Health Tips: ಕೆಲವರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಹಾಗೆ ಕೋಪ ಬಂದಾಗ ಅವರು ಏನು ಮಾಡುತ್ತಾರೆ…? ಏನು ಮಾತನಾಡುತ್ತಾರೆ ಅನ್ನೋದು ಸ್ವತಃ ಅವರಿಗೇ ತಿಳಿದಿರುವುದಿಲ್ಲ. ಅಲ್ಲದೇ, ಕೆಲವು ಸಂಬಂಧಗಳು ಕೂಡ ಹಾಳಾಗಿ ಹೋಗುತ್ತದೆ. ಹಾಗಾದರೆ ಕೋಪ ಅನ್ನೋದು ಮಾನಸಿಕ ರೋಗಾನಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ ಕೋಪ ಅನ್ನೋದು ಯಾವುದೇ ಮನೋರೋಗವಲ್ಲ. ಇದು ನಮ್ಮ ಜೀವನದ 1 ಭಾಗ. ಆದರೆ ಈ ಕೋಪ ವಿಪರೀತವಾದ್ರೆ, ಹಲವು ದುರ್ಘಟನೆ ಸಂಭವಿಸುವ ಸಾಧ್ಯತೆಗಳಿರುತ್ತದೆ. ಇದಕ್ಕೆ ನಾವೇ ಪರಿಹಾರ ಮಾಡಿಕ“ಳ್ಳಬೇಕು.
ಯಾವ ಕಾರಣಕ್ಕೆ ಕೋಪ ಬಂದಿದೆ ಎನ್ನುವುದನ್ನು ತಿಳಿದು, ಅದಕ್ಕೆ ಪರಿಹಾರ ಏನು ಮಾಡಿಕ“ಳ್ಳಬಹುದೆಂದು ತಾಳ್ಮೆಯಿಂದ ಯೋಚಿಸಬೇಕು. ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಕೋಪ ಮಾಡಿದರೆ, ಅವರ ಕೋಪ ತಣ್ಣಗಾದ ಬಳಿಕ, ಕೋಪ ಬಂದಿದ್ದೇಕೆ..? ಅನ್ನೋದರ ಬಗ್ಗೆ ಚರ್ಚಿಸಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.