Health Tips: ತುಪ್ಪದ ಸೇವನೆಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಅದು ಆರೋಗ್ಯಕ್ಕೆ ಉತ್ತಮವಲ್ಲ ಅನ್ನೋ ಭ್ರಮೆ ಹಲವರಲ್ಲಿ ಇತ್ತು. ಆದರೆ ಇದೀಗ ತುಪ್ಪದ ಲಾಭವೇನು ಅನ್ನೋದು ಹಲವರಿಗೆ ತಿಳಿದಿದೆ. ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ತಪ್ಪಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ, ನಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾದ್ರೆ ತುಪ್ಪದ ಸೇವನೆ ಹೇಗೆ ಮಾಡಬೇಕು ಎಂದು ತಿಳಿಯೋಣ ಬನ್ನಿ..
ನಿಮ್ಮ ದೇಹದ ತೂಕ ಹೆಚ್ಚೂ ಆಗಬಾರದು, ಕಡಿಮೆ ಆಗಬಾರದು, ಸರಿಯಾಗಿ ಇರಬೇಕು ಅಂದ್ರೆ, ಪ್ರತಿದಿನ 1 ಸ್ಪೂನ್ ತುಪ್ಪವನ್ನು ಉಗುರು ಬೆಚ್ಚಗಿನ ನೀರಿಗೆ ಹಾಕಿ, ತಿಂಡಿಗೂ ಮುನ್ನ ಕುಡಿಯಿರಿ. ಇದರಿಂದ ತೂಕ ಸರಿಯಾಗಿ ಇರುತ್ತದೆ.
ಇನ್ನು ನೆನಪಿನ ಶಕ್ತಿ ಚೆನ್ನಾಗಿರಬೇಕು, ಓದಿದ್ದೆಲ್ಲ ನೆನಪಿರಬೇಕು ಅಂದ್ರೆ ಪ್ರತಿದಿನ 1 ಸ್ಪೂನ್ ತುಪ್ಪವನ್ನು ಮಕ್ಕಳ ಆಹಾರಕ್ಕೆ ಬೆರೆಸಿ ನೀಡಿ. ಇದರ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಅಲ್ಲದೇ ಪ್ರತಿದಿನ 1 ಸ್ಪೂನ್ ತುಪ್ಪದ ಸೇವನೆಯಿಂದ ನಿಮ್ಮ ತ್ವಚೆ ಮತ್ತು ಕೂದಲ ಸೌಂದರ್ಯ ಚೆನ್ನಾಗಿರುತ್ತದೆ. ಕೂದಲ ಬುಡವೂ ಧೃಡವಾಗುತ್ತದೆ. ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೇ, ಮುಖದ ಮೇಲೆ ಹೆಚ್ಚು ಗುಳ್ಳೆಗಳಾಗುವುದಿಲ್ಲ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ, ನೀವು ತುಪ್ಪದ ಸೇವನೆ ಮಾಡಬೇಕು. ಗರ್ಭಿಣಿಯರಿಗೆ ತುಪ್ಪ ತಿನ್ನಿಸಲಾಗುತ್ತೆ. ಇದಕ್ಕೆ ಕಾರಣ, ತಾಯಿ ಮತ್ತು ಮಗುವಿನ ಮೂಳೆ ಗಟ್ಟಿಯಾಗುತ್ತದೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಕೂದಲ ಬುಡ ಗಟ್ಟಿಯಾಗುತ್ತದೆ. ಮಗುವಿನ ಮತ್ತು ತಾಯಿಯ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಗರ್ಭಿಣಿಗೆ ತುಪ್ಪ ಸೇವಿಸಲು ಹೇಳಲಾಗುತ್ತದೆ.
ಇನ್ನು ತುಪ್ಪ ಹೇಗೆ ಬಳಸಬೇಕು ಅಂದ್ರೆ, ತುಪ್ಪವನ್ನು ಹೆಚ್ಚು ಬಿಸಿ ಮಾಡಬೇಡಿ. ಬಿಸಿ ಮಾಡಿದ ತಕ್ಷಣ ಏನಾದರೂ ಹುರಿಯುವುದಿದ್ದರೆ ಹುರಿಯಬಹುದು. ಆದರೆ ಅದನ್ನೇ ಹೆಚ್ಚು ಬಿಸಿ ಮಾಡಬಾರದು. ಇನ್ನು ತುಪ್ಪ ಬಿಸಿ ಮಾಡಿ ಅದರಲ್ಲಿ ಪದಾರ್ಥಗಳನ್ನು ಕರಿದು ತಿನ್ನಬಾರದು. ಅಲ್ಲದೇ, ದಿನಕ್ಕೆ 1ರಿಂದ 2 ಸ್ಪೂನ್ ತುಪ್ಪ ಸೇವಿಸಬಹುದು. ಇನ್ನು ತುಪ್ಪ ತಿಂದರೆ, ಅಲರ್ಜಿ ಎಂದರೆ, ವೈದ್ಯರನ್ನು ವಿಚಾರಿಸಿ, ಸೇವಿಸುವುದು ಉತ್ತಮ.