Health Tips: ಮಕ್ಕಳನ್ನು ಯಾವ ರೀತಿ ಬೆಳೆಸಬೇಕು..? ಮಕ್ಕಳ ಸುತ್ತಮುತ್ತ ಯಾಾವ ರೀತಿಯ ವಾತಾವರಣ ಸೃಷ್ಟಿಸಬೇಕು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ಮಕ್ಕಳಿಗೆ ನೀವು ನಿಜವಾದ ಪ್ರೀತಿ ನೀಡಬೇಕು ಅಂದ್ರೆ, ಅವರಿಗೆ ಅಪ್ಪುಗೆಯನ್ನು ನೀಡಬೇಕು. ಮಕ್ಕಳಿಗಷ್ಟೇ ಅಲ್ಲದೇ, ಪತಿ- ಪತ್ನಿ ಕೂಡ ಏನೇ ಮಿಸ್ ಅಂಡಸ್ಟ್ಯಾಂಡಿಂಗ್ ಇದ್ದರುನೂ, ಅಪ್ಪುಗೆಯಿಂದ ಆ ಸಮಸ್ಯೆ ಎಲ್ಲವೂ ಪರಿಹಾರವಾಗುತ್ತದೆ ಅಂತಾರೆ ವೈದ್ಯರು. ಪುಟ್ಟ ಮಕ್ಕಳಿಗೆ ಅಪ್ಪಿಗೆ ಅನ್ನೋದು ತುಂಬಾ ಮುಖ್ಯವಾಗಿರುತ್ತದೆ. ಅಪ್ಪ ಅಥವಾ ಅಮ್ಮ ಅಪ್ಪುಗೆ ನೀಡಿದರೆ, ಅವರ ಜತೆಗಿನ ಬಾಂಧವ್ಯ ಗಟ್ಟಿಯಾಗುತ್ತ ಹೋಗುತ್ತದೆ.
ಇನ್ನು ಮಗು ಶಾಲೆಗೆ ಹೋಗುವ ಸಮಯದ ತನಕ ಮಗುವಿನ ಜತೆ ಯಾರಾದರೂ ಇರುವುದು ತುಂಬಾ ಮುಖ್ಯ. ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋದರೆ, ಮಗುವಿಗೆ ಪ್ರೀತಿ, ಮಮಕಾರದ ಕೊರತೆ ಉಂಟಾಗುತ್ತದೆ. ಆದರೆ ಕೆಲವರು ಅಜ್ಜ ಅಜ್ಜಿ ಇದ್ದಾರೆ ಅವರು ನೋಡಿಕೋಳ್ಳುತ್ತಾರೆ ಎನ್ನುತ್ತಾರೆ. ಆದರೆ ಅಜ್ಜ ಅಜ್ಜಿಯ ಜತೆ ಇದ್ದಾಗ, ಅವರು ತಮ್ಮ ಅಳಿಯ ಅಥವಾ ಸೊಸೆಯ ಬಗ್ಗೆ ಹೀಯಾಳಿಸುವುದು ಮಾಡಿದಾಗ, ಆ ಮಾತುಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
ಆ ವೇಳೆ ಅಮ್ಮನನ್ನು ಕಂಡರೆ ಮಕ್ಕಳಿಗೆ ಆಗುವುದಿಲ್ಲ, ಅಪ್ಪನನ್ನು ನೋಡಿದ್ರೆ ಶತ್ರುತ್ವದ ಭಾವನೆ ಬರುವುದೆಲ್ಲ ಆಗುತ್ತದೆ. ಇಂಥ ಕೇಸ್‌ಗಳು ಸುಮಾರು ಇರುತ್ತದೆ. ಆದರೆ ಇದೇ ರೀತಿ ನಿಮ್ಮ ಮಕ್ಕಳಿಗೆ ಆಗಬಾರದು ಅಂದ್ರೆ, ಅಪ್ಪ ಅಥವಾ ಅಮ್ಮ ಇಬ್ಬರಲ್ಲಿ ಯಾರಾದರೂ ಮಗುವಿನ ಜತೆ ಇದ್ದು ಅದರ ಕಾಳಜಿ ವಹಿಸಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.