Health Tips: ಏಕಾಂಗಿತನವನ್ನು ಹೋಗಲಾಡಿಸುವುದು ಹೇಗೆ..?

Health Tips: ಇಂದಿನ ಕಾಲದಲ್ಲಿ ನಾವು ಏನು ನೋಡುತ್ತೇವೋ, ಅದೆಲ್ಲವೂ ಸತ್ಯವಲ್ಲ. ಏಕೆಂದರೆ, ನಾವು ಸಾಮಾಜಿಕ ಜಾಲತಾಣದಲ್ಲಿ ಕಲರ್ ಕಲರ್ ಫೋಟೋ ಹಾಕಿ, ನಾನು ಆರಾಮವಾಗಿದ್ದೇನೆ ಅಂತಾ ತೋರಿಸಿಕ“ಳ್ಳುವವರು ಡಿಪ್ರೆಶನ್‌ಗೆ ಬಲಿಯಾಗಿರ್ತಾರೆ. ತನ್ನ ಸೆಲ್‌ ಫೋನ್‌ನಲ್ಲಿ ರಾಶಿ ರಾಶಿ ನಂಬರ್‌ ಇದ್ದರೂ, ಸಂಬಂಧಿಕರು, ಸ್ನೇಹಿತರು ಇದ್ದರೂ, ಯಾರ ಸುದ್ದಿಯೂ ಬೇಡ ಅನ್ನುವಂತೆ ಇರುತ್ತಾರೆ. ಇದೆಲ್ಲದಕ್ಕೂ ಕಾರಣ ಏಕಾಂಗಿತನ. ಹಾಗಾದ್ರೆ ನಿಮ್ಮ ಏಕಾಂಗಿತನ ಹೋಗಲಾಡಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಏಕಾಂಗಿತನ ಅದೆಷ್ಟು ಹಾನಿಕಾರಕ ಅಂದ್ರೆ, 1 ದನಿಕ್ಕೆ 15 ಸಿಗರೇಟ್ ಸೇದಿದಷ್ಟು ಅಂತೆ. ಹಾಗಾಗಿ ಏಕಾಂಗಿಯಾಗಿರಲು ಬಯಸಿದರೂ, ಬೇಸರದಲ್ಲಿರಬಾರದು. ಇಂಗ್ಲೀಷ್‌ನಲ್ಲಿ ಬಿ ಹ್ಯಾಪಿ, ಬಿ ಅಲೋನ್ ಅನ್ನೋ ಮಾತಿದೆ. ಅಂದ್ರೆ ಒಬ್ಬಂಟಿಯಾಗಿರಿ, ಖಷಿಯಾಗಿರಿ ಎಂದರ್ಥ. ಆದರೆ ಒಬ್ಬಂಟಿ ಬೇರೆ ಏಕಾಂಗಿ ಬೇರೆ.

ಒಬ್ಬಂಟಿ ಅಂದ್ರೆ ಯಾರ ಸುದ್ದಿಗೂ ಹೋಗದೇ, ತನಗೆ ಬೇಕಾಗ ಹಾಗೆ ಜಾಲಿಯಾಗಿ ಜೀವನ ಮಾಡೋದು. ಏಕಾಂಗಿ ಅಂದ್ರೆ, ಒಬ್ಬಂಟಿ ಇದ್ದರೂ, ಏನೋ ಕಳೆದುಕ“ಂಡ ಭಾವದಲ್ಲಿರುವುದು. ಬೇಸರವಾಗಿರುವುದು. ಇದು ಜೀವಕ್ಕೆ ಹಾನಿಕಾರಕವಾಗಿದೆ.

ನೀವು ಏಕಾಂಗಿತನದಿಂದ ಜಾಲಿಯಾಗಿರಬೇಕು ಅಂದ್ರೆ, ನೀವು ಯಾರಿಲ್ಲದಿದ್ದರೂ ನಾನು ಖುಷಿಯಾಗಿರಬಲ್ಲೆ ಅಂತಾ ಬದೋಕೋದನ್ನು ಕಲಿಯಬೇಕು. ಅದನ್ನು ಮನದಟ್ಟು ಮಾಡಿಕ“ಳ್ಳಬೇಕು. ನಿಮಗೆ ನೀವೇ ಉತ್ತಮ ಸ್ನೇಹಿತರಾಗಿ.

ಎರಡನೇಯದಾಗಿ ಮಾತನಾಡುವುದನ್ನು ಕಲಿಯಿರಿ. ಹಾಗಂತ ಸಿಕ್ಕ ಸಿಕ್ಕವರನ್ನೆಲ್ಲ ಸ್ನೇಹಿತರನ್ನಾಗಿ ಮಾಡಿಕ“ಳ್ಳಿ ಅಂತಲ್ಲ. ಬದಲಾಗಿ, ನಿಮ್ಮ ಸಹೋದ್ಯೋಗಿಗಳ ಜತೆ, ನೆರೆ ಮನೆಯವರ ಜತೆ ಮನಬಿಚ್ಚಿ ಮಾತನಾಡಿರಿ. ಹೀಗೆ ಪ್ರತಿದಿನ ನಗುವುದನ್ನು, ಮಾತನಾಡುವುದನ್ನು ಕಲಿತಾಗ, ನಿಮ್ಮ ಜೀವನವೇ ಸುಗಮ ಅನ್ನಿಸಲು ಶುರುವಾಗುತ್ತದೆ.

ಇನ್ನು ಅವರೇ ಮಾತನಾಡಲಿ ಎಂದು ಕಾಯುವ ಬದಲು, ನೀವೇ 1 ಹಾಯ್ ಎಂದುಬಿಡಿ. ಹಾಗೆ ಪರಿಚಯ ಶುರುವಾಗುತ್ತದೆ. ಏಕಾಂಗಿತನ ದೂರವಾಗುತ್ತದೆ. ದಾನ ಮಾಡಲು ಕಲಿಯಿರಿ, ಪ್ರಾಣಿಗಳಿಗೆ ಆಹಾರ ನೀಡಿ. ಇವೆಲ್ಲವೂ ಮನಸ್ಸಿಗೆ ಮುದ ನೀಡುವ ಕೆಲಸಗಳು. ಜತೆಗೆ ಧ್ಯಾನ ಮಾಡಿದರೆ ಇನ್ನೂ ಉತ್ತಮ.

ಸೆಲ್ ಫೋನ್, ಲ್ಯಾಪ್‌ಟಾಪ್, ಟಿವಿ ನೋಡುವುದನ್ನು ಕಡಿಮೆ ಮಾಡಿ. ಇದೇ ಸಮಯವನ್ನು ಕಥೆ ಓದಲು, ಹಾಡು ಕೇಳಲು, ವಾಕಿಂಗ್, ಯೋಗ ಮಾಡಲು, ಹರಟಲು, ಸ್ವಿಮಿಂಗ್, ಸೈಕ್ಲಿಂಗ್ ಹೀಗೆ ಮನಸ್ಸಿಗೆ ಮುದ ನೀಡುವ ಮತ್ತು ಆರೋಗ್ಯ ನೀಡುವ ಕೆಲಸಗಳಿಗೆ ಮೀಸಲಿಡಿ. ಈ ನಿಯಮವನ್ನು ಅನುಸರಿಸಿ, ಏಕಾಂಗಿತನ ದೂರವಾಗಿಸಿ.

About The Author