Friday, September 20, 2024

Latest Posts

Health Tips: ಒಂದು ಬಾಳೆಹಣ್ಣಿನ ಸೇವನೆಯಿಂದ ಹಲವು ಆರೋಗ್ಯಕರ ಲಾಭ

- Advertisement -

Health Tips: ಎಲ್ಲ ಸೀಸನ್‌ನಲ್ಲಿ ಸುಲಭವಾಗಿ ಸಿಗುವ ಹಣ್ಣು ಅಂದ್ರೆ, ಅದು ಬಾಳೆಹಣ್ಣು. ಅದರಲ್ಲೈ ಬೇರೆ ಬೇರೆ ವಿಧದ ಬಾಳೆಹಣ್ಣುಗಳನ್ನು ನಾವು ನೋಡಬಹುದು. ಪಚ್ಚಬಾಳೆಹಣ್ಣು, ಮೈಸೂರು ಬಾಳೆಹಣ್ಣು, ಬೂದಿಬಾಳೆಹಣ್ಣ, ನೇಂದ್ರ ಬಾಳೆ ಹಣ್ಣು, ಹೀಗೆ ಹಲವು ವಿಧದ ಬಾಳೆಹಣ್ಣುಗಳನ್ನು ಬೆಳೆಯಲಾಗುತ್ತದೆ. ಒಂದೊಂದು ರೀತಿಯ ಬಾಳೆಹಣ್ಣು, ಒಂದೊಂದು ರೋಗವನ್ನು ಗುಣಪಡಿಸಲು ಸಹಕಾರಿಯಾಗಿದೆ. ಹಾಾಗಾದ್ರೆ ಪ್ರತಿದಿನ ಒಂದು ಬಾಳೆಹಣ್ಣಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.

ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ. ಹೊಟ್ಟೆ ನೋವಾಗುತ್ತಿದೆ. ಅಥವಾ ಹೊಟ್ಟೆಯ ಆರೋಗ್ಯ ಸಮಸ್ಯೆ ಇದೆ ಎಂದರೆ, ಒಂದೇ ಒಂದು ಬಾಳೆಹಣ್ಣು ತಿಂದರೆ, ಸಾಕು. ತಿಂದ ಆಹಾರ ಸರಾಗವಾಗಿ ಜೀರ್ಣವಾಗಿ, ಹೊಟ್ಟೆಯ ಎಲ್ಲ ಆರೋಗ್ಯ ಸಮಸ್ಯೆಗೂ ಪರಿಹಾರ ಸಿಗುತ್ತದೆ.

ಮಲಬದ್ಧತೆ ಸಮಸ್ಯೆ ಉಂಟಾಗಿದ್ದಲ್ಲಿ, ಬಾಳೆಹಣ್ಣು ತಿಂದಲ್ಲಿ, ಸರಿಯಾಗಿ ಮಲವಿಸರ್ಜನೆಯಾಗುತ್ತದೆ. ಹಾಗಂತ ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಬಾಳೆಹಣ್ಣಿನ ಸೇವನೆ ಮಾಡಬೇಡಿ. ಏಕೆಂದರೆ, ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಾಳೆಹಣ್ಣಿನ ಸೇವನೆ ಮಾಡಿದರೆ, ನೆಗಡಿಯಾಗುತ್ತದೆ. ಹಾಗಾಗಿ ಬೆಳಿಗ್ಗೆ ತಿಂಡಿ ತಿಂದ ಬಳಿಕ ಅಥವಾ ಊಟವಾದ ಬಳಿಕ ಬಾಳೆಹಣ್ಣು ತಿನ್ನಿ.

ಜೀರ್ಣಕ್ರಿಯೆ ಸಮಸ್ಯೆ, ಮಲಬದದ್ಧತೆ ಸಮಸ್ಯೆಗಳಿಂದ ಮುಕ್ತಿ ಸಿಕ್ಕರೆ, ನಮ್ಮ ಸೌಂದರ್ಯ ಮತ್ತು ಆರೋಗ್ಯ ಎರಡೂ ವೃದ್ಧಿಯಾಗುತ್ತಿದೆ ಎಂದರ್ಥ. ಬಾಳೆಹಣ್ಣಿನ ಸೇವನೆಯಿಂದ ಮುಖದಲ್ಲೂ ಕಳೆ ಬರುತ್ತದೆ. ಜೊತೆಗೆ ಕೂದಲು ಕೂಡ ಚೆನ್ನಾಗಿ ಬೆಳೆಯುತ್ತದೆ.

ದೇಹಕ್ಕೆ ಪ್ರೋಟಿನ್ ಬೇಕು ಎಂದಲ್ಲಿ, ಬಾಳೆಹಣ್ಣಿನ ಸೇವನೆ ಮಾಡಿ. ಅಥವಾ ನೆನೆಸಿಟ್ಟ ಡ್ರೈಫ್ರೂಟ್ಸ್, ಬಾಳೆಹಣ್ಣು, ಖರ್ಜೂರ, ಹಾಲು ಸೇರಿಸಿ, ಬಾಳೆಹಣ್ಣಿನ ಮಿಲ್ಕ್ ಶೇಕ್ ತಯಾರಿಸಿ ಕುಡಿಯಿರಿ. ಇದರಿಂದ ದೇಹಕ್ಕೆ ಪ್ರೋಟೀನ್ ಸಿಗುವುದಲ್ಲದೇ, ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ.

ಇನ್ನು ಎಲ್ಲಕ್ಕಿಂತ ಮುಖ್ಯ ವಿಚಾರ ಅಂದ್ರೆ ಬಾಳೆಹಣ್ಣು ತಿಂದ ಬಳಿಕ, ನೀರು ಕುಡಿಯಬಾರದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ರೀತಿ, ಸೂರ್ಯಾಸ್ತವಾದ ಬಳಿಕವೂ ಬಾಳೆಹಣ್ಣಿನ ಸೇವನೆ ಮಾಡಬಾರದು. ಇದು ಕೂಡ ಆರೋಗ್ಯಕ್ಕೆ ಉತ್ತಮವಲ್ಲ.

- Advertisement -

Latest Posts

Don't Miss