Health Tips: ಡ್ರೈಫ್ರೂಟ್ಸ್ಗಳಲ್ಲಿ ಉತ್ತಮ ಪೋಷಕಾಂಶಗಳಿರುತ್ತದೆ. ಅದನ್ನು ಸೇವಿಸಿದ್ರೆ, ನಮ್ಮ ಆರೋಗ್ಯವೂ ಚೆನ್ನಾಗಿರತ್ತೆ ಅಂತಾ ನಮಗೆಲ್ಲ ತಿಳಿದಿದೆ. ಅದೇ ರೀತಿ, ಈ ಡ್ರೈಫ್ರೂಟ್ಸ್ನಲ್ಲಿ 1 ಆದ ಅಂಜೂರದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.
- ಅಂಜೂರವನ್ನು ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುನ್ನ ತಿನ್ನಬೇಕು. ಪ್ರತಿದಿನ 1 ಅಂಜೂರ ತಿಂದರೂ ಸಾಕು. ಇದರಿಂದ ಮಲವಿಸರ್ಜನೆ, ಉದರ ಸಮಸ್ಯೆಗೆ ಪರಿಹಾರ ಸಿಗುತ್ತದೆ.
- ಉದರ ಸಮಸ್ಯೆ ಸರಿಯಾದರೆ, ಜೀರ್ಣಶಕ್ತಿ ಚೆನ್ನಾಗಿರುತ್ತದೆ. ಜೀರ್ಣಶಕ್ತಿ ಚೆನ್ನಾಗಿದ್ದರೆ, ನಮ್ಮ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.
- ಅಲ್ಲದೇ ಅಂಜೂರದ ಸೇವನೆಯಿಂದ ನಮ್ಮ ಮೂಳೆ ಗಟ್ಟಿಯಾಗಿರುತ್ತದೆ. ಏಕೆಂದರೆ, ಇದರಲ್ಲಿ ಭರಪೂರ ಕ್ಯಾಲ್ಶಿಯಂ ಇದ್ದು, ಇದು ನಮ್ಮ ಮೂಳೆ ಬಲವಾಗಿಡಲು ಸಹಕಾರಿಯಾಗಿದೆ.
- ಇನ್ನು ಪ್ರತಿದಿನ ನೆನೆಸಿದ ಅಂಜೂರ ತಿನ್ನುವುದರಿಂದ ನಮ್ಮ ಕೂದಲ ಆರೋಗ್ಯವೂ ಚೆನ್ನಾಗಿರುತ್ತದೆ. ಆರೋಗ್ಯಕರವಾಗಿ ಕೂದಲು ಬೆಳೆಯುತ್ತದೆ. ಕೂದಲ ಬುಡ ಬಲವಾಗಿ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
- ಇನ್ನು ಬಿಪಿ ಸಮಸ್ಯೆ, ಹೃದಯದ ಸಮಸ್ಯೆ ಇದ್ದವರು ಪ್ರತಿದಿನ ಅಂಜೂರ ಸೇವಿಸಿದರೆ, ಬಿಪಿ ಕಂಟ್ರೋಲಿನಲ್ಲಿರುತ್ತದೆ. ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ.




