Health Tips: ಕೆಲವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಈಗಿನ ಜೀವನಶೈಲಿ, ನಾವು ಸೇವಿಸುವ ಆಹಾರ ಹೀಗೆ ಹಲವು ಕಾರಣಗಳಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ. ಅದರಲ್ಲೂ ಉದರಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಊಟವಾದ ತಕ್ಷಣ ಉದರ ಸಮಸ್ಯೆ ಕಾಣಿಸಿಕ“ಂಡರೆ ಏನು ಮಾಡಬೇಕು ಅಂತಾ ತಿಳಿಯೋಣ.
ಈ ಸಮಸ್ಯೆ ಸರಿಯಾಗಿಸಲು ನೀವು 1 ಕಶಾಯ ಸೇವನೆ ಮಾಡಬೇಕು. ಆ ಕಶಾಯ ಮಾಡಲು ನಿಮಗೆ 1 ಸ್ಪೂನ್ ಜೀರಿಗೆ, ಸೋಂಪು, 1 ಏಲಕ್ಕಿ, ಶುಂಠಿ ಬೇಕು. ನೀವು 1 ಗ್ಲಾಸ್ ನೀರನ್ನು ಕುದಿಸಿ, ಆ ಕುದಿಯುವ ನೀರಿಗೆ ಜೀರಿಗೆ, ಸೋಂಪು, ಏಲಕ್ಕಿ, ಶುಂಠಿ ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು.
ಬಳಿಕ ಸೋಸಿ, ಗ್ಲಾಸ್ಗೆ ಹಾಕಿ. ಆಹಾರ ಸೇವನೆಯ ಸ್ವಲ್ಪ ಸಮಯದ ಬಳಿಕ ಈ ಕಶಾಯವನ್ನು ಉಗುರು ಬೆಚ್ಚಾಗಿಸಿ, ಸೇವಿಸಿ. ಇದರಿಂದ ನಿಮ್ಮ ಉದರ ಸಮಸ್ಯೆ ದೂರವಾಗುತ್ತದೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಹೊಟ್ಟೆ ಉಬ್ಬುವ ಸಮಸ್ಯೆ ಸರಿಯಾಗುತ್ತದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.




