Health Tips: ಬರೀ ಆರೋಗ್ಯಕರ ಆಹಾರ ಸೇವನೆಯಿಂದ ನಮ್ಮ ಜೀವನ ಉತ್ತಮವಾಗಿರುವುದಿಲ್ಲ. ನಾವು ಯಾವ ಸಮಯದಲ್ಲಿ ಎಷ್ಟು ಆರೋಗ್ಯಕರ ಆಹಾರ ಸೇವನೆ ಮಾಡುತ್ತೇವೆ ಅನ್ನೋದು ಕೂಡ ಮುಖ್ಯ. ಹಾಗಾಗಿ ನಾವಿಂದು ರಾತ್ರಿ ತಡವಾಗಿ ಆಹಾರ ಸೇವನೆ ಮಾಡಿದರೆ ಯಾವ ಆರೋಗ್ಯ ಸಮಸ್ಯೆ ಬರುತ್ತದೆ ಅಂತಾ ಹೇಳಲಿದ್ದೇವೆ ಕೇಳಿ.
ವೈದ್ಯರು ಹೇಳುವ ಪ್ರಕಾರ, ನಾವು ಸಂಜೆ 7.30ರಿಂದ 8 ಗಂಟೆಯ“ಳಗೆ ಆಹಾರ ಸೇವನೆ ಮಾಡಬೇಕು. ಆದರೆ ನೀವು ರಾತ್ರಿ ತಡವಾಗಿ ಅಂದರೆ 10 ಗಂಟೆ ಬಳಿಕ ಆಹಾರ ಸೇವನೆ ಮಾಡುವವರಾಗಿದ್ದರೆ, ಅನಾರೋಗ್ಯವನ್ನು ನೀವೇ ಬರ ಮಾಡಿದಂತೆ ಅಂತಾರೆ ವೈದ್ಯರು.
ನಾವು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ನಿದ್ರಿಸಿದ್ದಲ್ಲಿ, ಮತ್ತು ಬೆಳಿಗ್ಗೆ ಬೇಗ ಎದ್ದು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿದ್ದಲ್ಲಿ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ದೇಹದಲ್ಲಿ ಕಾರ್ಯನಿರ್ವಹಿಸುವ ಭಾಗಗಳು 1 ಲಯ ಅನುಸರಿಸುತ್ತದೆ.
ಆ ಲಯದ ಕಾರಣ, ಬೆಳಗಿನ ಸಮಯದಲ್ಲಿ ಅದು ಆ್ಯಕ್ಟೀವ್ ಇರುತ್ತದೆ ಮತ್ತು ರಾತ್ರಿ ವೇಳೆ ವಿಶ್ರಾಂತಿಯ ಲಯದಲ್ಲಿ ಇರುತ್ತದೆ. ಹಾಗಾಗಿ ನಾವು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು, ನಿದ್ರಿಸಬೇಕು. ಆದರೆ ನಾವೇನಾದರೂ ಆ್ಯಕ್ಟೀವ್ ಇರಬೇಕಾದ ಸಮಯದಲ್ಲಿ ನಿದ್ರಿಸಿ, ನಿದ್ರಿಸಬೇಕಾದ ಸಮಯದಲ್ಲಿ ಆಹಾರ ಸೇವನೆ ಮಾಡಿದರೆ ಲಯ ತಪ್ಪಿ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು.
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ಬೇಗ ನಿದ್ರಿಸಿದರೆ, ನಮ್ಮ ಉದರದ ಆರೋಗ್ಯ ಚೆನ್ನಾಗಿರುತ್ತದೆ. ಹೃದಯದ ಆರೋಗ್ಯ ಚೆನ್ನಾಗಿದ್ದು, ಆರೋಗ್ಯ ಆಯಸ್ಸು ಎರಡೂ ಚೆನ್ನಾಗಿ ಅಭಿವೃದ್ಧಿಯಾಗುತ್ತದೆ.

