Health Tips: ಅನಾರೋಗ್ಯ ಎಂದರೆ, ದೇಹದಲ್ಲಾಗುವ ಬದಲಾವಣೆ. ಜ್ವರ, ಕೆಮ್ಮು, ನೆಗಡಿ, ದೇಹದ ಭಾಗಗಳಲ್ಲಿ ನೋವು ಹೀಗೆ ಇದೆಲ್ಲವನ್ನೂ ಅನಾರೋಗ್ಯ ಎನ್ನಲಾಗುತ್ತದೆ. ಆದರೆ ಮನುಷ್ಯನ ಮನಸ್ಸು ಸರಿ ಇಲ್ಲದಿದ್ದಲ್ಲಿ, ಅದು ಮಾನಸಿಕ ರೋಗವೇ ಸರಿ. ಕೋಪ ಮಾಡುವುದು ಕೂಡ ಮಾನಸಿಕ ಸಮಸ್ಯೆಯ 1 ಭಾಗ. ಹಾಗಾದ್ರೆ ಕೋಪ ಬರಬಾರದು ಅಂದ್ರೆ ನಮ್ಮನ್ನು ನಾವು ಹೇಗೆ ಸರಿಮಾಡಿಕ“ಳ್ಳಬೇಕು ಅಂತಾ ವೈದ್ಯರೇ ಹೇಳಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ, ಮಾನಸಿಕವಾಗಿ ಆರೋಗ್ಯವಾಗಿರುವ ವ್ಯಕ್ತಿ ತಾಳ್ಮೆಯಿಂದ ಇರುತ್ತಾನೆ. ಅಲ್ಲದೇ ನಮಗೆ ಶತ್ರುಗಳಿದ್ದರೆ, ಅದು ನಮ್ಮ ಮನಸ್ಸುಮ ಮಾತ್ರ ಎನ್ನುತ್ತಾರೆ ವೈದ್ಯರು. ಹಾಗಾಗಿ ಮನಸ್ಸನ್ನು ಹತೋಟಿಯಲ್ಲಿರಿಸಿ, ಯೋಚಿನಿ ನಿರ್ಧಾರ ತೆಗೆದುಕ“ಳ್ಳುವುದು, ಮಾತನಾಡುವುದೆಲ್ಲ ಮಾಡಿದರೆ ಮಾತ್ರ ನಾವು ತಾಳ್ಮೆಯಿಂದಿರಲು ಸಾಧ್ಯ. ನಮ್ಮ ಕೋಪ ಕಡಿಮೆಯಾಗಲು ಸಾಧ್ಯ.
ಮನುಷ್ಯ ಅಂದ ಮೇಲೆ ತಪ್ಪು ಮಾಡೋದು ಸಹಜ. ಆದರೆ ಆ ತಪ್ಪನ್ನು ತಿದ್ದಿಕ“ಳ್ಳುವ ಪ್ರಯತ್ನ ನಾವು ಮಾಡಬೇಕು. ಹಲವರ ಜೀವನದಲ್ಲಿ ಕಿಂಚಿತ್ತು ನೆಮ್ಮದಿಯೇ ಇರುವುದಿಲ್ಲ. ಕಾರಣ ಅವರು ತಮ್ಮ ತಪ್ಪನ್ನ ಸರಿಮಾಡಿಕ“ಳ್ಳುವ ಪ್ರಯತ್ನ ಮಾಡುವುದೇ ಇಲ್ಲ. ತಮ್ಮದೇ ಸರಿ ಎಂದು, ಅದೇ ನಡುವಳಿಕೆ ಮುಂದುವರಿಸುತ್ತಾರೆ. ಹಾಗಾಗಿ ಅವರಿಗೆ ನೆಮ್ಮದಿ ಸಿಗುವುದೇ ಇಲ್ಲ. ಇದರಿಂದಲೇ ಮಾನಸಿಕ ನೆಮ್ಮದಿ ಹಾಳಾಗಿ, ಕೋಪ ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.