Health Tips: ಎಳನೀರಿಗೂ ಕಂಡೀಶನ್? ಆರೋಗ್ಯಕ್ಕೆ ಎಳನೀರು ಒಳ್ಳೇದಾ? ಕೆಟ್ಟದಾ?

Health Tips: ಎಳನೀರು ಅಂದ್ರೆ ಅದು 1 ಆರೋಗ್ಯಕರ ಪೇಯ. ಆದರೆ ಅದು ಎಲ್ಲರಿಗೂ ಆರೋಗ್ಯಕರ ಪೇಯ ಅಲ್ಲ. ಹೌದು ಕೆಲ ಆರೋಗ್ಯ ಸಮಸ್ಯೆ ಇದ್ದವರು ಎಳನೀರಿನ ಸೇವನೆ ಮಾಡಬಾರದು. ಹಾಗಾದ್ರೆ ಯಾರು ಎಳನೀರಿನ ಸೇವನೆ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ಈ ಬಗ್ಗೆ ವಿವರಿಸಿದ್ದು, ಎಳನೀರು ದೇಹಕ್ಕೆ ಉತ್ತಮ. ಇದು ರುಚಿಕರವೂ ಹೌದು, ಆರೋಗ್ಯಕರವೂ ಹೌದು, ಶಕ್ತಿಯುತ ಪೇಯ ಕೂಡ ಹೌದು. ನೀವು ಮಾರುಕಟ್ಟೆಯಲ್ಲಿ ಸಿಗುವ ಎನರ್ಜಿ ಡ್ರಿಂಕ್ ಕುಡಿಯುವ ಬದಲು, ಪ್ರತೀದಿನ ನೀವು ಎಳನೀರು ಸೇವನೆ ಮಾಡಬಹುದು.

ಎಳನೀರು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ದೇಹದಲ್ಲಿ ನಿರ್ಜಲೀಕರಣ ಕಡಿಮೆ ಮಾಡಬಹುದು. ಆದರೆ ಕಿಡ್ನಿ ಸಮಸ್ಯೆ ಇದ್ದವರು ಎಳನೀರಿನ ಸೇವನೆ ಮಾಡಬಾರದು. ಬಿಪಿ, ಶುಗರ್ ಸಮಸ್ಯೆ ಇದ್ದರೂ ನೀವು ಎಳನೀರು ಸೇವಿಸಬಹುದು. ಆದರೆ ಕಿಡ್ನಿ ಸಮಸ್ಯೆ ಇದ್ದಾಗ ಮಾತ್ರ ನೀವು ಎಳನೀರಿನ ಸೇವನೆ ಮಾಡಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author