Health Tips: ಪ್ರತಿದಿನ 1 ಸೇಬುಹಣ್ಣಿನ ಸೇವನೆ ಮಾಡುವುದರಿಂದ ವೈದ್ಯರನ್ನು ದೂರವಿಡಬಹುದು ಅಂತಾ ಹೇಳೋದನ್ನು ನೀವು ಕೇಳಿದ್ದೀರಿ. ಅದನ್ನು ಇಂಗ್ಲೀಷಿನಲ್ಲಿ ಆ್ಯನ್ ಆ್ಯಪಲ್ ಅ ಡೇ ಕೀಪ್ಸ್ ಡಾಕ್ಟರ್ ಅವೇ ಅಂತಾ ಹೇಳಲಾಗುತ್ತದೆ. ಅಂದ್ರೆ ಬೆಳಗ್ಗಿನ ಸಮಯದಲ್ಲಿ ದಿನಕ್ಕೆ 1 ಆ್ಯಪಲ್ ತಿಂದ್ರೆ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ರಾತ್ರಿ ಸೇಬು ಸೇವನೆ ಮಾಡಿದರೆ, ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತಿದೆ.
ಹಣ್ಣಿನ ಸೇವನೆ ಮತ್ತು ತರಕಾರಿ, ಎಳನೀರಿನ ಸೇವನೆಯನ್ನು ಸೂರ್ಯನಿರುವ ಸಮಯದಲ್ಲಿ ಮಾಡಬೇಕು ಎಂದು ಹೇಳುತ್ತಾರೆ. ಏಕೆಂದರೆ, ಹಣ್ಣು, ತರಕಾರಿ, ಎಳನೀರು ಇವೆಲ್ಲ ದೇಹಕ್ಕೆ ತಂಪು ನೀಡುವ ಆಹಾರ. ಹಾಗಾಗಿ ಸೂರ್ಯನ ಶಾಖ ಇರುವ ಸಮಯದಲ್ಲೇ ಇವುಗಳನ್ನು ಸೇವನೆ ಮಾಡಿದಾಗಲೇ ಆ ಲಾಭ ಸಿಗುತ್ತದೆ.
ಏಕೆಂದರೆ ಸಲಾಡ್ಗಳು ದಿನದಲ್ಲಿ ತಿಂದಾಗ ನಮ್ಮ ದೇಹಕ್ಕೆ ಅದು ಆಕ್ಸಿಜನ್ ನೀಡುತ್ತದೆ. ಅದೇ ಸಲಾಡ್‌ನ್ನು ನಾವು ರಾತ್ರಿ ಸೇವಿಸಿದಾಗ, ಅದು ಕಾರ್ಬನ್ ಡೈ ಆಕ್ಸೀಡ್ ನೀಡುತ್ತದೆ.
ರಾತ್ರಿ ಇವುಗಳನ್ನು ಸೇವನೆ ಮಾಡಿದ್ರೆ, ಅದು ವಿಷವಾಗಿ ಪರಿವರ್ತನೆಯಾಗುತ್ತದೆ. ಅಲ್ಲದೇ ರಾತ್ರಿ ವೇಳೆ ಆ್ಯಪಲ್ ಸೇವನೆ ಮಾಡಿದರೆ, ಅದರಿಂದ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಎಲ್ಲ ಹಣ್ಣುಗಳನ್ನು ಸಂಜೆಗೂ ಮುನ್ನವೇ ಸೇವನೆ ಮಾಡುವುದು ಉತ್ತಮ. ರಾತ್ರಿ ವೇಳೆ ಬೇಯಿಸಿದ ಪದಾರ್ಥ ತಿಂದರೆ ಉತ್ತಮ.

