Health Tips: ಇಂದಿನ ದಿನಗಳಲ್ಲಿ ಸ್ಮೋಕಿ ಫುಡ್ ತಿನ್ನೋದು ಟ್ರೆಂಡ್ ಆಗಿದೆ. ವೇಟರ್ ತಂದಿಟ್ಟ ಆಹಾರದಿಂದ ಹೊಗೆ ಬರುತ್ತದೆ. ಜೊತೆಗೆ ಬಿಸಿ ಬಿಸಿಯಾಗಿಯೂ ಇರುತ್ತದೆ. ಜನರಿಗೆ ಇಂಥ ಆಹಾರವನ್ನು ತಿನ್ನುವುದಷ್ಟೇ ಇಷ್ಟವಲ್ಲ. ಬದಲಾಗಿ, ಅದರ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು ಕೂಡ ಇಂಪಾರ್ಟೆಂಟ್. ಆದರೆ ವೈದ್ಯರು ಹೇಳೋದೇನಂದ್ರೆ, ಹೊಗೆಯುಕ್ತ ಫುಡ್ ತಿಂದ್ರೆ, ನಿಮ್ಮ ಲೈಫ್ ಹೊಗೆಯಾಗಬಹುದಂತೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಸ್ಮೋಕಿ ಪಾನ್, ಸ್ಮೋಕಿ ಐಸ್‌ಕ್ರೀಮ್ ಸದ್ಯ ಟ್ರೆಂಡಿಂಗ್‌ನಲ್ಲಿರುವ ತಿಂಡಿ. ನಾವು ಅದನ್ನು ತಿಂದರೂ, ನಮ್ಮ ಬಾಯಿ ಸುಡುವುದಿಲ್ಲ. ಯಾಕಂದ್ರೆ, ಅದರಲ್ಲಿ ನೈಟ್ರೋಜನ್ ಗ್ಯಾಸ್ ಬಳಸಿುತ್ತಾರೆ. ಹಾಾಗಾಗಿ ಆ ಆಹಾರಗಳಿಂದ ಹೊಗೆ ಬಂದರೂ ಕೂಡ, ಅದು ನಮ್ಮ ಬಾಯಿ ಸುಡುವುದಿಲ್ಲ.
ಆದರೆ ನೈಟ್ರೋಜನ್ ಆಹಾರಗಳು ನಮ್ಮ ದೇಹದೊಳಗೆ ಹೋಗಿ, ಋಣಾತ್ಮಕ ಪರಿಣಾಮ ಬೀರುತ್ತದೆ. ಇದರ ಸೇವನೆಯಿಂದ ಜೀವ ಹೋಗುವ ಸಮಭವವೇ ಇರುತ್ತದೆ. ಹಾಗೆ ಆರೋಗ್ಯ ಹಾಳಾದಾಗ, ತಕ್ಷಣ ಸರಿಯಾದ ಚಿಕಿತ್ಸೆ ಸಿಗದೇ ಇದ್ದಲ್ಲಿ, ಆರೋಗ್ಯ ಸಂಪೂರ್ಣವಾಗಿ ಹಾಳಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.