು ಕಾರಣಗಳೇನು..? ಅದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ..
ಲೋ ಬಿಪಿ ಇರಲಿ, ಹೈ ಬಿಪಿ ಇರಲಿ, ನಾವು ಹೆಚ್ಚು ನೀರು ಕುಡಿಯಬೇಕು. ದೇಹ ನಿರ್ಜಲೀಕರಣ ಆಗಲು ಬಿಡಬಾರದು. ಲೋ ಬಿಪಿ ಇದ್ದಾಗ, ತಲೆ ತಿರುಗಿ ಬೀಳುವಂಥದ್ದು, ತಲೆ ನೋವು, ದೇಹ ಬೆವರುವುದು, ತುಂಬಾ ಸುಸ್ತಾಗುವುದು, ಕೈ ಕಾಲು ತಣ್ಣಗಾಗುತ್ತದೆ. ಹೀಗಾಗಿ ನಮ್ಮ ದೇಹದಲ್ಲಿ ಲವಣಾಂಶ ನಾರ್ಮಲ್ ಆಗಿರಬೇಕು. ಅಲ್ಲದೇ ನೀರಿನ ಅಂಶವೂ ಸರಿಯಾದ ಪ್ರಮಾಣದಲ್ಲಿ ಇರಬೇಕು.
ಬಿಪಿ ಲೋ ಆದಾಗ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಪೌಷ್ಟಿಕಾಂಶ ಭರಿತ ಆಹಾರಗಳ ಸೇವನೆ ಮಾಡಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




