Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಕಶಾಯ ಸೇವಿಸಿ

Health Tips: ಮಳೆಗಾಲ ಶುರುವಾಗಿದೆ. ಜ್ವರ, ಕೆಮ್ಮು, ನೆಗಡಿ ದಾಳಿ ಮಾಡೋಕ್ಕೆ ರೆಡಿಯಾಗಿದೆ. ಇಂಥ ಸಮಯದಲ್ಲಿ ನಾವು ಕೂಡ ಆ ದಾಳಿ ಎದುರಿಸಲು ಸಿದ್ಧರಾಗಿರಬೇಕು. ಅಂದ್ರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು. ಹಾಗಾದ್ರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಬೇಕು ಅಂದ್ರೆ ನಾವು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಹಳೆಯ ಕಾಲದಲ್ಲಿ, ಅಥವಾ ನಮ್ಮ ಅಜ್ಜ- ಅಜ್ಜಿ ಕಾಲದಲ್ಲಿ ಆರೋಗ್ಯ ಸರಿಯಾಗಿಲ್ಲ, ಜ್ವರ, ಕೆಮ್ಮು, ನೆಗಡಿ ಬಂತು ಅಂದ್ರೆ, ಕಶಾಯ ಕುಡಿಯಲು ಹೇಳುತ್ತಿದ್ದರು. ಕೆಲವರಂತೂ ಕಶಾಯ ಕುಡಿದೇ, ಸರಿಯಾಗುತ್ತಿದ್ದರು. ಅವರಿಗೆ ವೈದ್ಯರ ಬಳಿ ಹೋಗುವ ಅವಶ್ಯಕತೆಯೇ ಇರಲಿಲ್ಲ.

ಅದೇ ರೀತಿ ನೀವು ಕೂಡ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ, ಕಶಾಯ ಮಾಡಿ ಕುಡಿಯಿರಿ. ಹಾಗೆ ಕಶಾಯ ಮಾಡಲು ನಿಮಗೆ ಶುಂಠಿ, ನಿಂಬೆರಸ, ಜೇನು ಬೇಕು. 1 ಪಾತ್ರೆಗ 1 ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಿ, ಬಳಿಕ ಅದಕ್ಕೆ ಶುಂಠಿ ಜಜ್ಜಿ ಹಾಕಿ ಮತ್ತೆ ಕುದಿಸಿ.

ನಂತರ ಈ ನೀರನ್ನು ಸೋಸಿ, ತಣ್ಣಗಾಗಲು ಬಿಡಿ. ಉಗುರು ಬೆಚ್ಚಗಿರಲು, 1 ಸ್ಪೂನ್ ಜೇನುತುಪ್ಪ ಮತ್ತು 1 ಸ್ಪೂನ್ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಯಾವಾಗ ಬೇಕಾದರೂ ನೀವು ಈ ಕಶಾಯ ಸೇವಿಸಬಹುದು. ಆದರೆ ನೆನಪಿರಲಿ ನಿಮಗೆ ಈ ಕಶಾಯ ಅಲರ್ಜಿ ಆಯಿತು ಎಂದಾದಲ್ಲಿ ನೀವು ವೈದ್ಯರ ಬಳಿ ಸಲಹೆ ಕೇಳುವುದು ಉತ್ತಮ.

About The Author