Thursday, October 17, 2024

Latest Posts

Health Tips: ಊರಲ್ಲಿ ಒಬ್ರಿಗೆ ಬಂದ್ರೆ ಇಡೀ ಊರಿಗೆ ಬರುತ್ತೆ ಈ ರೋಗಗಳು

- Advertisement -

Health Tips: ಮನೆಯಲ್ಲಿ ಒಬ್ಬರಿಗೆ ಶುರುವಾಗುವ ರೋಗ ಮನೆಮಂದಿಗೆಲ್ಲ ಬಂದರೆ, ಅಥವಾ ಊರಲ್ಲಿ ಒಬ್ಬರಿಗೆ ಬಂದ ರೋಗ ಇಡೀ ಊರ ಜನರಿಗೆ ಹಬ್ಬಿದರೆ, ಅಂಥ ರೋಗವನ್ನು ಸಾಂಕ್ರಾಮಿಕ ರೋಗ ಎನ್ನಲಾಗುತ್ತದೆ. ಇಂಥ ರೋಗಗಳು ಬಂದಾಗ, ಇನ್ನೊಬ್ಬರಿಗೆ ಅದು ಹರಡಂತೆ ಎಚ್ಚರಿಕೆ ವಹಿಸಬೇಕು. ಅದಕ್ಕೆ ಬೇಕಾದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ವೈದ್ಯರು.

ಮೊದಲನೇಯದಾಗಿ ಹೆಚ್ಚು ಸ್ಪ್ರೆಡ್ ಆಗುವ ಸಾಂಕ್ರಾಮಿಕ ರೋಗ ಎಂದರೆ, ಶ್ವಾಸಕೋಶ ಸಮಸ್ಯೆ. ಒಮ್ಮೆ ಒಂದು ಸೀನು ಬಂದರೆ, ಅದರಲ್ಲಿರುವ ಲಕ್ಷಾಂತರ ಬ್ಯಾಕ್ಟಿರೀಯಾಗಳು, ಇಡೀ ಮನೆ ಮಂದಿಯನ್ನೇ ಆವರಿಸುತ್ತದೆ. ಇನ್ನು ಚರ್ಮರೋಗಗಳು ಕೂಡ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾಗಿ ಇನ್ನೊಬ್ಬರು ಹಾಕಿದ ಬಟ್ಟೆಯನ್ನು ನಾವು ಧರಿಸಬಾರದು. ಅಂಗಡಿಯಿಂದ ಕೊಂಡು ತಂದ ಬಟ್ಟೆಗಳನ್ನು ತೊಳೆದೇ ಬಳಸಬೇಕು ಎನ್ನುತ್ತಾರೆ. ಆದರೆ ಸೋರಿಯಾಸಿಸ್ ಎನ್ನುವ ಚರ್ಮ ಖಾಯಿಲೆ ಮಾತ್ರ, ಹರಡುವ ಖಾಯಿಲೆ ಅಲ್ಲ ಅಂತಾರೆ ವೈದ್ಯರು.

ಇನ್ನು ವಾಂತಿ ಬೇಧಿ ಕೂಡ ಒಬ್ಬರಿಗೆ ಶುರುವಾದರೆ, ಮನೆಮಂದಿಗೆಲ್ಲ ಬರುವ ಸಾಧ್ಯತೆ ಇರುತ್ತದೆ. ಇನ್ನು ಟೈಫಾಯ್ಡ್, ಡೆಂಗ್ಯೂ, ಚಿಕನ್ ಗುನ್ಯ ಸೇರಿ ಹಲವು ಜ್ವರಗಳು ಕೂಡ ಸೋಂಕುರೋಗಗಳಾಗಿದ್ದು, ಇದು ಕೂಡ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಹಾಗಾಗಿ ಇಂಥ ರೋಗಗಳು ಬಂದಾಗ, ಅದು ಇನ್ನೊಬ್ಬರಿಗೆ ಹರಡುವ ಮುನ್ನ, ನೀವೇ ಆ ಬಗ್ಗೆ ಕಾಳಜಿ ವಹಿಸಿ, ಸರಿಯಾದ ಮನೆ ಮದ್ದು, ಆಹಾರ ಸೇವನೆ, ಬಿಸಿ ನೀರಿನ ಸೇವನೆ, ಚಿಕಿತ್ಸೆ ಎಲ್ಲವನ್ನೂ ಪಡೆದು, ರೋಗ ಬಗೆಹರಿಸಿಕೊಳ್ಳಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss