Health Tips: ನೀವು ತುಂಬಾ ಜನ ಹೇಳಿರುವುದನ್ನು ಕೇಳಿರಬಹುದು. ಅನ್ನ ತಿಂದರೆ, ತೂಕ ಹೆಚ್ಚಾಗತ್ತೆ ಅಂತಾ. ಆದರೆ ಅದು ಸುಳ್ಳು. ಅನ್ನ ತಿಂದರೆ ತೂಕ ಹೆಚ್ಚಾಗುವುದಿಲ್ಲ. ಆದರೆ ಅನ್ನವನ್ನು ತಪ್ಪಾಗಿ ಬೇಯಿಸಿ ತಿಂದ್ರೆ, ಅಗತ್ಯಕ್ಕಿಂತ ಹೆಚ್ಚು ತಿಂದರೆ, ಮಸಾಲೆ ಪದಾರ್ಥದ ಜತೆ ತಿಂದರೆ ಖಂಡಿತ ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ನಾವು ಅನಾರೋಗ್ಯಕರವಾಗಿ ದಪ್ಪಗಾಗಬಾರದು ಅಂದ್ರೆ, ನಾವು ಅನ್ನವನ್ನು ಆರೋಗ್ಯಕರವಾಗಿ ಬೇಯಿಸಿ ತಿನ್ನಬೇಕು.
ನೀವು ತೂಕ ಇಳಿಸಬೇಕೆಂದಲ್ಲಿ ಬ್ರೌನ್ ರೈಸ್ ಸೇವಿಸಿ, ಬಿಳಿ ಅನ್ನದ ಸೇವನೆ ಬೇಡ. ಏಕೆಂದರೆ, ಬ್ರೌನ್ ರೈಸ್‌ನಲ್ಲಿ ಹೆಚ್ಚು ಫೈಬರ್ ಇದ್ದು, ಇದು ತೂಕ ಹೆಚ್ಚಿಸುವುದಿಲ್ಲ.
ಇನ್ನು ನೀವು ಬ್ರೌನ್ ರೈಸ್ ಬಳುವುದಿದ್ದರೂ, ಗಂಜಿ ಬಸಿದು ಸೇವಿಸಬೇಕು. ಅಂದ್ರೆ ಅನ್ನವನ್ನು ಕುಕ್ಕರ್‌ನಲ್ಲಿ ಬೇಯಿಸುವಂತಿಲ್ಲ. ಬದಲಾಗಿ, ಅನ್ನವನ್ನು ಪಾತ್ರೆಯಲ್ಲಿ ನೀರು ಹಾಕಿ ಬೇಯಿಸಿ, ಬಳಿಕ ಗಂಜಿ ತೆಗೆದು ತಿನ್ನಬೇಕು.
ಇನ್ನು ಅನ್ನ ಉಣ್ಣುವಾಗ ನೀವು ಬಿಸಿ ಬಿಸಿ ಅನ್ನ ಊಟ ಮಾಡುವುದಕ್ಕಿಂತ, ಅನ್ನ ತಣಿದ ಮೇಲೆ ಸೇವಿಸಬೇಕು. ಇದರಿಂದ ಬೇಗ ಹೊಟ್ಟೆ ತುಂಬುತ್ತದೆ. ಹಾಗಾಗಿ ಹೆಚ್ಚು ಊಟ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ತೂಕ ಇಳಿಯುತ್ತದೆ.