Health Tips: ಕಣ್ಣು ಕೆಂಪಾಗಿ ನೋವಾಗುತ್ತಿದ್ದರೆ, ಸಾಮಾನ್ಯವಾಗಿ ಜನ ಅದನ್ನು ಕಣ್ ಬಂದಿದೆ ಅಂತಾ ಆಡು ಭಾಷೆಯಲ್ಲಿ ಹೇಳುತ್ತಾರೆ. ಹಾಗಾದಾಗ ಅಂಥವರು ಮನೆಯಲ್ಲೇ ಇರಬೇಕು. ಚಿಕಿತ್ಸೆ ಪಡೆದು ಆರಾಮವಾದ ಬಳಿಕವಷ್ಟೇ ಆಚೆ ಬರಬೇಕು ಅಂತಾರೆ. ಏಕೆಂದರೆ, ಅವರ ಕಣ್ಣು ನೋಡಿದ್ರೆ, ಬೇರೆಯವರಿಗೂ ಆ ನೋವು ಬರುತ್ತದೆ. ಹೀಗಾದಾಗ ಕೆಲ ವಿಷಯಗಳನ್ನು ನಾವು ಗಮನದಲ್ಲಿರಿಸಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ನಿಮಗೆ ಕಣ್ಣಿನ ನೋವು ಬಂದ್ರೆ, ಅದು ಕಡಿಮೆಯಾಗಲು 1 ವಾರವಾದ್ರೂ ಬೇಕು. ಹಾಗಾಗಿ ನೀವು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರೂ, ಮನೆಯಲ್ಲೇ ಮದ್ದು ಮಾಡುವುದಾದರೆ, ನೀವು ಪದೇ ಪದೇ ತಣ್ಣೀರಿನಿಂದ ನಿಮ್ಮ ಕಣ್ಣನ್ನು ಕ್ಲೀನ್ ಮಾಡಬೇಕು. ಆ ನೀರಿನಲ್ಲಿ 2 ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿ, ಮುಖ ವಾಶ್ ಮಾಡಿದರೆ, ನಿಮ್ಮ ಕಣ್ಣಿನಲ್ಲಾಗುವ ಕಿರಿಕಿರಿಯಿಂದ ಮುಕ್ತಿ ಸಿಗುತ್ತದೆ.
ಅಲ್ಲದೇ, ದಿನಕ್ಕೆ 4 ಬಾರಿ ನಿಮ್ಮ ಕಣ್ಣಿಗೆ ರೋಸ್ ವಾಟರ್ ಹಾಕುವುದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಆದರೆ ನೀವು ಈ ಮನೆಮದ್ದು ಬಳಸುವ ಮುನ್ನ ಅಥವಾ ಈ ಮನೆಮದ್ದಿನಿಂದ ನಿಮಗೆ ಅಲರ್ಜಿಯಾಗುತ್ತದೆ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸುವುದು ಉತ್ತಮ.