Health Tips: ಶಿಶುಗಳ ಆರೈಕೆ ಬಗ್ಗೆ ಡಾ.ಪ್ರಿಯ ಶಿವಳ್ಳಿ ಮಾಹಿತಿ ನೀಡಿದ್ದು, ಡೈಪರ್ ರ್ಯಾಶಸ್ ತಡೆಗಟ್ಟುವ ಬಗ್ಗೆ ಮಾತನಾಡಿದ್ದಾರೆ.
ಶಿಶುಗಳಿಗೆ ಪ್ರತಿದಿನ ಸ್ನಾನ ಮಾಡಿಸಲೇಬೇಕಿಲ್ಲ ಅಂತಾರೆ ವೈದ್ಯರು. ಮಕ್ಕಳ ತ್ವಚೆ ಸಾಫ್ಟ್ ಆಗಿರುವ ಕಾರಣ ವಾರದಲ್ಲಿ 3 ದಿನ ಮಾತ್ರ ಸ್ನಾನ ಮಾಡಿಸಬೇಕಾಗುತ್ತದೆ. ಮತ್ತು ಶಿಶುಗಳಿಗೆ ಸ್ನಾನ ಮಾಡಿಸುವಾಗ ಉಗುರು ಬೆಚ್ಚಗಿನ ನೀರು ಬಳಸಬೇಕು. ಹೆಚ್ಚು ಬಿಸಿ ಬಳಸಿದ್ದಲ್ಲಿ ಮಗುವಿನ ತ್ವಚೆಗೆ ಹಾನಿಯಾಗುತ್ತದೆ. ಅಲ್ಲದೇ ಮಾಯಿಶ್ಚರೈಸರ್, ಕ್ರೀಮ್, ಸೋಪ್ ಏನೇ ಬಳಸುವುದಿದ್ದರೂ ಅದು ಮಗುವಿನ ತ್ವಚೆಗೆ ಹಾರ್ಶ್ ಆಗದಂತೆ ನೋಡಿಕ“ಳ್ಳಿ.
ಸ್ನಾನ ಮಾಡಿಸಿದ ತಕ್ಷಣ ಶಿಶುವಿನ ದೇಹ ತೆವವಾಗಿರಲು ಮಾಯಿಶ್ಚರೈಸಿಂಗ್ ಕ್ರೀಮ್ ಅಥವಾ ವೈದ್ಯರು ಸೂಚಿಸಿದ ಎಣ್ಣೆ, ಕ್ರೀಮ್ ಏನಾದರೂ ಬಳಸಿದರೆ ಉತ್ತಮ. ಇನ್ನು ಡೈಪರ್ ಬಳಸುವಾಗಲೂ ಆ ಜಾಗದಲ್ಲಿ ಕ್ರೀಮ್ ಹಚ್ಚಿ, ಬಳಿಕ ಡೈಪರ್ ಹಾಕುವುದು ಉತ್ತಮ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

